ಫ್ಯಾಕ್ಟ್‌ಚೆಕ್: ಮೊಬೈಲ್ ಟವರ್ ಅಳವಡಿಕೆ ಕೇಂದ್ರ ಸರ್ಕಾರದ ಹೆಸರಿನಲ್ಲಿ ನಕಲಿ ಪತ್ರ

ಡಿಜಿಟಲ್ ಇಂಡಿಯಾ ವೈ ಫೈ ನೆಟ್ವರ್ಕ್ ಕಂಪನಿ ಅಡಿಯಲ್ಲಿ ಕೇಂದ್ರ ಸರ್ಕಾರ ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿದೆ ಎಂಬ ಜಾಹಿರಾತೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು ಹಲವರು ಅದನ್ನು ಹಂಚಿಕೊಂಡಿದ್ದಾರೆ. ವೈರಲ್ ಪೋಸ್ಟ್‌ರ್‌ನಲ್ಲಿ ಡಿಜಿಟಲ್ ಇಂಡಿಯಾ ವೈಫೈ ನೆಟ್ವರ್ಕ್ ಅಡಿಯಲ್ಲಿ ಮೊಬೈಲ್ ಟವರ್ ನಿರ್ವಹಣೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ, ಮೊಬೈಲ್ ಟವರ್ ನಿರ್ವಣೆಗೆ ರೂ 25000 ಹಣವನ್ನು ಪ್ರತಿ ತಿಂಗಳು ನೀಡಲಾಗುವುದು ಎಂದು  ಒಪಂದದ ಪತ್ರದಲ್ಲಿ ಭರವಸೆ ನೀಡಿದೆ.

ಆಸಕ್ತಿ ಇರುವವರು ಅರ್ಜಿಯೊಂದಿಗೆ ನೊಂದಣಿ ಶುಲ್ಕ 730 ರೂಪಾಯಿಯನ್ನು ಪಾವತಿಸಬೇಕು ಎಂದು ಒಪಂದದ ಪತ್ರದಲ್ಲಿ ತಿಳಿಸಿದೆ. ಅರ್ಜಿ ಸಲ್ಲಿಸಲ್ಲು ಇಚ್ಚಿಸುವವರು ಕನಿಷ್ಠ 10ನೇ ತರಗತಿ ಪಾಸ್‌ಆಗಿರಬೇಕು ಎಂದು ಪತ್ರದಲ್ಲಿ ಹೇಳಲಾಗಿದೆ. ಹಾಗಿದ್ದರೆ ಕೇಂದ್ರ ಸರ್ಕಾರ ಸ್ಥಾಪಿಸಲು ಉದ್ದೇಶಿಸಿರುವ ವೈಫೈ ಟವರ್  ನಿರ್ವಹಣೆ ಮಾಡುವವರಿಗೆ ಸರ್ಕಾರ 25000 ಪಾವತಿಸುತ್ತದೆ ಎಂದು ಹೇಳಿದೆ. ಈ ವೈರಲ್ ಆಗಿರುವ ಒಪ್ಪಂದದ ಪತ್ರದಲ್ಲಿ ಇರುವಂತೆ  ಟವರ್ ನಿರ್ವಹಣೆಗಾಗಿ ತಿಂಗಳಿಗೆ 25000 ಹಣ ನೀಡುತ್ತದೆ ಎಂಬುದು ನಿಜವೇ? ಎಂದು  ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವೈರಲ್ ಪೋಸ್ಟ್‌ನಲ್ಲಿ ಹೇಳಿರುವ ಡಿಜಿಟಲ್ ಇಂಡಿಯಾ ವೈಫೈ ನೆಟ್ವರ್ಕ್ ಅಡಿಯಲ್ಲಿ ಟವರ್‌ಗಳನ್ನು ಕೇಂದ್ರ ಸರ್ಕಾರ ಸ್ಥಾಪಿಸಲು ಉದ್ದೇಶಿಸಿದೆ ಎಂಬುದು ಸುಳ್ಳು ಎಂದು PIB ವರದಿ ಮಾಡಿದೆ. ಕೇಂದ್ರ ಸರ್ಕಾರದ ಹೆಸರಿನಲ್ಲಿ ನಕಲಿ ಒಪ್ಪಂದ ಪತ್ರವೊಂದು ವೈರಲ್ ಆಗಿದ್ದು  ಕೇಂದ್ರ ಸರ್ಕಾರ  ಡಿಜಿಟಲ್ ಇಂಡಿಯಾ ಯೋಜನೆಯ ಅಡಿಯಲ್ಲಿ ವೈಫೈ ನೆಟ್ವರ್ಕ್ ಟವರ್‌ಗಳನ್ನು ಅಳವಡಿಸುವ ಕುರಿತು ಅಧಿಕೃತವಾಗಿ ಒಪಂದದ ಪತ್ರವನ್ನು ಪ್ರಕಟಿಸಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಹಿಂದೆಯೂ ಇದೆ ರೀತಿ ಮೊಬೈಲ್ ನೆಟ್ವರ್ಕ್ ಇನ್ಸ್ಟಾಲ್ ಮಾಡುತ್ತೇವೆ, ಅದಕ್ಕಾಗಿ ನಿಮ್ಮ ಜಾಗಕ್ಕೆ ಮತ್ತು ಟವರ್ ನಿರ್ವಹಣೆಗೆ ಕಂಪನಿ ವತಿಯಿಂದ 10 ಲಕ್ಷದವರೆಗೆ ಹಣ ಪಾವತಿ ಮಾಡಲಾಗುವುದು ಎಂದು ಜಾಹಿರಾತುಗಳನ್ನು ನೀಡಿದ್ದವು,  ಅರ್ಜಿ ಸಲ್ಲಿಸುವ ವ್ಯಕ್ತಿಯು ನೊಂದಣಿ, ಜಿಎಸ್‌ಟಿ ಮತ್ತು ಠೇವಣಿಯ ಕಾರಣಕ್ಕೆ ಒಂದು ಲಕ್ಷ ಹಣವನ್ನು ಮುಂಗಡವಾಗಿ ನೀಡಬೇಕು ಎಂದು ಹೇಳಿ ಹಣ ಪಾವತಿಸಿದ ನಂತರ ಕಂಪನಿಯವರು ತಮ್ಮ ಮೊಬೈಲ್ ಸ್ವಿಚ್ಡ್‌ಆಫ್ ಮಾಡಿಕೊಂಡ ಪ್ರಕರಣಗಳು ವರದಿಯಾಗಿವೆ ಅವುಗಳನ್ನು ಇಲ್ಲಿ ನೋಡಬಹುದು.

ಮೊಬೈಲ್ ಟವರ್  ಅಳವಡಿಸುವುದಾಗಿ ನಂಬಿಸಿ ಮೋಸ ಮಾಡಿದ ಪ್ರಕರಗಳನ್ನು ಇಲ್ಲಿ ನೋಡಬಹುದು.

ಜಗತ್ತು ಡಿಜಿಟಲ್ ದುನಿಯಾ ಕಡೆಗೆ ವಾಲುತ್ತಿರುವ ಸಂದರ್ಭದಲ್ಲಿ ಡಿಜಿಟಲ್ ಮೋಸಗಳು ಹೆಚ್ಚಾಗುತ್ತಿವೆ. ಹಲವು ಬಾರಿ ನಮ್ಮ ಮೊಬೈಲ್‌ಗಳಿಗೆ “ನಿಮ್ಮ ನಂ ಇಷ್ಟು ಕೋಟಿ ಹಣವನ್ನು ಗೆದ್ದಿದೆ ನಿಮ್ಮ ಲಕ್ಕಿ ನಂ ಗೆ ಹಣ ಬಂದಿದ್ದು ಅದನ್ನು ಪಡೆಯಬೇಕೆಂದರೆ ಈ ಕೆಳಗೆ ನೀಡಿರುವ ನಂಬರ್‌ಗೆ ಕರೆ ಮಾಡಿ ಎಂಬ ಸಂದೇಶಗಳು ಬರುತ್ತಿರುತ್ತವೆ. ಇದನ್ನು ಸತ್ಯವೆಂದು ನಂಬಿ ಕೆಲವು ಶಿಕ್ಷಿತರೂ ಸಹ ಮೋಸ ಹೋಗಿರುವ ಘಟನೆಗಳು ನಮ್ಮ ನಡುವೆ ಉದಾಹರಣೆಯಾಗಿ ಸಿಗುತ್ತವೆ.

ಕೇಂದ್ರ ಸರ್ಕಾರದ ಹೆಸರಿನಲ್ಲಿ ಡಿಜಿಟಲ್ ಇಂಡಿಯಾ ವೈಫೈ ನೆಟ್ವರ್ಕ್ ಟವರ್ ಅಳವಡಿಸುವ ಯೋಜನೆಯ ಒಪ್ಪಂದ ಪತ್ರವು ನಕಲಿಯಾಗಿದೆ ಎಂಬುದನ್ನು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ( Press information Bureau) PIB ತನ್ನ ಅಧಿಕೃತ ಟ್ವಟರ್ ಹ್ಯಾಂಡಲ್ ಮೂಲಕ ಸ್ಪಷ್ಟ ಪಡಿಸಿದೆ.  ಈ ಒಪ್ಪಂದ ಪತ್ರವನ್ನು ನಂಬಿ ನೊಂದಣಿಗಾಗಿ 730 ರೂಪಾಯಿ ಹಣ ಸಂದಾಯ ಮಾಡಿ ಮೋಸ ಹೋಗಬೇಡಿ ಎಂದು ಪಿಐಬಿ ತಿಳಿಸಿದೆ.

ಮೊಬೈಲ್ ಟವರ್ ಅಳವಡಿಸಲು ನಿಮ್ಮ ಸ್ವಂತ ಜಾಗ ಇದ್ದರೆ ತಿಳಿಸಿ,  ಟವರ್ ಮೇನ್ಟೇಯ್ನ್, ಮತ್ತು ನಿಮ್ಮ ಜಾಗದಲ್ಲಿ ಅಳವಡಿಸಿರುವ ಟವರ್ ನ ಬಾಡಿಗೆ ಎಲ್ಲಾ ಸೇರಿ ಒಂದು ವರ್ಷಕ್ಕೆ 25 ಲಕ್ಷದವರಗೆ ಪಾವತಿ ಮಾಡುತ್ತೇವೆ ಎನ್ನುವ ಜಾಹಿರಾತುಗಳು ನೀವು ಬಳಸುತ್ತಿರುವ ಮೊಬೈಲ್ ನಂಬರ್‌ಗೆ ಬಂದರೆ ಅಥವಾ ಕೇಂದ್ರ ಸರ್ಕಾರದಿಂದ ಇಂತಹ ಯೋಜನೆ ಇದೆ ಮುಂಗಡವಾಗಿ ಹಣ ಪಾವತಿಸಿ ಎಂದು ಯಾರಾದರೂ ಬಂದು ಹೇಳಿದರೆ ಅದನ್ನು ನಂಬ ಬೇಡಿ ಒಂದು ವೇಳೆ ನೀವು ನಂಬಿ ಹಣ ಪಾವತಿಸಿದರೆ ಮೋಸ ಹೋಗಿದ್ದೀರಿ ಎಂದೇ ಅರ್ಥಎಚ್ಚರ.

ಕೃಪೆ: PIB


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಬೇಸಿಗೆಯಲ್ಲಿ ವಾಹನಗಳಿಗೆ ಫುಲ್ ಟ್ಯಾಂಕ್ ಇಂಧನ ತುಂಬಿಸಿದರೆ ಸ್ಪೋಟಗೊಳ್ಳುತ್ತದೆ ಎಂಬುದು ನಿಜವೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights