ಫ್ಯಾಕ್ಟ್‌ಚೆಕ್ : ಮುಸ್ಲಿಮರು ಚಲಿಸುತ್ತಿದ್ದ ರೈಲಿನ ಕೆಳಗೆ ಗ್ಯಾಸ್ ಸಿಲಿಂಡರ್‌ ಎಸೆದು ಓಡಿ ಹೋಗಿದ್ದಾರೆ ಎಂಬುದು ಸುಳ್ಳು

ಒಡಿಶಾ ರೈಲು ಅಪಘಾತದಲ್ಲಿ ಸುಮಾರು 300 ಜನ ಸಾವನಪ್ಪಿ  800 ಕ್ಕೂ ಹೆಚ್ಚು ಮಂದಿ ಗಾಯಗೊಂಡು ಶತಮಾನದ ಭೀಕರ ರೈಲು ದುರಂತ ಎಂಡು ಇತಿಹಸದಲ್ಲಿ ದಾಖಲಾಗಿದೆ. ಈ ಘಟನೆ ನಡೆದ ಬೆನ್ನಲ್ಲೆ ಸಾಮಾಜಿಕ ಮಾಧ್ಯಮಗಳಲ್ಲಿ ರೈಲು ಅಪಘಾತದ ಬೇರೆ ಬೇರೆ ವಿಡಿಯೋಗಳು ವೈರಲ್ ಆಗುತ್ತಿವೆ.

ವೈರಲ್ ವಿಡಿಯೋವೊಂದರಲ್ಲಿ ಛಿದ್ರಗೊಂಡ ಗ್ಯಾಸ್ ಸಿಲಿಂಡರ್ ಅನ್ನು ರೈಲ್ವೇ ಹಳಿಗಳಿಂದ ಹೊರತೆಗೆಯಲಾಗುತ್ತಿರುವ ದೃಶ್ಯಗಳು ವ್ಯಾಪಕವಾಗಿ ಪ್ರಸಾರವಾಗುತ್ತಿವೆ. ಈ ಘಟನೆಯು ದೇಶದ ಅನೇಕ ಸ್ಥಳಗಳಲ್ಲಿ ರೈಲು ಅಪಘಾತಗಳನ್ನು ಉಂಟುಮಾಡುವ ದೊಡ್ಡ ಪಿತೂರಿಗೆ ಸಂಬಂಧಿಸಿರಬಹುದು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಆರೋಪಿಸಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಇಲ್ಲಿ ನೋಡಿ ಇವತ್ತು ಉತ್ತರಾಖಂಡ ದಲ್ಲಿ ಅನಾಹುತ ನಡದೇಹೋಗುತ್ತಿತ್ತು, ಚಲಿಸುವ ಟ್ರೈನ್ ಕೆಳಗೆ ತುಂಬಿದ ಸಿಲಿಂಡರ್ ಗ್ಯಾಸ್ ಎಸೆದು ಓಡಿ ಹೋದ ದೇಶದ್ರೋಹಿಗಳು. ಏನೋ ಪ್ಲ್ಯಾನಿಂಗ್ ನಡೆಯುತ್ತಿದೆ 2024 ರಲ್ಲಿ ಮೋದಿ ಅವರನ್ನ ಸೋಲಿಸುವುದಕ್ಕೆ. ಎಂಬ ಪ್ರತಿಪಾದನೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಈ ವಿಡಿಯೋ ಪೋಸ್ಟ್‌ನಲ್ಲಿ ಮುಸ್ಲಿಮರು ಪಿತೂರಿ ನಡೆಸಿ 2024ಕ್ಕೆ ಮೋದಿಯನ್ನು ಸೋಲಿಸಲು ಎಲ್ಲಕಡೆಗಳಲ್ಲಿ ಇಂತಹ ವಿಧ್ವಂಸಕ ಕೃತ್ಯವನ್ನು ಎಸಗುತ್ತಿದ್ದಾರೆ, ಅದರ ಭಾಗವಾಗಿ ಉತ್ತರಾಖಂಡದ ಹಲ್ದ್ವಾನಿಯಲ್ಲಿ ಇತ್ತೀಚೆಗೆ ಮುಸ್ಲಿಂ ವ್ಯಕ್ತಿಯೊಬ್ಬ ಚಲಿಸುತ್ತಿರುವ ರೈಲಿಗೆ ಸಿಲಿಂಡರ್ ಎಸೆದಿದ್ದಾನೆ ಎಂದು ಪೋಸ್ಟ್‌ನಲ್ಲಿ ಹಂಚಿಕೊಂಡ ಪ್ರತಿಪಾದನೆಯನ್ನು ಪರಿಶೀಲಿಸಲಾಗಿದೆ.

https://twitter.com/ajaychauhan41/status/1665730170366439424?ref_src=twsrc%5Etfw%7Ctwcamp%5Etweetembed%7Ctwterm%5E1665735305935089664%7Ctwgr%5E15e2f47902d7083cf031260766728a12201b5036%7Ctwcon%5Es2_&ref_url=https%3A%2F%2Ffactly.in%2Funrelated-old-videos-shared-as-recent-visuals-of-muslims-and-anti-modi-groups-vandalizing-railway-tracks-and-trains%2F

ವಿಡಿಯೋದ ಕೀ ಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಘಟನೆಯ ಕುರಿತು ಇತ್ತೀಚೆಗೆ ‘ಇಟಿವಿ ಭಾರತ್’ ಪ್ರಕಟಿಸಿದ ಲೇಖನ ಲಭ್ಯವಾಗಿದೆ. ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದ ಒಂದು ವರ್ಷದ ಹಿಂದಿನ ಘಟನೆಯನ್ನು ವಿಡಿಯೋ ತೋರಿಸುತ್ತದೆ ಎಂದು ‘ಇಟಿವಿ ಭಾರತ್’ ವರದಿ ಮಾಡಿದೆ. ಇತ್ತೀಚೆಗೆ, ಈಶಾನ್ಯ ರೈಲ್ವೆ ಸಂರಕ್ಷಣಾ ಪಡೆ ಟ್ವೀಟ್ ಅನ್ನು ಪ್ರಕಟಿಸಿತು ಮತ್ತು ಘಟನೆ ಜುಲೈ 2022 ರಲ್ಲಿ ನಡೆದಿದೆ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ ಆರೋಪಿಯನ್ನು ಗಂಗುರಾಮ್ ಎಂದು ಉಲ್ಲೇಖಿಸಿದೆ. ಘಟನೆಯ ಅಪರಾಧಿ ಮುಸ್ಲಿಂ ಅಲ್ಲ ಎಂದು ಖಚಿತಪಡಿಸಿದೆ.

ಈಶಾನ್ಯ ರೈಲ್ವೆಯ ಇಜ್ಜತ್‌ನಗರ ವಿಭಾಗದ ರೈಲ್ವೇ ಸಂರಕ್ಷಣಾ ಪಡೆಗೆ ಸಂಬಂಧಿಸಿದ ಟ್ವಿಟರ್ ಹ್ಯಾಂಡಲ್, @ajaychauhan41 ರ ಪಿತೂರಿಯ ಎಂಬ ಪ್ರತಿಪಾದನೆಯನ್ನು ನಿರಾಕರಿಸಿರುವುದನ್ನು ಟ್ವೀಟ್‌ನಲ್ಲಿ ಗಮನಿಸಬಹುದು. ಈ ವೀಡಿಯೊ ಜುಲೈ 5, 2022 ರಂದು ನಡೆದ ಘಟನೆಯದ್ದಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಗಂಗಾರಾಮ್ ಅವರನ್ನು ರೈಲ್ವೆ ಕಾಯ್ದೆಯ ಸೆಕ್ಷನ್ 174, 153 ರ ಅಡಿಯಲ್ಲಿ ಸೆಕ್ಷನ್-131/22 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಆಲ್ಟ್‌ನ್ಯೂಸ್‌ಗೆ ಮಾಹಿತಿ ನೀಡಿರುವ ಕತ್ಗೊಡಮ್‌ನ ಆರ್‌ಪಿಎಫ್ ಇನ್ಸ್‌ಪೆಕ್ಟರ್ ಚಂದ್ರಪಾಲ್ ಸಿಂಗ್, ವೈರಲ್ ಕ್ಲಿಪ್ ಅನ್ನು ಟ್ವೀಟ್ ಮಾಡಿದ್ದಾರೆ ಮತ್ತು ಇದು ಹಳೆಯ ವೀಡಿಯೊ ಎಂದು ಸ್ಪಷ್ಟಪಡಿಸಿದ್ದಾರೆ. ಗಂಗಾರಾಮ್ ವಿರುದ್ಧ ದೂರು ದಾಖಲಾಗಿದ್ದು, ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಬಾಕಿ ಇದೆ ಎಂದು ತಿಳಿಸಿದರು.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಪೋಸ್ಟ್‌ನಲ್ಲಿ ಹೇಳಿರುವಂತೆ ಆರೋಪಿ ಮುಸ್ಲಿಮನಲ್ಲ, ಮುಸ್ಲಿಂ ಎಂಬ ಹೇಳಿಕೆಯನ್ನು ನಿರಾಕರಿಸಿದ್ದಾರೆ. “ಆರೋಪಿ  ಹೆಸರು ಗಂಗಾರಾಮ್ ಮತ್ತು ಅವನ ತಂದೆಯ ಹೆಸರು ಬಿಹಾರಿಲಾಲ್. ಈ ಘಟನೆಯು ಜುಲೈ 5, 2022 ರಂದು ಸಂಭವಿಸಿತು. ಆರೋಪಿಯು ತನ್ನ ಖಾಲಿ ಗ್ಯಾಸ್ ಸಿಲಿಂಡರ್ ತುಂಬಿಸಲು ತನ್ನ ಮನೆಯಿಂದ ಹೊರಟಿದ್ದ. ರೈಲ್ವೇ ಹಳಿ ದಾಟುತ್ತಿದ್ದಾಗ ಆ ರೈಲು ಬರುತ್ತಿರುವುದನ್ನು ಕಂಡು ಗಾಬರಿಯಿಂದ, ಸಿಲಿಂಡರ್ ಅನ್ನು ಹಳಿಗಳ ಮೇಲೆಯೇ ಬಿಟ್ಟು ಗಂಗಾರಾಮ್ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ.

ರೈಲು ನಿಂತ ನಂತರ ರೈಲಿನಲ್ಲಿದ್ದ ಆರ್‌ಪಿಎಫ್ ಬೆಂಗಾವಲು ಅವನನ್ನು ಹಿಡಿದ್ದಾರೆ. ಆರೋಪಿಯು ಉತ್ತರ ಪ್ರದೇಶದ ಪಿಲಿಭಿತ್ ನಿವಾಸಿಯಾಗಿದ್ದು, ಉತ್ತರಾಖಂಡದ ಗೌಲಾ ನದಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು ಮತ್ತು ಈ ಹಿಂದೆ ಯಾವುದೇ ಅಪರಾಧದ ಹಿನ್ನಲೆಯನ್ನು ಹೊಂದಿರಲಿಲ್ಲ. ಹಾಗಾಗಿ ಆತನನ್ನು ಬಂಧಿಸಿ ಸುಮಾರು ಎರಡು ತಿಂಗಳ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಎಂದು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಗಂಗಾರಾಮ್ ಎಂಬ ವ್ಯಕ್ತಿ ಖಾಲಿ ಸಿಲಿಂಡರ್ ಹೊತ್ತುಕೊಂಡು ಹಳಿ ದಾಟುತ್ತಿದ್ದ. ಆ ಮಾರ್ಗದಲ್ಲಿ ರೈಲು ಬರುತ್ತಿದ್ದಂತೆ ಸಿಲಿಂಡರ್ ಅನ್ನು ಹಳಿಗಳ ಮೇಲೆ ಬಿಟ್ಟು ತನ್ನನ್ನು ರಕ್ಷಿಸಿಕೊಳ್ಳಲು ಧಾವಿಸಿದ. ಇದು ಜುಲೈ 5, 2022 ರಿಂದ ನಡೆದ ಘಟನೆಯಾಗಿದೆ. ಆರೋಪಿಯು ಉತ್ತರಾಖಂಡದ ಕಾರ್ಮಿಕನಾಗಿದ್ದು, ಯಾವುದೇ ಕ್ರಿಮಿನಲ್ ಹಿನ್ನಲೆ ಇಲ್ಲ.

ಆದರೆ ಇದನ್ನು ತಿರುಚಿ, ಚಲಿಸುವ ಟ್ರೈನ್ ಕೆಳಗೆ ತುಂಬಿದ ಸಿಲಿಂಡರ್ ಗ್ಯಾಸ್ ಎಸೆದು ಓಡಿ ಹೋದ ದೇಶದ್ರೋಹಿಗಳು. ಎಂದು ಸಂಬಂಧವಿಲ್ಲದ ವಿಡಿಯೋವನ್ನು ಹಂಚಿಕೊಂಡು ಮುಸ್ಲಿಮರನ್ನು ಅಪರಾಧಿಗಳನ್ನಾಗಿಸುವ ದುರುದ್ದೇಶದಿಂದ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ಆಲ್ಟ್‌ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಕರ್ನಾಟಕದ ಮುಸ್ಲಿಮರು ಮಕ್ಕಳನ್ನು ಬಳಸಿಕೊಂಡು ರೈಲು ಅಪಘಾತಕ್ಕೆ ಸಂಚು ರೂಪಿಸಿದ್ದಾರೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights