ಫ್ಯಾಕ್ಟ್‌ಚೆಕ್: ಶೌಚಾಲಯಕ್ಕೂ ಫೋಟೊಗ್ರಾಫರ್‌ನನ್ನು ಕರೆದುಕೊಂಡು ಹೋಗುವರೇ ಪ್ರಧಾನಿ ಮೋದಿ?
ಪ್ರಧಾನಿ ಮೋದಿಯವರು ವಾಷಿಂಗ್ ಬೇಸನ್‌ನಲ್ಲಿ ಕೈತೊಳೆಯುತ್ತಿರುವ ಪೋಟೋವೊಂದು ವೈರಲ್ ಆಗಿದ್ದು, ಮೋದಿ ಈಗ ತಮ್ಮ ಕ್ಯಾಮರಾಮನ್‌ನನ್ನು ಟಾಯ್ಲೆಟ್‌ಗೂ ಜೊತೆಯಲ್ಲಿ ಕರೆದುಕೊಂಡು ಹೋಗಿ ಫೋಟೋ ತೆಗೆಸಿಕೊಳ್ಳುತ್ತಾರೆ ಎಂಬ ಹೇಳಿಕೆಯೊಂದಿಗೆ ಫೋಟೊವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
“ಪ್ರಧಾನಿ ಮೋದಿಯವರು ಶೌಚಾಲಯದೊಳಗೆ ತಮ್ಮ ಕೈಗಳನ್ನು ಸ್ವಚ್ಛಗೊಳಿಸುತ್ತಿರುವ ದೃಶ್ಯವನ್ನು ಛಾಯಾಗ್ರಾಹಕರು ಸೆರೆಹಿಡಿದಿದ್ದಾರೆ ” ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಫೋಟೊವನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, 20 ಡಿಸೆಂಬರ್ 2020 ರಂದು ‘ದಿ ಫ್ರೀ ಪ್ರೆಸ್ ಜರ್ನಲ್‘ ಪ್ರಕಟಿಸಿದ ಲೇಖನದಲ್ಲಿ ಇದೇ ಫೋಟೋ ಲಭ್ಯವಾಗಿದೆ. ಈ ಲೇಖನದ ಪ್ರಕಾರ, ಈ ಚಿತ್ರಗಳನ್ನು ಪ್ರಧಾನಿ ಮೋದಿ ಗುರುದ್ವಾರಕ್ಕೆ ಭೇಟಿ ನೀಡಿದಾಗ ಸೆರೆಹಿಡಿದಿರುವ ಚಿತ್ರ. ದೆಹಲಿಯ ರಾಕಬ್ ಗಂಜ್ ಸಾಹಿಬ್ ಗುರು ತೇಗ್ ಬಹದ್ದೂರ್ ಅವರ 400 ನೇ ಪ್ರಕಾಶ್ ಪರ್ವ್ ಸಂದರ್ಭದಲ್ಲಿ ಈ ಫೋಟೋಗಳನ್ನು ಕ್ಲಿಕ್ಕಿಸಲಾಗಿದೆ. ಆದರೆ ಈ ಚಿತ್ರದಲ್ಲಿ, ಮೋದಿ ತಮ್ಮ ಕೈಗಳನ್ನು ಸ್ವಚ್ಛಗೊಳಿಸುವ ವಾಷಿಂಗ್ ಬೇಸಿನ್ ಪಕ್ಕದಲ್ಲಿ ಮೆಟ್ಟಿಲುಗಳನ್ನು ನೋಡಬಹುದು.

ಮೇಲಿನ ಕ್ಲೂಗಳನ್ನು ತೆಗೆದು ಮತ್ತಷ್ಟು ಸರ್ಚ್ ಮಾಡಿದಾಗ 2020 ರ ಡಿಸೆಂಬರ್‌ನಲ್ಲಿ ದೆಹಲಿಯ ಗುರುದ್ವಾರ ರಕಬ್ ಗಂಜ್ ಸಾಹಿಬ್‌ನ ಪ್ರವೇಶದ್ವಾರದಲ್ಲಿ ಪಿಎಂ ಮೋದಿ ಕೈ ತೊಳೆಯುತ್ತಿದ್ದಾಗ ಈ ಚಿತ್ರವನ್ನು ತೆಗೆಯಲಾಗಿದೆ. ಈ ಗುರುದ್ಯಾರದಲ್ಲಿ ಸಾರ್ವಜನಿಕವಾಗಿ ಕೈ ತೊಳೆಯುವ ಪ್ರದೇಶವಾಗಿದ್ದು, ಗುರುದ್ವಾರಕ್ಕೆ ಪ್ರವೇಶಿಸುವ ಮೊದಲು ಭಕ್ತರು ಕೈಕಾಲು ತೊಳೆಯುತ್ತಾರೆ, ಇದು ಸಾಮಾನ್ಯ ಅಭ್ಯಾಸವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಪ್ರಧಾನಿ ಮೋದಿಯವರು ಗುರುದ್ವಾರದ ಪ್ರವೇಶದ್ವಾರದಲ್ಲಿ ಕೈ ತೊಳೆಯುತ್ತಿರುವ ಚಿತ್ರವನ್ನು, ಶೌಚಾಲಯದೊಳಗೆ ತಮ್ಮ ಕ್ಯಾಮರಾಮನ್ ಕೂಡ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಯೋಗ ಶಕ್ತಿಯಿಂದ ಹಕ್ಕಿಯಂತೆ ಹಾರುವ ಮನುಷ್ಯ! ವಾಸ್ತವವೇನು?

