ಬಿಜೆಪಿ ನಾಯಕತ್ವದಿಂದ ಉಮೇಶ್ ಕತ್ತಿ ಮತ್ತೆ ಅವಗಣನೆ….

ರಾಜ್ಯ ಸಚಿವ ಮಂಡಲದಲ್ಲಿ ಉಮೇಶ್ ಕತ್ತಿ ಅವರಿಗೆ ಸ್ಥಾನ ನೀಡದಿರುವ ವಿಚಾರ ಈಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಅಷ್ಟೇ ಅಲ್ಲದೇ ರಾಜಕೀಯ ವಿಪ್ಲವ ಸೃಷ್ಟಿಸಬಲ್ಲ ಬೆಳವಣಿಗೆಗಳ ಮುನ್ಸೂಚನೆಯನ್ನೂ ನೀಡಿದೆ.
ದಶಕದ ಹಿಂದೆ ಆಪರೇಶನ್ ಕಮಲದ ಮೂಲಕ ಬಿಜೆಪಿ ಸೇರಿಕೊಂಡ ಬೆಳಗಾವಿಯ ಪ್ರಭಾವಿ ರಾಜಕಾರಣಿ ಉಮೇಶ್ ಕತ್ತಿ ಅವರು ಸಿಎಂ ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗರಾಗಿದ್ದರೂ ಅವರಿಗೇ ಸಚಿವ ಸ್ಥಾನ ಸಿಗದಿರುವುದು ಊಹೆಗೂ ನಿಲುಕದ ವಿಚಾರವಾಗಿದೆ.

ಖುದ್ದು ಕತ್ತಿ ಅವರು ಈ ಬೆಳವಣಿಗೆಯಿಂದ ಸಾಕಷ್ಟು ನೋಮದುಕೊಂಡಿದ್ದಾರೆ. ಹೊರಗೆ ನಗುಮುಖ ತೋರಿದರೂ ಒಳಗೊಳಗೆ ಕುದಿಯುತ್ತಿದ್ದಾರೆ. ಈ ಮಧ್ಯೆ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಅವರು ಕತ್ತಿ ಅವರನ್ನು ಭೇಟಿ ಮಾಡಿ ತಮ್ಮ ಪಕ್ಷಕ್ಕೆ ಬರುವಂತೆ ಆಹ್ವಾನವನ್ನೂ ನೀಡಿದ್ದಾರೆ.

ಹಾಗೆ ನೋಡಿದರೆ ಬಿಜೆಪಿ ನಾಯಕತ್ವದಿಂದ ಉಮೇಶ್ ಕತ್ತಿಗೆ ಅನ್ಯಾಯವಾಗುತ್ತಿರುವುದು ಇದೇ ಮೊದಲಲ್ಲ ಎಂದು ಅವರ ಬೆಂಬಲಿಗರು ದೂರುತ್ತಾರೆ. ಕಳೆದ ಲೋಕಸಭಾ ಚುಣಾವಣೆಯ ಸಂದರ್ಭದಲ್ಲಿ ಸಹ ಉಮೇಶ್ ಕತ್ತಿ ಅವರನ್ನು ಪಕ್ಷದ ಮುಂಚೂಣಿಯ ನಾಯಕತ್ವ ನಿರ್ಲಕ್ಷಿಸಿತ್ತು.

ಕಳೆದ ಲೋಕಸಭಾ ಚುಣಾವಣೆಯಲ್ಲಿ ಚಿಕ್ಕೋಡಿಯಿಂದ ಸಹೋದರ ರಮೇಶ್ ಕತ್ತಿ (ಆಗ ಹಾಲಿ ಸಂಸದ) ಅವರಿಗೆ ಯಾವುದೇ ಸೂಚನೆ ನೀಡದೆ ಕಡೆಯ ಕ್ಷಣದಲ್ಲಿ ಟಿಕೆಟ್ ರದ್ದು ಮಾಡಿ ಬೇರೊಬ್ಬರಿಗೆ ಟಿಕೆಟ್ ನೀಡಿದಾಗಲೇ ಉಮೇಶ್ ಕತ್ತಿ ತೀವ್ ಬೇಸರ ಮಾಡಿಕೊಂಡಿದ್ದರ.

ಆದರೆ ಯಡಿಯೂರಪ್ಪ ಅವರ ಮಾತಿಗೆ ಕಟ್ಟಿಬಿದ್ದು ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿದ್ದರು. ಮುಂದೆ ಬಿಜೆಪಿ ಸರಕಾರ ಬಮದರೆ ನಿಮ್ಮನ್ನು ಮಂತ್ರಿ ಮಾಡುವುದಾಗಿ ಅಂದು ಬಿಎಸ್ವೈ ಅವರು ಉಮೇಶ್ ಕತ್ತಿ ಅವರಿಗೆ ಭರವಸೆಯನ್ನೂ ನೀಡಿದ್ದರು. ಆದರೆ ಆ ಮಾತೂ ಕೃತಿಗಿಳಿದಿಲ್ಲ ಎನ್ನುವುದು ಅವರ ಬೆಂಬಲಿಗರ ಆಂಬೋಣ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights