200 ಮಿಲಿಯನ್ ವೀಕ್ಷಣೆಯೊಂದಿಗೆ ದಾಖಲೆ ಬರೆದ KGF – 2 ಟೀಸರ್!

ಕೆಜಿಎಫ್ 2 ಟೀಸರ್ 200 ಮಿಲಿಯನ್ ವೀಕ್ಷಣೆಗಳೊಂದಿಗೆ ದಾಖಲೆ ಸೃಷ್ಟಿದೆ.

ರಾಕಿಂಗ್ ಸ್ಟಾರ್ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಅವರ ‘ಕೆಜಿಎಫ್-2’ ಚಿತ್ರದ ಟೀಸರ್ ಸಿನಿಮಾ ರಂಗದಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿದೆ. ಈ ಚಿತ್ರ ಭಾರತದಾದ್ಯಂತದ ಚಲನಚಿತ್ರ ಪ್ರಿಯರಿಗೆ ಪರಿಪೂರ್ಣ ಆಕ್ಷನ್ ಚಿತ್ರ ಎನಿಸಿದಿದೆ.  ಕೆಜಿಎಫ್ ಮೊದಲ ಭಾಗ ಎಲ್ಲೆಡೆ ಭಾರಿ ಯಶಸ್ಸನ್ನು ಕಂಡಿದೆ. ಿದರ ಮುಂದುವರೆದ ಭಾಗ ಭಾರೀ ನಿರೀಕ್ಷೆಯನ್ನು ಹುಟ್ಟಿಸಿದೆ.

ಕೊರೊನಾ ಚಿತ್ರದ ಬಿಡುಗಡೆ ವಿಳಂಬ ಮಾಡಿರಬಹುದು. ಆದರೆ ಕೆಜಿಎಫ್ 2 ಟೀಸರ್ ಮಾತ್ರ ಯೂಟ್ಯೂಬ್ ದಾಖಲೆ ಸೃಷ್ಟಿಸಿ ಗೆಲ್ಲುವುದನ್ನು ನಿಲ್ಲಿಸಲಿಲ್ಲ. ಇದು 200 ಮಿಲಿಯನ್ ವೀಕ್ಷಣೆಗಳನ್ನು ಮೀರಿದೆ. ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ನಂಬಲಾಗದ ಸಾಧನೆಯಾಗಿದೆ. ಕೆಜಿಎಫ್ 2 ಟೀಸರ್ ಒಂದು ಬಿಲಿಯನ್ ಅನಿಸಿಕೆಗಳು ಮತ್ತು 1.1 ಮಿಲಿಯನ್‌ಗಿಂತ ಹೆಚ್ಚು ಕಾಮೆಂಟ್‌ಗಳೊಂದಿಗೆ 8.4 ಮಿಲಿಯನ್‌ಗಿಂತಲೂ ಹೆಚ್ಚು ಲೈಕ್‌ಗಳನ್ನು ಹೊಂದಿದೆ.

ಕೆಜಿಎಫ್ 2 ತಂಡ ಅಭಿಮಾನಿ ಬಳಗಕ್ಕೆ ಧನ್ಯವಾದ ಹೇಳುವ ಮೂಲಕ ಈ ಸಾಧನೆಯನ್ನು ಬಹಿರಂಗಪಡಿಸಿದೆ. ಶೀಘ್ರದಲ್ಲೇ ತಂಡ ಕೆಜಿಎಫ್ 2 ಚಿತ್ರದ ಬಿಡುಗಡೆ ದಿನಾಂಕದೊಂದಿಗೆ ಬರಲಿದೆ.

ಅಭಿಮಾನಿಗಳೂ ಕೂಡ ಚಿತ್ರ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights