ಉತ್ತರಖಂಡ ಹಿಮಪ್ರವಾಹ : 179 ಕಾರ್ಮಿಕರಿಗಾಗಿ ಶೋಧಕಾರ್ಯ..!

ಫೆ.7ರಂದು ಉತ್ತರಖಂಡದ ಚಮೋಲಿ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಹಿಮಪ್ರವಾಹ ಉಂಟಾಗಿ 179 ಕಾರ್ಮಿಕರು ನಾಪತ್ತೆಯಾಗಿದ್ದಾರೆ. 

ಹೀಗಾಗಿ ನಾಪತ್ತೆಯಾದವರ ಶೋಧಕಾರ್ಯ ಇಂದಿಗೆ 5ನೇ ದಿನಕ್ಕೆ ಕಾಲಿಟ್ಟಿದ್ದುಕಾರ್ಮಿಕರನ್ನು ಹುಡುಕಲು ಡ್ರೋನ್ ಬಳಸಲಾಗುತ್ತಿದೆ. ತಮ್ಮ ಕುಟುಂಬಸ್ಥರನ್ನು ಹುಡುಕಿ ಕೊಡಿ ಎಂದು ಸ್ಥಳದಲ್ಲೇ ಮುಕ್ಕಾಮ್ ಹೂಡಿದ ಜನ ಐಟಿಬಿಪಿ, ಎನ್ ಡಿಆರ್ ಎಫ್ ತಂಡಗಳಿಗೆ ಒತ್ತಾಯ ಹೇರಿದ್ದಾರೆ. ಘಟನೆ ನಡೆದು 5 ದಿನಗಳು ಕ್ರಮಿಸುತ್ತಾ ಬಂದರೂ ಹೆಚ್ಚು ಕಾರ್ಮಿಕರ ಪತ್ತೆ ಕಾರ್ಯ ನಿಧಾನವಾಗುತ್ತಿದೆ ಎಂದು ಜನ ಆರೋಪಿಸಿದ್ದಾರೆ.

ಇದುವರೆಗೆ ಸುಮಾರು 32 ಮೃತದೇಹಗಳನ್ನು ಪತ್ತೆ ಮಾಡಲಾಗಿದ್ದು, ಡಿಎನ್ ಎ ಮೂಲಕ ಮೃತದೇಹಗಳನ್ನು ಗುರುತು ಪತ್ತೆ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಡಿಎನ್ ಎ ಯನ್ನು ತುಂಬಾ ಸುರಕ್ಷಿತವಾಗಿ ಇಡಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ರಕ್ಷಣಾ ಕಾರ್ಯದಲ್ಲಿ ಸುಮಾರು 600 ಮಂದಿ ರಕ್ಷಣಾ ಕಾರ್ಯಕರ್ತರು ತೊಡಗಿಕೊಂಡಿದ್ದಾರೆ. ನಾಪತ್ತೆಯಾದವರ ಪತ್ತೆಗೆ ತೀವ್ರ ಶೋಧ ನಡೆಯುತ್ತಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights