ಚೆನ್ನೈ ಸ್ಟಾನ್ಲಿ ಆಸ್ಪತ್ರೆಯಲ್ಲಿ ಕೋವಿಡ್-19 ಸೋಂಕಿತರಿಗೆ ಔಷಧಿ, ಆಹಾರ ನೀಡಲು ರೋಬೋಟ್ ಅಳವಡಿಕೆ
ಕೊರೊನ ವೈರಸ್ ಸೊಂಕಿತರು ಆರೋಗ್ಯ ಕಾರ್ಯಕರ್ತರ ಸಂಪರ್ಕಕ್ಕೆ ಬರುವುದನ್ನು ಕಡಿಮೆ ಮಾಡಲು ಮತ್ತು ಸೋಂಕು ಹಬ್ಬುವುದನ್ನು ತಡೆಯಲು, ಸೋಂಕಿತರಿಗೆ ಔಷದ ಮತ್ತು ಆಹಾರ ನೀಡಬಲ್ಲ ರೋಬೋಟ್ ಗಳನ್ನು ತಮಿಳುನಾಡಿನ ಸರ್ಕಾರ ನಡೆಸುವ ಚೆನ್ನೈನ ಸ್ಟಾನ್ಲಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ.
#update: Visited #Stanley Hospital morning.Checked the functions of #roboticnurses to be used in #corona wards, that can deliver food. &medicine.This will limit the amount of direct contact doctors and nurses have with patients, thus reducing the risk of infection.@MoHFW_INDIA pic.twitter.com/GNL6LSWaAP
— Dr C Vijayabaskar (@Vijayabaskarofl) April 3, 2020
ಕೊರೊನವೈರಸ್ ವಾರ್ಡ್ ನಲ್ಲಿ ಅಳವಡಿಸಲಾಗಿರುವ ಈ ರೋಬೋಟ್ ನರ್ಸ್ ಗಳ ಕಾರ್ಯಗಳನ್ನು ತಮಿಳುನಾಡು ಆರೋಗ್ಯ ಸಚಿವ ಸಿ ವಿಜಯ ಶಂಕರ್ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿ ವೀಕ್ಷಿಸಿದ್ದಾರೆ.
ಸಚಿವರಿಗೆ ನೀಡಿದ ಪ್ರಾತ್ಯಕ್ಷಿತೆಯಲ್ಲಿ ರೋಬೋಟ್ ಅವರಿಗೆ ಸ್ಯಾನಿಟೈಸರ್ ಮತ್ತು ನೀರನ್ನು ತೆಗೆದುಕೊಂಡು ಹೋಗಿ ಕೊಟ್ಟಿದೆ. ಚೆನ್ನೈನ ಸ್ಟಾನ್ಲಿ ಆಸ್ಪತ್ರೆ ನಗರದ ಹಳೆಯ ಆಸ್ಪತೆಗಳಲ್ಲಿ ಒಂದು ಮತ್ತು ಈಗ ಕೊರೊನ ಸೋಂಕಿಗೆ ಚಿಕಿತ್ಸೆ ನೀಡುವುದಕ್ಕೆ ಈ ಆಸ್ಪತ್ರೆಯನ್ನು ಆಯ್ದುಕೊಳ್ಳಲಾಗಿದೆ.

