ಕೊರೊನಾದಿಂದ ತಾಯಿ ಸಾವು; ಸುದ್ದಿ ಕೇಳಿ ಮಗ ಆತ್ಮಹತ್ಯೆ!

ಕೊರೊನಾದಿಂದ ತಾಯಿ ಮೃತಪಟ್ಟರು ಎಂಬ ಸುದ್ದಿ ಕೇಳಿ ಮಗ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್​ನ ಕಟೇದನ್​ ಏರಿಯಾದಲ್ಲಿ ಶನಿವಾರ ನಡೆದಿದೆ.

ಗಿಲ್ಲ ಶ್ರೀಹರಿ (22) ಮೃತ ಮಗ. ಮೈಲಾರ್ದೇವ್ಪಲ್ಲಿ ವಿಭಾಗದ ಮಧುಬನ ಕಾಲನಿಯ ನಿವಾಸಿಯಾದ ಶ್ರೀಹರಿ, ಇಂಜಿನಿಯರಿಂಗ್​ ಓದುತ್ತಿದ್ದ. ಕಾನ್ಸ್​ಟೇಬಲ್​ ಆಗಿ ಕೆಲಸ ಮಾಡುತ್ತಿದ್ದ ತಂದೆ ನಿವೃತ್ತಿ ಹೊಂದಿದ್ದಾರೆ. ಕ್ಯಾನ್ಸರ್​ನಿಂದ ಬಳಲುತ್ತಿರುವ ತಂದೆ ಹಾಸಿಗೆ ಹಿಡಿದಿದ್ದಾರೆ.

ಶ್ರೀಹರಿ ವಿದ್ಯಾಭ್ಯಾಸದ ಜತೆಗೆ ಸಣ್ಣ ಕೆಲಸ ಮಾಡಿಕೊಂಡು ಕುಟುಂಬಕ್ಕೆ ಆಧಾರವಾಗಿದ್ದ. ಏಪ್ರಿಲ್​ 22ರಂದು ತಾಯಿ ರುಕ್ಮಿಣಿಗೆ ಕರೊನಾ ಸೋಂಕು ತಗುಲಿತ್ತು. 37 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಹರಿ ತಾಯಿ ಚಿಕಿತ್ಸೆ ಫಲಿಸದೇ ಶನಿವಾರ ಮೃತಪಟ್ಟಿದ್ದಾರೆ.

ಇತ್ತ ತಾಯಿ ಮೃತಪಟ್ಟಳು ಎಂಬ ಸುದ್ದಿಯನ್ನು ಕೇಳಿ ನೋವು ಸಹಿಸದೇ ಸ್ನೇಹಿತನ ಬೈಕ್​ನಲ್ಲಿ ತೆರಳಿ ಹುಂಡಾಸಾಗರ್​ ಪ್ರದೇಶದಲ್ಲಿ ಪಾರ್ಕ್​ ಮಾಡಿ ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾನೆ. ಆತ್ಮಹತ್ಯೆಗು ಮುನ್ನ ಸೆಲ್ಫಿ ವಿಡಿಯೋ ಮಾಡಿ ತನ್ನ ತಂದೆಯ ಬಳಿ ಕ್ಷಮೆಯಾಚಿಸಿದ್ದಾನೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights