ಪೆಟ್ರೋಲ್‌ ಡೀಸೆಲ್‌ ಬೆಲೆ: 21 ದಿನಗಳಾದರೂ ಏರಿಕೆ ನಿರಂತರ; ಗ್ರಾಹಕರು ಅತಂತ್ರ!

ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೇ ಒಂದು ಬೆಲೆಯಾದರೆ, ಭಾರತದ ಮಾರುಕಟ್ಟೆಯಲ್ಲಿಯೇ ಒಂದು ಬೆಲೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ (ಕ್ರೂಡ್‌ ಆಯಿಲ್) ದರ ಕಡಿಮೆ ಇದ್ದರೂ ಮೋದಿ ಸರ್ಕಾರ ದೇಶದ ಜನರಿಗೆ ಬೆಲೆ ಏರಿಕೆಯ ಬರೆ ಹಾಕುತ್ತಿದೆ.  ಕಳೆದ 21 ದಿನಗಳಿಂದ ನಿರಂತರವಾಗಿ ಬೆಲೆಯ ಬಿಸಿಗೆ ಗ್ರಾಹಕರು ಅತಂತ್ರರಾಗಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಹೆಚ್ಚಳವಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿಸುವುದು, ಹಾಗೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆಯಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸುವುದು ಸಾಮಾನ್ಯವಾದ ಸಂಗತಿ. ಬಹಳ ಹಿಂದಿನಿಂದಲೂ ನಡೆದುಕೊಂಡ ಬಂದಿರುವ ರೀತಿ. ಆದರೆ ನರೇಂದ್ರ ಮೋದಿ ಅವರ ಸರ್ಕಾರ ಈ ಸಂಪ್ರದಾಯವನ್ನು ಮರೆತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆ ಆಗುತ್ತಿದ್ದರೂ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಳೆದ 21 ದಿನಗಳಿಂದ ನಿರಂತರವಾಗಿ ಹೆಚ್ಚಳ ಮಾಡುತ್ತಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲವು ಪ್ರತಿ ಬ್ಯಾರೆಲ್ಗೆ 41.50 ಡಾಲರ್ ಇದೆ. ಒಂದು ಡಾಲರ್ ಗೆ ರೂಪಾಯಿ ಮೌಲ್ಯ 75.66 ರಷ್ಟಿದೆ. ಆದರೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪ್ರತಿದಿನ ಏರಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ಬೆಲೆ ಕಡಿಮೆ ಇರುವುದರಿಂದ ಹಾಗೂ ಕೊರೋನಾ ಮತ್ತು ಲಾಕ್ಡೌನ್ ನಂತಹ ಕಷ್ಟದ ಸಂದರ್ಭ ಇದಾಗಿರುವುದರಿಂದ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಕೆ ಮಾಡಬೇಕು. ಜನರಿಂದ ಹಣ ಸುಲಿಯಲು ಇದು ಸೂಕ್ತ ಕಾಲವಲ್ಲ ಎಂದು ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಆದರೂ ಪ್ರತಿಪಕ್ಷಗಳ ಮಾತಿಗೆ ಕಿಮ್ಮತ್ತು ಕೊಡದ ಮೋದಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಸುತ್ತಲೇ ಇದೆ.

ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಪೆಟ್ರೋಲ್ಗೆ 32.98 ರೂಪಾಯಿ ಮತ್ತು ಡೀಸೆಲ್ಗೆ 31.83 ರೂಪಾಯಿ ಹಾಗೂ ಪೆಟ್ರೋಲ್ ಮೇಲಿನ ಡೀಲರ್ ಕಮಿಷನ್ 3.60 ರೂಪಾಯಿ ಮತ್ತು ಡೀಸೆಲ್ ಮೇಲಿನ ಡೀಲರ್ ಕಮಿಷನ್ 2.53 ರೂಪಾಯಿ ವಿಧಿಸುತ್ತಿದೆ. ಅಂದರೆ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದಲ್ಲಿ ನೇರವಾಗಿ ಅರ್ಧ ಹಣ ಕೇಂದ್ರ ಸರ್ಕಾರದ ತಿಜೋರಿ ಸೇರಲಿದೆ.
ನಿರಂತರವಾಗಿ ಕಳೆದ 21 ದಿನಗಳಿಂದ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಾಗುತ್ತಿದ್ದು ಈವರೆಗೆ ಪ್ರತಿ ಲೀಟರ್ ಪೆಟ್ರೋಲ್ಗೆ 9.12 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ಗೆ 11.01 ರೂಪಾಯಿ ಹೆಚ್ಚಳ ಮಾಡಲಾಗಿದೆ. ಇಂದು ಪ್ರತಿ ಲೀಟರ್ ಪೆಟ್ರೋಲ್ಗೆ 25 ಪೈಸೆ ಮತ್ತು ಪ್ರತಿ ಲೀಟರ್ ಡೀಸೆಲ್ಗೆ 21 ಪೈಸೆ ಹೆಚ್ಚಿಸಲಾಗಿದೆ.

ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಈ ರೀತಿ ಇವೆ

• ಭೂಪಾಲ್- ಪೆಟ್ರೋಲ್ 88.03ರೂ., ಡೀಸೆಲ್ 79.81 ರೂ.
• ಮುಂಬೈ- ಪೆಟ್ರೋಲ್ 87.14 ರೂ., ಡೀಸೆಲ್ 78.71 ರೂ.
• ಚೆನ್ನೈ- ಪೆಟ್ರೋಲ್ 83.59 ರೂ., ಡೀಸೆಲ್ 77.61 ರೂ.
• ಪಾಟ್ನಾ- ಪೆಟ್ರೋಲ್ 83.27 ರೂ., ಡೀಸೆಲ್ 77.30 ರೂ.
• ಬೆಂಗಳೂರು- ಪೆಟ್ರೋಲ್ 82.97 ರೂ., ಡೀಸೆಲ್ 76.05 ರೂ.
• ಕೋಲ್ಕತ್ತಾ- ಪೆಟ್ರೋಲ್ 82.05 ರೂ., ಡೀಸೆಲ್ 75.52 ರೂ.
• ಲಕ್ನೊ- ಪೆಟ್ರೋಲ್ 80.94ರೂ., ಡೀಸೆಲ್ 72.37 ರೂ.
• ನೋಯ್ಡಾ- ಪೆಟ್ರೋಲ್ 80.92ರೂ., ಡೀಸೆಲ್ 72.33 ರೂ.
• ದೆಹಲಿ- ಪೆಟ್ರೋಲ್ 80.38 ರೂ., ಡೀಸೆಲ್ 80.40ರೂ.
• ರಾಂಚಿ- ಪೆಟ್ರೋಲ್ 80.26 ರೂ., ಡೀಸೆಲ್ 76.39ರೂ.
• ಫರೀದಾಬಾದ್- ಪೆಟ್ರೋಲ್ 78.83ರೂ., ಡೀಸೆಲ್ 73.00 ರೂ.
• ಗುರುಗ್ರಾಂ- ಪೆಟ್ರೋಲ್ 78.59ರೂ., ಡೀಸೆಲ್ 72.53 ರೂ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights