ತಮ್ಮ ಹಕ್ಕುಗಳಿಗಾಗಿ ಅಫಘಾನ್ ಮಹಿಳೆಯರಿಂದ ಕಾಬೂಲ್ ಬೀದಿಗಳಲ್ಲಿ ಪ್ರತಿಭಟನೆ!

ತಮ್ಮ ಹಕ್ಕುಗಳಿಗಾಗಿ ಅಫಘಾನ್ ಮಹಿಳೆಯರು ಕಾಬೂಲ್ ಬೀದಿಗಳಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರತಿಭಟನೆಯ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಅಫಘಾನ್ ನನ್ನು ತಾಲಿಬಾನಿಗಳು ವಶಪಡಿಸಿಕೊಂಡ ನಂತರ ತಾಲಿಬಾನ್ ನಿಂದಾಗು ಕಿರುಕುಳವನ್ನು ತಪ್ಪಿಸಲು ಸಾವಿರಾರು ಆಫ್ಘನ್ನರು ದೇಶದಿಂದ ಪಲಾಯನ ಮಾಡುತ್ತಿದ್ದಾರೆ. ಮಹಿಳೆಯರ ಸ್ಥಿತಿಯಂತೂ ಅಯೋಮಯವಾಗಿದೆ. ದೇಶ ಬಿಟ್ಟ ಬರಲಾಗದೇ ಇರಲೂ ಆಗದೆ ನಾಳಿನ ದಿನಗಳನ್ನು ನೆನೆದು ಕಣ್ಣೀರಿನಲ್ಲಿ ಕೈತೊಳಿಯುವಂತಾಗಿದೆ. ಹೀಗಾಗಿ ಮಹಿಳೆಯರ ಗುಂಪುಗಳು ತಮ್ಮ ಹಕ್ಕುಗಳಿಗಾಗಿ ಆಗ್ರಹಿಸಿ ಅಫ್ಘಾನಿಸ್ತಾನದಲ್ಲಿ ಮೊದಲ ಸಾರ್ವಜನಿಕ ಪ್ರತಿಭಟನೆಯನ್ನು ಕೈಗೊಂಡಿದ್ದಾರೆ.

ಇರಾನಿನ ಪತ್ರಕರ್ತ ಮಸೀಹ್ ಅಲೀನೆಜಾಡ್ ಟ್ವಿಟರ್‌ನಲ್ಲಿ ಹಂಚಿಕೊಂಡ ವೀಡಿಯೋದಲ್ಲಿ ಕಾಬೂಲ್‌ನ ಬೀದಿಯಲ್ಲಿ ನಾಲ್ಕು ಅಫ್ಘಾನ್ ಮಹಿಳೆಯರು ಕೈಬರಹದ ಕಾಗದಗಳನ್ನು ಹಿಡಿದುಕೊಂಡು ಪ್ರತಿಭಟನೆ ಮಾಡುತ್ತಿರುವುದನ್ನು ಕಾಣಬಹುದು.

ಸಾಮಾಜಿಕ ಭದ್ರತೆ, ಕೆಲಸ ಮಾಡುವ ಹಕ್ಕು, ಶಿಕ್ಷಣದ ಹಕ್ಕು ಮತ್ತು ರಾಜಕೀಯದಲ್ಲಿ ಭಾಗವಹಿಸುವಿಕೆಯ ಹಕ್ಕನ್ನು ಒಳಗೊಂಡಂತೆ ಮಹಿಳೆಯರು ತಮ್ಮ ಹಕ್ಕುಗಳನ್ನು ಕೇಳುವ ಕೂಗು ಕೇಳಿಬರುತ್ತಿದೆ.

https://twitter.com/AlinejadMasih/status/1427588628931301380?ref_src=twsrc%5Etfw%7Ctwcamp%5Etweetembed%7Ctwterm%5E1427588628931301380%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Fworld%2Fstory%2Ftaliban-afghan-women-protest-rights-kabul-latest-news-1842122-2021-08-18

ಕೆಲ ವರ್ಷಗಳಲ್ಲಿ ಭಾರತವು ರಸ್ತೆಗಳು, ಅಣೆಕಟ್ಟುಗಳು, ವಿದ್ಯುತ್ ಪ್ರಸರಣ ಮಾರ್ಗಗಳು, ದೂರದ ಪ್ರದೇಶಗಳಲ್ಲಿ ಸೌರ ಫಲಕಗಳು, ಟೆಲಿಕಾಂ ನೆಟ್‌ವರ್ಕ್‌ಗಳು ಮತ್ತು ಸಬ್‌ಸ್ಟೇಷನ್‌ಗಳಂತಹ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ನಿರ್ಮಿಸಲು ಅಫ್ಘಾನಿಸ್ತಾನಕ್ಕೆ ಸಹಾಯ ಮಾಡಿದೆ.

ಭಾರತವು ಅಫ್ಘಾನಿಸ್ತಾನದೊಂದಿಗೆ ಸೌಹಾರ್ದಯುತ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿದೆ. ದೇಶಾದ್ಯಂತ 400 ಕ್ಕೂ ಹೆಚ್ಚು ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆಗಳನ್ನು ಒಳಗೊಂಡಂತೆ ಅಲ್ಲಿ $ 3 ಬಿಲಿಯನ್‌ಗಿಂತ ಹೆಚ್ಚು ಹೂಡಿಕೆ ಮಾಡಿರುವುದರಿಂದ ಭಾರತದಿಂದ ಅಫಘಾನ್ ಸಹಾಯದ ನಿರೀಕ್ಷೆಯು ಆಶ್ಚರ್ಯಕರವಲ್ಲ ಎನ್ನಲಾಗುತ್ತಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights