ಅತ್ಯಾಚಾರ ಆರೋಪ : ಮಂಡ್ಯದಲ್ಲಿ ನಟಿ ಕಂಗನಾ ಬಾಡಿಗಾರ್ಡ್ ಬಂಧನ..!

ಅತ್ಯಾಚಾರ ಆರೋಪದ ಮೇಲೆ ಬಾಲಿವುಡ್ ಚಿತ್ರನಟಿ ಕಂಗನಾ ರಣಾವತ್ ಬಾಡಿಗಾರ್ಡ್ ಕುಮಾರಶೆಟ್ಟಿ ಅಲಿಯಾಸ್ ಕುಮಾರ ಹೆಗಡೆ ಅವರನ್ನು ಮಂಡ್ಯದಲ್ಲಿ ಬಂಧಿಸಲಾಗಿದೆ.

ಮುಂಬೈ ಪೊಲೀಸರು ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಹೆಗ್ಗಡಹಳ್ಳಿಯಲ್ಲಿ ಕುಮಾರಶೆಟ್ಟಿಯನ್ನು ಬಂಧಿಸಿದ್ದಾರೆ. ಸಂತ್ರಸ್ತೆಯೊಂದಿಗೆ ಕಳೆದ 8 ವರ್ಷಗಳ ಹಿಂದೆ ಪರಿಚಯ ಬೆಳಸಿಕೊಂಡಿದ್ದ ಕುಮಾರಶೆಟ್ಟಿ ಮದುವೆಯಾಗುವುದಾಗಿ ಪ್ರಪೋಸ್ ಮಾಡಿದ್ದ. ಬಳಿಕ ಲೈಗಿಂಕ ಕ್ರಿಯೆಗೆ ಬಳಸಿಕೊಂಡಿದ್ದಾನೆ. ಮಾತ್ರವಲ್ಲದೇ ತನ್ನ ತಾಯಿ ನಿಧನರಾಗಿದ್ದಾರೆಂದು ಹೇಳಿ ಸಂತ್ರಸ್ತೆಯಿಂದ 50 ಸಾವಿರ ಕೂಡ ಪಡೆದುಕೊಂಡಿದ್ದನಂತೆ. ಬಳಿಕ ಕುಮಾರಶೆಟ್ಟಿ ಫೋನ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆಂದು ಸಂತ್ರಸ್ತೆ ದೂರು ನೀಡಿದ್ದಾಳೆ.

ದೂರಿನ ಆಧಾರದ ಮೇಲೆ ಮೂಲತ: ಕರ್ನಾಟಕದವನಾದ ಕುಮಾರಶೆಟ್ಟಿಯನ್ನು ಮುಂಬೈ ಪೊಲೀಸರು ಹುಡುಕಾಟ ನಡೆಸಿದ್ದರು. ಈತ ಹೆಗ್ಗಡಹಳ್ಳಿಯಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಅಲ್ಲಿಗೆ ಬಂದು ಬಂಧಿಸಿದ್ದಾರೆ. ಕೆಆರ್ ಪೇಟೆಯ ಜೆಎಂಎಫ್​ಸಿ ಕೋರ್ಟ್​​ಗೆ ಹಾಜರುಪಡಿಸಿ ಮುಂಬೈಗೆ ಕರೆದೊಯ್ದಿದ್ದಾರೆ.

ವಿವಾದಾತ್ಮಕ ನಟಿ ಕಂಗನಾ ಸೋಶಿಯಲ್ ಮೀಡಿಯಾದಲ್ಲಿ ಸದಾಕಾಲ ಆ್ಯಕ್ಟಿವ್ ಆಗಿರುವ ನಟಿ. ತಮಗೆ ಸಂಬಂಧವಿರಲಿ ಇಲ್ಲದೇ ಇರಲಿ ಅಂಥಹ ವಿಚಾರಗಳಿಗೆ ಪ್ರತಿಕ್ರಿಯೆ ನೀಡುತ್ತಿರುತ್ತಾರೆ. ಆದರೆ ತಮ್ಮ ಬಾಡಿಗಾರ್ಡ್ ಎಂದು ಹೇಳಲಾಗುತ್ತಿರುವ ವ್ಯಕ್ತಿ ಬಗ್ಗೆ ಕಂಗನಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights