ರಾವಣನ ಹೆಂಡತಿ ಮಂಡೋದರಿ ಅಂದ್ರೆ ಯಾರು ಗೊತ್ತಾ….? ಗೊತ್ತಿಲ್ಲದಿದ್ದರೆ.. ಓದಿ…

ಒಂದು‌ ದಟ್ಟವಾದ ಕಾಡಿನಲ್ಲಿ ಋಷಿ‌ಮುನಿಗಳು ನಿತ್ಯ‌ ಪೂಜೆ ಹೋಮ, ಹವನ, ಪೂಜೆ ಕೈಂಕಾರ್ಯಗಳನ್ನ ಮಾಡಿಕೊಂಡು ಶಿವನ ಆರಾಧಿಸುತ್ತಾ ದಿನವನ್ನು ಕಳೆಯುತ್ತಿದ್ದರು. ಶಿವನ ನೈವೆದ್ಯಕ್ಕಾಗಿ ನೂರಾರು ಹಸುಗಳನ್ನು ಸಾಕಾಣಿಕೆ ಮಾಡಿಕೊಂಡು, ಹಸುಗಳ ಹಾಲನ್ನು ಮೊದಲಿಗೆ ದೇವರಿಗೆ ನೈವ್ಯದೆ ಮಾಡಿ ಇನ್ನುಳಿದ ಹಾಲನ್ನೂ ತಾವು ಸೇವಿಸಿ ಜೀವನವನ್ನೂ ಸಾಗಿಸಿಸುತ್ತಿದ್ದರು.

ದಿನನಿತ್ಯದ ದಿನಚರಿಯಂತೆ ಮುಂಜಾನೆ‌ ಎದ್ದ ಬಳಿಕ ಹಸುಗಳ ಹಾಲನ್ನು ಕರೆದು. ‌ ಒಂದು‌ ಮರದ ಕೇಳಗೆ ಹಾಲನ್ನ ಕಾಯಿಸಲು ಇರಿಸಿ, ಅವರು ನದಿಯ ಸ್ನಾನಕ್ಕೆ ಹೋಗುವರು. ಇವರ ನಿತ್ಯ ಮಾಡುವ ದಿನಚರಿ ಕಾರ್ಯವನ್ನು ಕಪ್ಪೆ ಒಂದು ಗಮನಿಸುತ್ತಿತ್ತು.

ಒಂದು ದಿನ ಋಷಿಮುನಿಗಳು‌ ದಿನನಿತ್ಯಾದಂತೆ ಕೆಲಸದಲ್ಲಿ‌ ಮಗ್ನವಾಗಿರುವಾಗ ಹಸುಗಳ‌‌ ಹಾಲನ್ನು ಕರೆದು‌ ಮರದ ಕೆಳಗೆ, ಒಲೆಯಂತೆ ನಿರ್ಮಿಸಿ, ಕಟ್ಟಿಗೆ ಬೆಂಕಿ ಹಚ್ಚಿ ಹಾಲನ್ನು ಕಾಯಿಸಲು ಇಟ್ಟು ನದಿಯಲ್ಲಿ ಸ್ನಾನ ಮಾಡಲು ತೆರಳಿದರು.

ಇವರನ್ನ ಗಮನಿಸುತ್ತಿದ್ದ ಕಪ್ಪೆ, ಅದೆ ವೇಳೆ ಹಾಲನ್ನು ಕಾಯಿಸಲಿಟ್ಟ ಮರದ ಮೇಲೆ ‌ ಗರುಡ ಪಕ್ಷಿ ‌ಒಂದು‌ ಹಾವನ್ನು ಬೇಟೆಯಾಡಿ, ಅದೆ ಮರದ ಮೇಲೆ‌ ಕುಳಿತು ಆ ಹಾವನ್ನು ‌ಆಹಾರವಾಗಿ ಸೇವಿಸುತ್ತಿತ್ತು. ಹಾವಿನ ಬಾಯಿಯಿಂದ ಅದರ ವಿಷ ಋಷಿಮುನಿಗಳ ಕಾಯಿಸಲಿಟ್ಟ ಹಾಲಿನಲ್ಲಿ ಒಂದೊಂದೆ‌ ಹನಿಯಾಗಿ ಬಿಳುತಿತ್ತು.

ಇದನ್ನೂ ಓದಿ: ಸುಗಂಧಿ ಬೇರು-17: ಸಾವಿತ್ರಿಬಾಯಿ ಫುಲೆ: ‘ದೇಶದ ಮೊದಲ ಶಿಕ್ಷಕಿ; ದಣಿವರಿಯದ ಸತ್ಯಶೋಧಕಿ’

ಅದನ್ನು ಗಮನಿಸಿದ ಕಪ್ಪೆ, ಒಂದು ಸಾರಿ ಯೋಚನೆ ಮಾಡಿತು ಋಷಿ ಮುನಿಗಳು ನದಿಯಲ್ಲಿ ಸ್ನಾನ ಮಾಡಿ ನೇರವಾಗಿ ಬಂದು ಈ ಹಾಲನ್ನು ಸೇವಿಸುತ್ತಾರೆ. ಪಾಪ ಅವರಿಗೆ ತಿಳಿದಿಲ್ಲಾ ಇದರಲ್ಲಿ ವಿಷ ವಿದೆ ಎಂದು ಏನೂ ತಪ್ಪು ಮಾಡದೆ ಋಷಿಮುನಿಗಳು ಏಕೆ ಪ್ರಾಣ ತ್ಯಾಗ ಮಾಡಬೇಕು ಎಂದು ಯೋಚಿಸಿ. ಅ ಕಪ್ಪೆ ಜಿಗಿಯುತ್ತಾ ಬಂದು ಅ ವಿಷಪೂರಿತ ಹಾಲಿನಲ್ಲಿ ಜಿಗಿದು ಪ್ರಾಣ ಬೀಡುತ್ತದೆ.

ಋಷಿಮುನಿಗಳು ಸ್ನಾನ ಮುಗಿಸಿ ಹಾಲನ್ನು ಸೇವಿಸಲು ಬರುತ್ತಾರೆ. ಅ ಹಾಲಿನಲ್ಲಿ ಕಪ್ಪೆ ಬಿದ್ದು ಸತ್ತಿರುವದನ್ನು ಗಮನಿಸಿ. ಅ ಹಾಲನ್ನು ನೆಲಕ್ಕೆ ಚಲುತ್ತಾರೆ. ‌ಅದರಲ್ಲಿ ಒಬ್ಬ ಋಷಿಮುನಿ, ದಿವ್ಯ ದೃಷ್ಠಿ ಹೊಂದಿರುತ್ತಾರೆ. ಸುತ್ತಮುತ್ತಾ ನೋಡುತ್ತಾರೆ ಮೇಲೆ ಗಮನಿಸಿದಾಗ ಮರದ ಮೇಲೆ ಗರುಡ ಪಕ್ಷಿ ಹಾವನು ಕುಕ್ಕಿ ಕುಕ್ಕಿ ತಿನ್ನುತ್ತಿರುತ್ತದೆ. ಅವರ ದಿವ್ಯದೃಷ್ಟಿಯಿಂದ ನಡೆದ ಘಟನೆ ತಿಳಿಯಲು ಆರಂಭಿಸುತ್ತಾರೆ ನಾವು ದಿನಪ್ರತಿ ಸ್ನಾನ ಮುಗಿಸಿ ಬರುವಾಗ ಈ ಕಪ್ಪೆ ದಡದಲ್ಲಿ ಕುಳಿತು ಕೂಗುತಿತ್ತು. ಇವತ್ತು ಏಕೆ ಈ ಹಾಲಿನಲ್ಲಿ ಪ್ರಾಣ ಬಿಟ್ಟಿದೆ ಎಂದು ವಿಚಾರ ಮಾಡುತ್ತಾ, ಅವರ ದಿವ್ಯದೃಷ್ಟಿಯಲ್ಲಿ ನೊಡುತ್ತಾರೆ.

ಇದನ್ನೂ ಓದಿ: ‘ಯಶೋಧರೆ ಮಲಗಿರಲಿಲ್ಲ’: ಹೆಣ್ಣಿನ ಅಸ್ಮಿತೆಯನ್ನು ಶೋಧಿಸುವ ಕಿರುನಾಟಕ

‌ಅವರಿಗೆ ಸಂಪೂರ್ಣ ವಿಷಯ ತಿಳಿಯುತ್ತದೆ. ಈ ಕಪ್ಪೆ ನಮಗಾಗಿ ತನ್ನ ಜೀವನ ಸಮರ್ಪಣೆ ಮಾಡಿದೆ ಎಂದು ತಿಳಿದು ಎಲ್ಲಾ ಋಷಿಮುನಿಗಳು ತಮ್ಮ ತಪ್ಪಸ್ಸು ಶಕ್ತಿಯಿಂದ ಅ ಕಪ್ಪೆಯನ್ನೂ ಒಂದು ಸುಂದರ ಹೆಣ್ಣಿನ ಆಕಾರದಲ್ಲಿ ಮರು ಜನ್ಮ ನೀಡುತ್ತಾರೆ.

‌‌ಅ ಕಪ್ಪೆಯಿಂದ ರೂಪಗೊಂಡ ಹೆಣ್ಣು ಎಷ್ಟು ಸುಂದರವಾಗಿರುತ್ತಾಳೆ ಎಂದರೆ ಪ್ರಪಂಚದಲ್ಲಿ ಅವಳಷ್ಟು ಯಾರು ಸುಂದರವಾಗಿ ಮತ್ತೆಯಾರು ಇರುಲ್ಲಾ. ‌ಅವಳಿಗೆ ಎಲ್ಲಾ ಋಷಿಮುನಿಗಳು ಆರ್ಶಿವಾದ ಮಾಡಿ ಇವತ್ತಿನ ದಿನದಿಂದ ನಿನ್ನ ಹೆಸರು ಮಂಡೋದರಿ. ನಿನಗೆ ಪ್ರಪಂಚದಲ್ಲೇ ಸುಂದರ ಹಾಗೂ ಶಿವನ ಪರಮ ಭಕ್ತ ನಿನ್ನನ ವಿವಾಹ ಮಾಡಿಕೊಳ್ಳುತ್ತಾನೆ ಎಂದು ಹೇಳುತ್ತಾರೆ.

‌‌ಆಗ ಮಂಡೋದರಿ ಋಷಿಮುನಿಗಳ ಕಾಲಿಗೆ ನಮಸ್ಕರಿಸಿ ಕೇಳುತ್ತಾಳೆ ಮಹಾಮುನಿಗಳೆ, ನನ್ನನೂ ವಿವಾಹವಾಗಲು ಬರುವ ಗಂಡನನ್ನು ನಾ ಹೇಗೆ ಗುರುತಿಸಿಲಿ ಎಂದು ಕೇಳಿದಾಗ ಮುನಿಗಳು ಹೆಳುತ್ತಾರೆ ನೀ ಏನೂ ಗುರಿತಿಸುವ ಅವಶ್ಯಕತೆ ಇರುವುದಿಲ್ಲಾ ಮಗಳೆ ಅವನು ಆಕಾಶದಲ್ಲಿ ಪುಷ್ಪಕ ವಿಮಾನದಲ್ಲಿ ಪ್ರಯಾಣಿಸುವಾಗ ನಿನ್ನ ರೂಪಕ್ಕೆ ಮನಸೋತು ನೀನು ಇರುವಲ್ಲೆ ಬಂದು ನಿನ್ನನ್ನು ವಿವಾಹವಾಗುತ್ತಾನೆ ಎಂದು ಹೇಳುತ್ತಾರೆ. ‌

‌ಪುಷ್ಪಕ ವಿಮಾನದಲ್ಲಿ ತೆರಳುತ್ತಿರುವ ರಾವಣ ಮಂಡೋದರಿ ನೋಡಿ ಅವಳ ರೂಪಕ್ಕೆ ಮನಸೋತು ಅವಳನ್ನು ವಿವಾಹವಾಗುತ್ತಾನೆ.

– ಪ್ರವೀಣ ಶಿರಸಂಗಿ, ಗದಗ


ಇದನ್ನೂ ಓದಿ: ಸಾರಾ ಶಗುಫ್ತಾ: ‘ನೋವಿನ ಗಾಯಗಳಿಗೆ ಸಾಕ್ಷಿಯಾದ ಕಾವ್ಯ’

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights