ಬಾಸ್ಕೇಟ್ ಬಾಲ್ ಆಟಗಾರ್ತಿ ಎತ್ತರ ಕಂಡು ಎದುರಾಳಿಗಳು ಶಾಕ್..!
ಚೀನಾದ ಬಾಸ್ಕೇಟ್ ಬಾಲ್ ಆಟಗಾರ್ತಿ ಎತ್ತರ ಕಂಡು ಎದುರಾಳಿಗಳು ಶಾಕ್ ಆಗಿದ್ದಾರೆ.
ಚೀನಾದ ರಾಷ್ಟ್ರೀಯ ಚಾಂಪಿಯನ್ ಶಿಪ್ ನ ಬಾಸ್ಕೆಟ್ ಬಾಲ್ ನ ತಂಡದ ಓರ್ವ ಆಟಗಾರ್ತಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾಳೆ. ಯಾಕೆಂದ್ರೆ ಈ ಆಟಗಾರ್ತಿ ಎತ್ತರ ಬರೊಬ್ಬರಿ 7 ಅಡಿ 4 ಇಂಚು. ಎತ್ತರವನ್ನು ಸಾಮಾರ್ಥವಾಗಿ ಬಳಸಿಕೊಂಡಿರುವ 14 ವರ್ಷದ ಆಟಗಾರ್ತಿ ಝಾಂಗ್ ಜಿಯು ತಮ್ಮ ತಂಡದ ಟ್ರಂಪ್ ಕಾರ್ಡ್ ಆಗಿದ್ದಾರೆ.
ಝಾಂಗ್ ಜಿಯು ಪೂರ್ವ ಚೀನಾದ ಶಾಂಡೊಂಗ್ ಪ್ರಾಂತ್ಯದವರು. ಆಕೆಯ ಪೋಷಕರು ವೃತ್ತಿಪರ ಬ್ಯಾಸ್ಕೆಟ್‌ಬಾಲ್ ಆಟಗಾರರಾಗಿರುವುದರಿಂದ ಆಟವು ಅವಳ ರಕ್ತದಲ್ಲಿದೆ. ಅವಳ ತಂದೆ 6’9 “ಆದರೆ ತಾಯಿಯ ಎತ್ತರ 6’4”
ಉಳಿದ ಆಟಗಾರರಿಗಿಂತ ಎತ್ತರವಿರುವ ಝಾಂಗ್ ಆಟದಲ್ಲಿ ಮುನ್ನಡೆ ಸಾಧಿಸುವ ವಿಡಿಯೋಗಳು ವಿಶ್ವಮಟ್ಟದಲ್ಲಿ ವೈರಲ್ ಆಗಿವೆ. ವೀಡಿಯೋ 1.2 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. ಆಟದ ಒಟ್ಟು ಅಂಕಗಳಲ್ಲಿ ಈಕೆಯ 25 ರಿಬೌಂಡ್ಸ್ ಹಾಗೂ 6 ಬ್ಲಾಕ್ಸ್ ಕೂಡ ಸೇರಿಸಿಕೊಂಡಿದೆ.
https://twitter.com/overtime/status/1415758943368982530?ref_src=twsrc%5Etfw%7Ctwcamp%5Etweetembed%7Ctwterm%5E1415758943368982530%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2F14-year-old-chinese-girl-with-her-height-74-takes-the-internet-by-storm-with-her-basketball-skills%2F785866
ಜಿಯು ಅವರನ್ನು ಚೀನಾದ ಬ್ಯಾಸ್ಕೆಟ್‌ಬಾಲ್ ತಾರೆ ಯಾವೋ ಮಿಂಗ್‌ಗೆ ಹೋಲಿಸಲಾಗುತ್ತಿದೆ. ಕುತೂಹಲಕಾರಿಯಾಗಿ, ಅವರಿಬ್ಬರೂ ಒಂದೇ ಎತ್ತರವನ್ನು ಹೊಂದಿದ್ದಾರೆ.
ನೆಟ್ಟಿಗರು ಝಾಂಗ್ ಎತ್ತರದಿಂದ ಮಾತ್ರವಲ್ಲ, ಅವಳ ಕೌಶಲ್ಯದಿಂದಲೂ ಆಶ್ಚರ್ಯಚಕಿತರಾಗಿದ್ದಾರೆ.