ಅಪಘಾತದಲ್ಲಿ ಎಡಗಾಲು ಕಳೆದುಕೊಂಡರೂ ಮಕ್ಕಳಿಗೆ ಸ್ಪೂರ್ತಿಯಾದ ಅರ್ಜೆಂಟೀನಾದ ಪ್ಯಾರಾ ಅಥ್ಲೀಟ್!

ಬ್ಯೂನಸ್ ಐರೆಸ್ ನಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ ತಮ್ಮ 13ನೇ ವಯಸ್ಸಿನಲ್ಲಿ ಎಡಗಾಲು ಕಳೆದುಕೊಂಡ ಅರ್ಜೆಂಟೀನಿ –ಇಟಾಲಿಯನ್ ಗಾಲಿಕುರ್ಚಿ ಬ್ಯಾಸ್ಕೆಟ್ ಬಾಲ್ ಚಾಂಪಿಯನ್ ಅಡೋಲ್ಟೋ ಡಾಮಿಯಾನ್ ಬೆರ್ಡುನ್ ಇಟಲಿ ಮಕ್ಕಳಿಗೆ ಬ್ಯಾಸ್ಕೆಟ್ ಬಾಲ್ ಕೋಚಿಂಗ್ ಮಾಡುತ್ತಿದ್ದಾರೆ.

ಹೌದು…  ಇಟಲಿಯ ಮಿಲನ್ ನ ವೆರಾನೋ ಬ್ರಿಯಾನ್ಝಾದಲ್ಲಿರುವ ಎರಡನೇ ತರಗತಿ ಮಕ್ಕಳು ಬ್ಯಾಸ್ಕೆಟ್ ಬಾಲ್ ಆಡುವುದನ್ನು ಕಲಿಯುತ್ತಿದ್ದಾರೆ. ಇದೇ ವೇಳೆ ಈ ಮಕ್ಕಳಿಗೆ ವೈವಿಧ್ಯತೆಯ ಪಾಠವೂ ಆಗುತ್ತಿದೆ. ಮೇ ತಿಂಗಳ ಮಟ್ಟಿಗೆ ಈ ಮಕ್ಕಳಿಗೆ ಕೋಚ್ ಆಗಿ ಬಂದಿರುವುದು

ಅರ್ಜೆಂಟೀನಿ –ಇಟಾಲಿಯನ್ ಗಾಲಿಕುರ್ಚಿ ಬ್ಯಾಸ್ಕೆಟ್ ಬಾಲ್ ಚಾಂಪಿಯನ್ ಅಡೋಲ್ಟೋ ಡಾಮಿಯಾನ್ ಬೆರ್ಡುನ್ ಮೇ ತಿಂಗಳ ಮಟ್ಟಿಗೆ ಮಕ್ಕಳಿಗೆ ಕೋಚ್ ಆಗಿದ್ದಾರೆ. ಬ್ಯೂನಸ್ ಐರೆಸ್ ನಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ ತಮ್ಮ 13ನೇ ವಯಸ್ಸಿನಲ್ಲಿ ಎಡಗಾಲು ಕಳೆದುಕೊಂಡ ಬೆರ್ಡುನ್, 39 ವರ್ಷಗಳಿಂದಲೂ ಅನೇಕ ಶಾಲೆಗಳಿಗೆ ತೆರಳಿ, ಅಂಗವೈಕಲ್ಯದ ನಡುವೆಯೂ ತಾವು ಹೇಗೆ ಬದುಕು ಸಾಗಿಸುತ್ತಿದ್ದಾರೆ ಎಂದು ಮಕ್ಕಳಿಗೆ ಹೇಳಿಕೊಟ್ಟು ಅವರಲ್ಲಿ ಸ್ಪೋರ್ತಿ ತುಂಬುತ್ತಿದ್ದಾರೆ.

ಈ ಬಾರಿ ಇಲ್ಲಿನ ಸಬ್-ಅರ್ಜುನ್ ಪ್ರಾಥಮಿಕ ಶಾಲೆಗೆ ಆಗಮಿಸಿದ ಬೆರ್ಡುನ್, ಅಲ್ಲಿನ ಮಕ್ಕಳಿಗೆ ಬ್ಯಾಸ್ಕೆಟ್ ಬಾಲ್ ಜೊತೆಗೆ ಜೀವನದ ಪಾಠವನ್ನೂ ಕಲಿಸುತ್ತಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights