ಅತ್ಯಾಚಾರಕ್ಕೆ ಯತ್ನ; ಬಾಸ್ನ ಮರ್ಮಾಂಗ ಕತ್ತರಿಸಿ ಪೊಲೀಸರಿಗೆ ಕರೆ ಮಾಡಿದ ಮಹಿಳೆ!
ಬಾರ್ವೊಂದರ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ತನ್ನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಎಂಬ ಆರೋಪದ ಮೇಲೆ ತನ್ನ ಬಾಸ್ನ ಮರ್ಮಾಂಗವನ್ನು ಕತ್ತರಿಸಿರುವ ಘಟನೆ ಬಾರ್ಸಿಲೋನಾದ ಮೊಸೊಸ್ ಡಿ ಎಸ್ಕ್ವಾಡ್ರಾ ನಗರದಲ್ಲಿ ನಡೆದಿದೆ.
ಮೂಲತಃ ಸ್ಪೇನ್ ದೇಶದವರಾದ ಮಹಿಳೆ ಸ್ಯಾಂಟ್ ಆಂಡ್ರೂ ಡೆ ಲಾ ಬಾರ್ಕಾದ ಬಾರ್ನಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ರಾತ್ರಿಪಾಳಿಯ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಮಹಿಳೆಯ ಮೇಲೆ ಆಕೆ ಬಾಸ್ ಅತ್ಯಾಚಾರ ಯತ್ನಿಸಿದ್ದು, ಮಹಿಳೆ ತನಗೆ ಸಿಕ್ಕ ಚಾಕುವಿನಿಂದ ಆತನ ಮರ್ಮಾಂಗವನ್ನು ಕತ್ತರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರು ಮಹಿಳೆಯನ್ನು ಬಂಧಿಸಿದ್ದು, ಆಕೆಯ ಬಾಸ್ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳೀಯ ಬೆಲ್ವಿಟ್ಜ್ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ಆತನ ಮರ್ಮಾಂಗವನ್ನು ಮತ್ತೆ ಜೋಡಿಸಲು ಪ್ರಯತ್ನಿಸಿದ್ದಾರೆ.
ಘಟನೆಯ ಸಮಯದಲ್ಲಿ ತಾನು ಆತ್ಮರಕ್ಷಣೆಗಾಗಿ ಆ ಕೃತ್ಯವನ್ನು ಮಾಡಬೇಕಾಯಿತು. ತನ್ನ ಬಾಸ್ ತನ್ನ ಮೇಲೆ ಈ ರೀತಿಯನ್ನು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿರುವುದು ಇದೇ ಮೊದಲಲ್ಲ. ಆತ ಅನೇಕ ಬಾರಿ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ತನ್ನೊಂದಿಗೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ ಎಂದು ಮಹಿಳೆ ಹೇಳಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಲಾ ಸೆಕ್ಸ್ಟಾ ವರದಿ ಮಾಡಿದೆ.
ಇದನ್ನೂ ಓದಿ: ಮಹಿಳಾ ಪೇದೆ ಮೇಲೆ ಅತ್ಯಾಚಾರ; ಪೊಲೀಸ್ ಅಧಿಕಾರಿ ಬಂಧನ!
ಗಾಯಕ್ಕೆ ಚಿಕಿತ್ಸೆ ಪಡೆದ ನಂತರ ಬಾರ್ ಮಾಲೀಕರು ಆಸ್ಪತ್ರೆಯಲ್ಲಿದ್ದಾರೆ. ಅವರ ತುರ್ತು ಚಿಕಿತ್ಸೆ ಯಶಸ್ವಿಯಾಗಿದೆಯೇ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಮಹಿಳೆಯನ್ನು ಮಾರ್ಟೊರೆಲ್ನ ಪ್ರಾದೇಶಿಕ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2017 ರಲ್ಲಿ, ಭಾರತದ ಕೇರಳದಲ್ಲಿ ಮಹಿಳೆಯೊಬ್ಬರು ಹಿಂದೂ ಧಾರ್ಮಗುರು ವೊಬ್ಬನ ಮರ್ಮಾಂಗವನ್ನು ಕತ್ತರಿಸಿದ್ದರು. ತನ್ನ ಮೇಲೆ ಆತ ಅತ್ಯಾಚಾರ ಯತ್ನಿಸಿದ್ದ ಎಂದು ಆಕೆ ಆರೋಪಿಸಿದ್ದರು. ಆಕೆಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆಕೆ ಶಿಕ್ಷೆಯಿಂದ ಪಾರಾಗಿದ್ದರು.
ಇದೀಗ ಅಂತದ್ದೇ ಘಟನೆ ಬಾರ್ಸಿಲೋನಾದಲ್ಲಿ ನಡೆದಿದೆ. ಆಕೆ ಆರೋಪದ ತನಿಖೆ ನಡೆಯುತ್ತಿದೆ. ಆಕೆ ಶಿಕ್ಷೆಯಿಂದ ಪಾರಾಗುತ್ತಾರೆಯೇ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ: ತಮಿಳು ನಟಿಯನ್ನು ವಿವಾಹವಾಗುವುದಾಗಿ ನಂಬಿಸಿ ಮೋಸ; ಮಾಜಿ ಸಚಿವನ ವಿರುದ್ದ ಅತ್ಯಾಚಾರ ದೂರು ದಾಖಲು!
ಇದನ್ನೂ ಓದಿ: ಅತ್ಯಾಚಾರ ಆರೋಪ : ಮಂಡ್ಯದಲ್ಲಿ ನಟಿ ಕಂಗನಾ ಬಾಡಿಗಾರ್ಡ್ ಬಂಧನ..!

