ಫ್ಯಾಕ್ಟ್‌ಚೆಕ್: ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಿಸಿದ ಮುಸ್ಲಿಂ ಶಿಕ್ಷಕಿ! ವಾಸ್ತವವೇನು?

ಮುಸ್ಲಿಂ ಶಿಕ್ಷಕಿಯೊಬ್ಬರು ಅವರ ವಿದ್ಯಾರ್ಥಿನಿಯರಿಗೆ ಕೇಸರಿ ಶಾಲು ತೊಡಿಸುತ್ತಿದ್ದಾರೆ ಎಂದು ಹೇಳುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.  ಕ್ರಿಶ್ಚಿಯನ್ ಶಾಲೆಯಲ್ಲಿ ಮುಸ್ಲಿಂ ಶಿಕ್ಷಕಿಯೊಬ್ಬರು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಒತ್ತಾಯ ಪೂರ್ವಕವಾಗಿ ನಮಾಝ್ ಮಾಡುವಂತೆ ಒತ್ತಾಯಿಸಿದ್ದರು, ಘಟನೆಯ ಮಾಹಿತಿ ಪಡೆದು  ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಶಾಲೆಗೆ ಭೇಟಿ ನೀಡಿ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡ ನಂತರ ಶಿಕ್ಷಕಿ ಕ್ಷಮೆ ಕೋರಿ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ತೊಡಿಸಿದ್ದಾರೆ ಎಂದು ಪೋಸ್ಟ್‌ನಲ್ಲಿ ಪ್ರತಿಪಾದನೆ ಮಾಡಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವೀಡಿಯೊದಲ್ಲಿನ ಸ್ಕ್ರೀನ್‌ಶಾಟ್‌ಗಳ ಸಹಾಯದಿಂದ ಗೂಗಲ್ ರಿವರ್ಸ್ ಇಮೇಜ್‍ ಸರ್ಚ್ ಮಾಡಲಾಗಿದ್ದು ಮಾರ್ಚ್ 2022 ರ ಕೊನೆಯ ವಾರದಲ್ಲಿ ಹಲವು Facebook ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಎಂದು ಕಂಡುಬಂದಿದೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ವೀಡಿಯೊವನ್ನು ಹಂಚಿಕೊಳ್ಳುವ ಈ ಬಳಕೆದಾರರು, ನಾಸಿಕ್‌ನ ಚಿತ್ರಮಂದಿರದ ನಿರ್ವಹಣಾ ತಂಡವು ‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರವನ್ನು ವೀಕ್ಷಿಸಲು ಒಟ್ಟಾಗಿ ಬಂದ ಮಹಿಳೆಯರು ಧರಿಸಿದ್ದ ಕೇಸರಿ ಶಾಲುಗಳನ್ನು ಬಲವಂತವಾಗಿ ತೆಗೆದಿದೆ ಎಂದು ಉಲ್ಲೇಖಿಸಿದ್ದಾರೆ.

ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಮತ್ತಷ್ಟು ವಿಶ್ವಾಸಾರ್ಹ ಮೂಲಗಳನ್ನು ಹುಡುಕಿದಾಗ, ವೈರಲ್ ವೀಡಿಯೊದಲ್ಲಿರುವ ಅದೇ ವ್ಯಕ್ತಿಯನ್ನು ತೋರಿಸುವ ಫೋಟೋವನ್ನು 23 ಮಾರ್ಚ್ 2022 ರಂದು ‘ANI’ ಟ್ವೀಟ್ ಮಾಡಿರುವುದು ಕಂಡುಬಂದಿದೆ. ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಪ್ರದರ್ಶನದ ಸಮಯದಲ್ಲಿ ನಾಸಿಕ್‌ನಲ್ಲಿ ಥಿಯೇಟರ್. ಚಿತ್ರಮಂದಿರಕ್ಕೆ ಪ್ರವೇಶಿಸುವ ಮೊದಲು ಕೇಸರಿ ಶಾಲುಗಳನ್ನು ತೆಗೆದುಹಾಕುವಂತೆ ಚಿತ್ರಮಂದಿರ ನಿರ್ವಹಣಾ ತಂಡವು ಮಹಿಳೆಯರ ಗುಂಪಿಗೆ ಒತ್ತಾಯಿಸಿದ ನಂತರ ಈ ಗಲಾಟೆ ನಡೆದಿದೆ ಎಂದು ವರದಿಯಾಗಿದೆ.

ಈ ಕೇಸರಿ ಶಾಲು ವಿಷಯದ ಕುರಿತು ‘ANI’ ಯೊಂದಿಗೆ ಮಾತನಾಡಿರುವ ಈ ಗುಂಪಿನ ಮಹಿಳೆಯೊಬ್ಬರು, “ ‘ದಿ ಕಾಶ್ಮೀರ ಫೈಲ್ಸ್’ ವೀಕ್ಷಿಸಲು ಬಂದಿರುವ ಮಹಿಳೆಯರಿಗೆ ಸಹಾಯ ಮಾಡುವ ಗುಂಪಿಗೆ ಸೇರಿದ್ದು. ಗುಂಪಿಗೆ ಯಾವುದೇ ಬ್ಯಾಡ್ಜ್ ಅಥವಾ ಗುರುತಿನ ಚೀಟಿಯಂತಹಾ ಯಾವುದನ್ನೂ ನೀಡಿರಲಿಲ್ಲ ಆದ್ದರಿಂದ ಅವರನ್ನು ಗುಂಪಿನ ಮೂಲಕ ಗುರುತಿಸಲು ಕೇಸರಿ ಶಾಲುಗಳನ್ನು ಅವರಿಗೆ ಒದಗಿಸಲಾಗಿತ್ತು. ಅದರ ಹಿಂದೆ ಬೇರೇನೂ ಉದ್ದೇಶ ಇರಲಿಲ್ಲ.” ಆದ್ದರಿಂದ, ವೀಡಿಯೊದಲ್ಲಿ ಕೇಸರಿ ಶಾಲುಗಳನ್ನು ನೀಡುತ್ತಿರುವ ವ್ಯಕ್ತಿ ಈ ಮಹಿಳೆಯರಿಗಾಗಿ ‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರವನ್ನು ವೀಕ್ಷಿಸಲು  ವ್ಯವಸ್ಥೆ ಮಾಡಿದ್ದು,  ಮಹಿಳೆ ಕೂಡ ಈ ಗುಂಪಿನ ಸಂಘಟಕರಲ್ಲಿ ಒಬ್ಬರು ಎಂದು ಖಚಿತಪಡಿಸಬಹುದು.

ಈ ಘಟನೆಯ ಸಂಪೂರ್ಣ ವಿವರಗಳನ್ನು ವರದಿ ಮಾಡುತ್ತಾ, ಹಲವು ವೆಬ್‌ಸೈಟ್‌ಗಳು ಮಾರ್ಚ್ 2022 ರಲ್ಲಿ ಲೇಖನಗಳನ್ನು ಪ್ರಕಟಿಸಿದವು. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.ವೈರಲ್ ವಿಡಿಯೊದಲ್ಲಿ ಪ್ರತಿಪಾದಿಸಿದಂತೆ  ಮಹಿಳೆಯರಿಗೆ ಕೇಸರಿ ಶಾಲು ಹಾಕುತ್ತಿರುವ ವ್ಯಕ್ತಿ ಮುಸ್ಲಿಂ ಶಿಕ್ಷಕಿ ಅಲ್ಲ,  ಸಿನಿಮಾ ಮಂದಿರದಲ್ಲಿ ನಡೆದ ಘಟನೆಗೆ ಸುಳ್ಳು ನಿರೂಪಣೆಯನ್ನು ಸೇರಿಸಿ ವಿಡಿಯೊ ಹಂಚಿಕೊಳ್ಳಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ನಾಸಿಕ್‌ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಪ್ರದರ್ಶನದ ಸಂದರ್ಭದಲ್ಲಿ ಕೇಸರಿ ಶಾಲುಗಳನ್ನು ಒಳಗೊಂಡ ಘಟನೆಯ ವೀಡಿಯೊವನ್ನು ಮುಸ್ಲಿಂ ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳಿಗೆ ಒತ್ತಾಯಿಸಿ ನಮಾಝ್ ಮಾಡಿಸಿದ್ದಾರೆ ಎಂಬ ಸುಳ್ಳು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಕಚ್ಚಾ ಬಾದಂ ಹಾಡಿಗೆ ರೀಲ್ಸ್‌ ಮಾಡಿದ ಪೊಲೀಸರು! ವಾಸ್ತವವೇನು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights