ಫ್ಯಾಕ್ಟ್‌ಚೆಕ್: ಉಗಾಂಡಾದ ಪೊಲೀಸ್ ಅಧಿಕಾರಿ ಪತ್ರಕರ್ತನಿಗೆ ಕ್ಯಾಟರ್‌ಬಿಲ್‌ನಿಂದ ಹೊಡೆದರೆ?

“ಹೊಸದಾಗಿ ನೇಮಕಗೊಂಡ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಗೋಷ್ಠಿಯಲ್ಲಿ  ಸಂಬಂಧವಿಲ್ಲದ ಪ್ರಶ್ನೆ ಕೇಳಿದ ಎಂಬ ಕಾರಣಕ್ಕೆ ವರದಿಗಾರನಿಗೆ ಕ್ಯಾಟರ್‌ಬಿಲ್‌ನಿಂದ ಹೊಡೆದಿದ್ದಾರೆ? ಎಂಬ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.  ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಕ್ಯಾಟರ್‌ಬಿಲ್‌ ಕೈಯಲ್ಲಿ ಹಿಡಿದುಕೊಂಡು ಗುರಿ ಇಡುತ್ತಿರುವ ಫೋಟೋವೊಂದು ಅದರೊಂದಿಗೆ ಹಂಚಿಕೆಯಾಗುತ್ತಿದೆ.

ಈ ಟ್ವಿಟ್‌ ಅನ್ನು  25,000 ಹೆಚ್ಚು ಜನ ಲೈಕ್ ಮಾಡಿದ್ದಾರೆ. ಜೊತೆಗೆ ಇದು  10,000 ಹೆಚ್ಚು ರಿಟ್ವಿಟ್ ಆಗಿದೆ.  “ಸುದ್ದಿಗೋಷ್ಠಿ ನಡೆಯುತ್ತಿದ್ದ ವೇಳೆ ಪೊಲೀಸ್ ಅಧಿಕಾರಿಯ ಮುಂದಿನ ಮೇಜಿನ ಮೇಲೆ  ಹಲವು ಲೋಗೋ ಮೈಕ್‌ಗಳು ಇರುವುದನ್ನು ಮತ್ತು ಪೊಲೀಸ್ ಅಧಿಕಾರಿ  ಕ್ಯಾಟರ್‌ಬಿಲ್‌ನ್ನು ಕೈಯಲ್ಲಿ ಎಳೆದು ಗುರಿಮಾಡಿ ಹಿಡಿದಿರುವುದನ್ನು ಕಾಣಬಹುದು.

ಈ ಚಿತ್ರವೂ ಫೇಸ್‌ಬುಕ್‌ನಲ್ಲಿ ಭಾರೀ ವೈರಲ್ ಆಗಿದೆ.

ಪೋಸ್ಟ್‌ನಲ್ಲಿ ಹೇಳಿರುವಂತೆ ಉಗಾಂಡಾ ಪೊಲೀಸ್ ಅಧಿಕಾರಿ ಪ್ರಶ್ನೆ ಕೇಳಿದ ವರದಿಗಾರವನಿಗೆ ಕ್ಯಾಟರ್‌ಬಿಲ್ ನಿಂದ ಹೊಡೆದಿದ್ದಾರೆ ಎಂದು ಪೋಸ್ಟ್‌ನಲ್ಲಿ ಮಾಡಲಾಗಿರುವ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಪೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ವೈರಲ್ ಆಗಿರುವ ಫೋಟೋ ಕಳೆದ ವರ್ಷದ್ದು ಎಂದು ತಿಳಿದು ಬಂದಿದೆ. ಕಂಪಾಲಾದಲ್ಲಿ ಪೊಲೀಸರು ನಡೆಸಿದ ದಾಳಿಯ ವೇಳೇ ಅಪಾಯಕಾರಿ ಕ್ಯಾಟರ್‌ಬಿಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಉಗಾಂಡಾ ರೇಡಿಯೋ ನೆಟ್‌ವರ್ಕ್ ವರದಿ ಮಾಡಿದೆ. ಆ ಸಮಯದಲ್ಲಿ, ಪೊಲೀಸ್ ವಕ್ತಾರ ಫ್ರೆಡ್ ಎನಂಗಾ ಪತ್ರಿಕಾಗೋಷ್ಠಿಯಲ್ಲಿ ಕ್ಯಾಟರ್‌ಬಲ್‌ ದಾಳಿಯಿಂದ ಆಗುವಂತಹ ಅಪಾಯಗಳ ಬಗ್ಗೆ ವಿವರಣೆಯನ್ನು ನೀಡುವ ವೇಳೆ ತೆಗೆದಿರುವ ಫೋಟೋ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಟ್ವಿಟ್ಟರ್‌ನಲ್ಲಿ ವೈರಲ್‌ ಆದ ಫೋಟೋಗಳು  2021 ರಲ್ಲಿ ನಡೆದ ಪತ್ರಿಕಾಗೋಷ್ಠಿ  ಯಲ್ಲಿ ತೆಗೆದಿರುವ ಫೋಟೊಗಳಾಗಿವೆ, ಇದಾವುದು 2022ರ ಪೋಟೊಗಳಲ್ಲ ಎಂದು ಖಾತ್ರಿಯಾಗಿದೆ. ಇದನ್ನು ಸ್ವತಃ ಉಗಾಂಡಾ ಪೊಲೀಸರೇ ಖಚಿತಪಡಿಸಿದ್ದಾರೆ.  ಆದರೆ ಇದೇ ಈಗ ವೈರಲ್‌ ಆಗಿದೆ. ಉಗಾಂಡಾ ಪೋಲೀಸ್ ಇಲಾಖೆಯ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಅದನ್ನು ನಕಲಿ ಸುದ್ದಿ ಎಂದು ಸ್ಪಷ್ಟನೆ ನೀಡಿದೆ.

ಪತ್ರಿಕಾಗೋಷ್ಠಿಯಲ್ಲಿ ಅಪರಾಧ ಗುಪ್ತಚರ ನಿರ್ದೇಶನಾಲಯವು ತನ್ನ ಗುಪ್ತಚರ ಕಾರ್ಯಾಚರಣೆಯ ವಿವರವನ್ನು ಬಹಿರಂಗಪಡಿಸಿದ್ದು  ದಾಳಿಯ ಸಮಯದಲ್ಲಿ ಹಲವಾರು ಫ್ಯಾಕ್ಟರಿ ನಿರ್ಮಿತ ಕವಣೆಯಂತ್ರಗಳನ್ನು( ಕ್ಯಾಟರ್‌ಬಿಲ್‌ಗಳನ್ನು) ವಶಪಡಿಸಿಕೊಂಡಿದೆ, ಅದನ್ನು ಹಿಂಸಾಚಾರದ ವೇಳೆ ಬಳಸುವ ಸಾಧನಗಳಾಗಿ  “ಸಮಾಜಘಾತುಕ ಶಕ್ತಿಗಳು” ಇವುಗಳನ್ನು ಉಪಯೋಗಿಸಲು ಶೇಖರಿಸಿ ಇಡುತ್ತಿದ್ದರು . ಕವಣೆಯಂತ್ರಗಳು, ಲೋಹದ ಸ್ಪೋಟಕಗಳನ್ನು ಅಥವಾ ಬೇರಿಂಗ್‌ಗಳನ್ನು ಹಾರಿಸುವ ಸಾಮರ್ಥ್ಯವನ್ನು ಹೊಂದಿದ್ದವು, ಹೀಗಾಗಿ ಉಗಾಂಡಾದ ಸುರಕ್ಷತೆ ಮತ್ತು ಭದ್ರತೆಗೆ ಅಪಾಯ ಮಾಡುತ್ತಿದ್ದವು, ಇಂತಹ ಹಿಂಸಾಚಾರದ ವಿರುದ್ಧ ನಾಗರಿಕರು ಜಾಗೃತರಾಗಬೇಕು ಎಂದು ಪೊಲೀಸರು ಉಗಾಂಡಾ ಪೋಲೀಸರು ಮನವಿ ಮಾಡಿದರು.

ಒಟ್ಟಾರೆಯಾಗಿ ಹೇಳುವುದಾದರೆ  ಉಗಾಂಡಾದ ಪೊಲೀಸ್ ವಕ್ತಾರ ಫ್ರೆಡ್ ಎನಾಂಗಾ ಅವರು ಕವಣೆಯಂತ್ರಗಳನ್ನು(ಕ್ಯಾಟರ್‌ಬಿಲ್) “ಸಮಾಜವಿರೋಧಿಗಳು” ಬಳಸುವುದರ ಅಪಾಯಗಳ ಕುರಿತು ಪತ್ರಿಕಾಗೋಷ್ಠಿಯನ್ನು ನಡೆಸುತ್ತಿರುವ ಫೋಟೋಗಳನ್ನು, ಹೊಸದಾಗಿ ಅಧಿಕಾರ ವಹಿಸಿಕೊಂಡ ಉಗಾಂಡಾ ಪೊಲೀಸ್‌ ವಕ್ತಾರರು “ಅಸಂಬಧ್ದ ಪ್ರಶ್ನೆ” ಕೇಳಿದ್ದಕ್ಕಾಗಿ ಪತ್ರಕರ್ತರನ್ನು ಹೊಡೆದಿದ್ದಾರೆ ಎಂಬ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ‘ಬಾಲ ಗಾಯಕ’ ದಿವಂಗತ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರ ಮೊಮ್ಮಗ ಅಲ್ಲ!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights