ಕಿಕ್ ಲಾಕ್: ಸಿಲಿಕಾನ್ ಸಿಟಿಯಲ್ಲಿ ಡ್ರಗ್ಸ್ ದಂಧೆ : ಫುಡ್ಬಾಲ್ ಆಟಗಾರ ಭಾಗಿ!

ಸಿಲಿಕಾನ್ ಸಿಟಿಯಲ್ಲಿ ಎಗ್ಗಿಲ್ಲದೇ ಡ್ರಗ್ಸ್ ದಂಧೆ ನಡೆಯುತ್ತಿದೆ. ಕೆಲವು ತಿಂಗಳುಗಳ ಹಿಂದೆ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಂಡಿದ್ದ ಮಾದಕಲೋಕ ಮತ್ತೆ ಬೆಂಗಳೂರಿನ ಹೋಟೆಲ್ ನಲ್ಲಿ ಕಾಣಿಸಿಕೊಂಡಿದೆ. ಬೆಂಗಳೂರಿನ ಹೋಟೆಲ್ ನಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಡ್ರಗ್ಸ್ ಪೆಡ್ಲರ್ ಗಳನ್ನು ಪೊಲೀಸರು ಬಂಧಿಸಿದ್ದಾರೆ.

ವೀಕೆಂಡ್ ಬಂದ್ರೆ ಸಾಕು ಬೆಂಗಳೂರಲ್ಲಿ ಡ್ರಗ್ಸ್ ಪಾರ್ಟಿಗಳ ಅಬ್ಬರ ಜೋರಾಗಿರುತ್ತದೆ. ಸ್ಟಾರ್ ಹೋಟೇಲ್ ನಲ್ಲಿ ಪಾರ್ಟಿ ಮಾಡುತ್ತಿದ್ದ ಗ್ಯಾಂಗ್ ಖಾಕಿ ಕೈಸೇರಿದೆ. ನಗರದ ಹರಿಕ್ ಬೊಟೆಕ್ ಹೋಟೆಲ್ ನಲ್ಲಿ ಈ ಪಾರ್ಟಿ ನಡೆಯುತ್ತಿದ್ದು ಪ್ರತೀ ಶುಕ್ರವಾರ ರೂಂ ಬುಕ್ ಮಾಡುತ್ತಿದ್ದ ಡ್ರಗ್ಸ್ ಗ್ಯಾಂಗ್ ಕಸ್ಟಮರ್ ಗಳಿಗೆ ರೂಂಗಳಿಗೇ ಡ್ರಗ್ಸ್ ಸಪ್ಲೈ ಮಾಡುತ್ತಿತ್ತು.

ಟೂರಿಸ್ಟ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಮೊಹ್ಮದ್ ಮುಜಾಯಿಲ್ ಶ್ರೀಲಂಕಾದ ಕ್ಯಾಸಿನೋ ಲಿಂಕ್ ಹೊಂದಿದ್ದನು. ಜೊತೆಗೆ ಈ ಡ್ರಗ್ಸ್ ಮಾರಾಟ ಜಾಲದಲ್ಲಿ ಬಿಡಿಎ ಬ್ರೋಕರ್ ರವಿಕುಮಾರ್ ಶಾಮೀಲಾಗಿದ್ದಾನೆ. ಪ್ರಭಾವಿಗಳ ಸಹಾಯದಿಂದ ರವಿಕುಮಾರ್ ಐಶಾರಾಮಿ ಜೀವನ ಮಾಡುತ್ತಿದ್ದಾನೆ. ಇವರು ಪಕ್ಕಾ ಪ್ಲಾನ್ ಮಾಡಿ ಇಂಟರ್ ನ್ಯಾಷನಲ್ ಡ್ರಗ್ಸ್ ತರಿಸುತ್ತಿದ್ದರು.

ಮಾತ್ರವಲ್ಲ ವಿದೇಶಿ ಫುಡ್ಬಾಲ್ ಆಟಗಾರ ಈ ದಂಧೆಯಲ್ಲಿ ಅರೆಸ್ಟ್ ಆಗಿದ್ದಾನೆ. 2015ರಲ್ಲಿ ಕ್ರೀಡಾ ವೀಸಾ ಪಡೆದು ಭಾರತಕ್ಕೆ ಬಂದಿದ್ದ ಖಲಿಫಾನಿಂದಾ ರವಿ, ಮಹ್ಮದ್ ಗೆ ಡ್ರಗ್ಸ್ ಸಪ್ಲೈ ಆಗುತ್ತಿತ್ತು. ಕುಮಾರಸ್ವಾಮಿ ಲೇಔಟ್ ನಲ್ಲಿ ದೊಡ್ಡ ವ್ಯಕ್ತಿಗಳ ಮಕ್ಕಳೊಂದಿಗೆ ಪಾರ್ಟಿ ಆಯೊಜಿಸಲಾಗುತ್ತಿತ್ತು. ಹೋಟೆಲ್ ನಲ್ಲಿ ಶಾಬುದ್ದೀನ್ ಎಂಬಾತ ರವಿಯೊಂದಿಗೆ ಸೇರಿ ದೊಡ್ಡ ದೊಡ್ಡ ಉದ್ಯಮಿ ಮಕ್ಕಳು, ಸಾಕಷ್ಟು ದುಡ್ಡಿರುವವರನ್ನು ಟಾರ್ಗೇಟ್ ಮಾಡಿ ಪಾರ್ಟಿ ಮಾಡುತ್ತಿದ್ದರು.

ಹೋಟೆಲ್ ನಲ್ಲಿ ತೋರಿಕೆಗೆ ರೂಂ ನಲ್ಲಿ ಉಳಿದುಕೊಂಡಂತೆ ಕಾಣಿಸಿಸುತ್ತಿದ್ದಾರೆ. ರಾತ್ರಿ ಹೊತ್ತು ಮೋಜು ಮಸ್ತಿ, ಎಣ್ಣೆ, ದಮ್ ನೊಂದಿಗೆ ಕಿಕ್ ಕೊಡ ಮಾದಕ ಲೋಕವೇ ಸೃಷ್ಟಿಯಾಗಿರುತ್ತಿತ್ತು. ಸದ್ಯ ಈ ಡ್ರಗ್ಸ್ ಗ್ಯಾಂಗ್ ಕೈ ಸೇರಿದೆ. ಜೆಪಿ ನಗರದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಡ್ರಗ್ಸ್ ಜಾಲ ಹಿಡಿದು ಹೊರಟ ಪೊಲೀಸರಿಗೆ ದೊಡ್ಡ ಕುಳಗಳು ಪ್ರತ್ಯಕ್ಷವಾಗುತ್ತಿವೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights