Fact check: ಗುಜರಾತಿನ ಭಾವನಗರದಲ್ಲಿ ಮುಸ್ಲಿಮರಿಂದ ಹಿಂದೂಗಳಿಗೆ ಬೆದರಿಕೆ ಎಂದು ಸುಳ್ಳು ಸುದ್ದಿ ಹರಡಿದ OpIndia

ಗುಜರಾತ್‌ನ ಭಾವನಗರದಲ್ಲಿ ಮುಸ್ಲಿಮರು ಹಿಂದೂಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ವೊಂದು ಹರಿದಾಡುತ್ತಿದೆ. ವೈರಲ್ ಪೋಸ್ಟ್‌ನಲ್ಲಿ 100 ರಿಂದ 150 ಮುಸ್ಲಿಮರ ಗುಂಪೊಂದು ಭಾವನಗರದಲ್ಲಿರುವ ಸಾತ್ವಿಕ್ ವಸತಿ ಸಮುಚ್ಚಯಕ್ಕೆ ನುಗ್ಗಿ  ಫ್ಲಾಟ್ ಮಾಲೀಕರಿಗೆ (ಹಿಂದೂ) ಬೆದರಿಕೆ ಹಾಕಿದೆ ಮತ್ತು ತಮ್ಮ ಫ್ಲಾಟ್‌ಗಳನ್ನು ಮಾರಾಟ ಮಾಡುವುದಾಗಿ ಬೆದರಿಕೆ ಹಾಕಿದೆ ಎಂದು ಹೇಳಲಾಗುತ್ತಿದೆ.

ಈ ಸುದ್ದಿಯನ್ನು ಬಲಪಂಥೀಯ ಪ್ರತಿಪಾದಕ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಲಾಗಿದೆ. OpIndia ವರದಿ ಮಾಡಿದ್ದು ವರದಿಯಲ್ಲಿ ಅವರು ದೇಶ್ ಗುಜರಾತ್ ಅನ್ನು ಉಲ್ಲೇಖಿಸಿ ಬರೆದಿದ್ದಾರೆ, “100 ರಿಂದ 150 ಜನರ ಮುಸ್ಲಿಂ ಗುಂಪು ಅಪಾರ್ಟ್‌ಮೆಂಟ್ ಗೆ ನುಗ್ಗಿ ಫ್ಲಾಟ್‌ಗಳಲ್ಲಿ ವಾಸಿಸುವ ನಿವಾಸಿಗಳಿಗೆ ತಮ್ಮ ಫ್ಲಾಟ್‌ಗಳನ್ನು ಮಾರಾಟ ಮಾಡಿ ಜಾಗ ಖಾಲಿ ಮಾಡುವಂತೆ ಬೆದರಿಕೆ ಹಾಕಿದೆ ಎಂದು ಹೇಳಲಾಗಿದೆ. ಹಾಗೆಯೇ ದಿವ್ಯಾ ಭಾಸ್ಕರ್‌ ,ದೇಶ್ ಗುಜರಾತ್ಹಿಂದೂ ಪೋಸ್ಟ್ ನಂತಹ ಮಾಧ್ಯಮಗಳು ಕೂಡ ವೈರಲ್ ಪ್ರತಿಪಾದನೆಯನ್ನು ವರದಿ ಮಾಡಿದೆ.

OpIndia ದ ಸಂಪಾದಕರಾದ ನಿರ್ವಾ ಮೆಹ್ತಾ ಅವರು ತಮ್ಮ ಟ್ವಿಟರ್ ನಲ್ಲಿ ಈ ಪೋಸ್ಟ್‌ನ್ನು ಮೇಲಿನ ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ.  “ಫ್ಯ್ಲಾಟ್‌ಗಳನ್ನು ಮಾರಾಟ ಮಾಡಿ ಜಾಗ ಖಾಲಿ ಮಾಡಿ ಅಥವಾ ಮುಂದೆ ಆಗುವ ಪರಿಣಾಮಗಳನ್ನು ಎದುರಿಸಿ, ನೀವು ಏನು ಮಾಡುತ್ತೀರಿ ಎಂಬುದು ನಮಗೆ ತಿಳಿದಿದೆ’ – ಭಾವನಗರದಲ್ಲಿರುವ ಹಿಂದೂಗಳನ್ನು ಮುಸ್ಲಿಂ ಗುಂಪು ವಸತಿ ಸಮುಚ್ಚಯಗಳನ್ನು ಬಿಟ್ಟು ಹೋಗುವಂತೆ ಬೆದರಿಕೆ ಹಾಕಿದೆ ಎಂದು ಪೋಸ್ಟ್‌ ಹಾಕಿದ್ದಾರೆ.

ಗುಜರಾತ್‌ನ ಭಾವನಗರದಲ್ಲಿರುವ ಸಾತ್ವಿಕ್ ವಸತಿ ಸಮುಚ್ಚಯಕ್ಕೆ ಮುಸ್ಲಿಮ್ ಪ್ರವೇಶಿಸಿ ಹಿಂದೂ ಫ್ಲಾಟ್ ಮಾಲೀಕರಿಗೆ ತಮ್ಮ ಫ್ಲಾಟ್‌ಗಳನ್ನು ಮಾರಾಟ ಮಾಡುವಂತೆ ಧಮ್ಕಿ ಹಾಕಿದ್ದಾರೆ ಎಂದು ಹೇಳಲಾಗಿದ್ದು ಇಲ್ಲದಿದ್ದರೆ ಮುಂದಿನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ.

ಹಾಗಿದ್ದರೆ ಗುಜರಾತ್ ನ ಭಾವನಗರದ ಪ್ರದೇಶದಲ್ಲಿ ಮುಸ್ಲಿಂ ಗುಂಪು ಹಿಂದೂಗಳಿಗೆ ಬೆದರಿಕೆ ಹಾಕಿದ್ದಾರೆ ಎಂದು  Op India ಮತ್ತು ಇತರೆ ಸುದ್ದಿ ವರದಿಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ

ಫ್ಯಾಕ್ಟ್‌ಚೆಕ್:

ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವರದಿಯ ಪ್ರಕಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಸುದ್ದಿಯನ್ನು ಪರಿಶೀಲಿಸಲಾಗಿದ್ದು ಅದು ಸುಳ್ಳು ಎಂದು ಕಂಡುಹಿಡಿದಿದೆ. ಭಾವನಗರ ಎಸ್ಪಿ ಅವರೊಂದಿಗೆ ಮಾತನಾಡಿರುವ ಫ್ಯಾಕ್ಟ್‌ಚೆಕ್ ತಂಡ ಅವರಿಂದ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಪೊಲೀಸರು ವೈರಲ್ ಹೇಳಿಕೆಯನ್ನು ನಿರಾಕರಿಸಿದ್ದು, ದೇಶ್ ಗುಜರಾತ್ ಪ್ರಕಟಿಸಿದ ಲೇಖನದಲ್ಲಿ ಸಾತ್ವಿಕ್ ವಸತಿ ಸಂಕೀರ್ಣದ ನಿವಾಸಿಗಳು, ಪೊಲೀಸರಿಂದ ಅಥವಾ  ಯಾವುದೇ ವ್ಯಕ್ತಿಯ ಹೇಳಿಕೆ ಪಡೆದಿಲ್ಲ.

ಆರಂಭಿಕ ತನಿಖೆಯ ಸಮಯದಲ್ಲಿ, ಭಾವನಗರ ಪೊಲೀಸರು ಮಾಡಿದ ಟ್ವೀಟ್  ಲಭ್ಯವಾಗಿದೆ. ಅವರು ವೈರಲ್ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಪೊಲೀಸರ ಟ್ವೀಟ್‌ನ ಹೇಳಿಕೆ ಹೀಗಿದೆ, “ಭಾವನಗರದಲ್ಲಿರುವ ಹಿಂದೂ ನಿವಾಸಿಗಳಿಗೆ ಮುಸ್ಲಿಮರ ಗುಂಪು ತಮ್ಮ ಫ್ಲಾಟ್‌ಗಳನ್ನು ಮಾರಾಟ ಮಾಡುವಂತೆ ಬೆದರಿಕೆ ಹಾಕುತ್ತಿದೆ” ಎಂಬ ಲೇಖನವನ್ನು ದಿನಪತ್ರಿಕೆಯೊಂದು ಪ್ರಕಟಿಸಿದೆ. ನಗರದಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ, ಪೊಲೀಸರು ಕಾನೂನು ತನಿಖೆಯನ್ನು ಪ್ರಾರಂಭಿಸಿದ್ದಾರೆ ಮತ್ತು ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಹೇಳಿದೆ.

ಡಿಜಿಪಿ ಕೂಡ ಭಾವ್‌ನಗರ್ ಪೊಲೀಸರ ಟ್ವೀಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ಇದನ್ನು ನಕಲಿ ಸುದ್ದಿ ಎಂದು ಹೇಳಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಸುದ್ದಿಯು ಸುಳ್ಳು ಎಂದು ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ಮಾಡಿದ ಟ್ವೀಟ್ ಅನ್ನು ಇಲ್ಲಿ ನೋಡಬಹುದು. ಅವರು ತಮ್ಮ ಟ್ವೀಟ್‌ನಲ್ಲಿ ಹೀಗೆ ಬರೆದಿದ್ದಾರೆ: “ಗೌರವಾನ್ವಿತ ಸ್ನೇಹಿತರೇ, ‘ಭಾವನಗರದಲ್ಲಿ ತಮ್ಮ ಫ್ಲಾಟ್‌ಗಳನ್ನು ಮಾರಾಟ ಮಾಡುವಂತೆ ಮುಸ್ಲಿಮರ ಗುಂಪು ಹಿಂದೂ ನಿವಾಸಿಗಳಿಗೆ ಬೆದರಿಕೆ ಹಾಕಿದೆ’ ಎಂದು ನಾನು ಓದಿದ್ದೇನೆ. ನಗರದಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ. ಪೊಲೀಸರು ಕಾನೂನು ತನಿಖೆಯನ್ನು ಪ್ರಾರಂಭಿಸಿದ್ದಾರೆ ಮತ್ತು ನೋಟಿಸ್ ನೀಡಲಾಗಿದೆ. ದಯವಿಟ್ಟು ಸುಳ್ಳು ಸುದ್ದಿಗಳನ್ನು ವೈರಲ್ ಮಾಡಬೇಡಿ.

ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ತಂಡವು ಜೈಪಾಲ್ ಸಿಂಗ್ ರಾಥೋಡ್, ಎಸ್ಪಿ ಭಾವನಗರ ಅವರನ್ನು ಸಂಪರ್ಕಿಸಿದೆ. ದಿ ಲಾಜಿಕಲ್ ಇಂಡಿಯನ್ ಜೊತೆ ಮಾತನಾಡಿದ ಅವರು, “ಗುಜರಾತ್‌ನ ಭಾವನಗರದಲ್ಲಿರುವ ಸಾತ್ವಿಕ್ ವಸತಿ ಸಂಕೀರ್ಣಕ್ಕೆ ಮುಸ್ಲಿಂ ಗುಂಪು ನುಗ್ಗಿ ಹಿಂದೂ ಫ್ಲಾಟ್ ಮಾಲೀಕರಿಗೆ ತಮ್ಮ ಫ್ಲಾಟ್‌ಗಳನ್ನು ಮಾರಾಟ ಮಾಡುವಂತೆ ಬೆದರಿಕೆ ಹಾಕುತ್ತಿದೆ ಎಂಬ ಆರೋಪ ಸಂಪೂರ್ಣ ಸುಳ್ಳು. ಅಂತಹ ಯಾವುದೇ ಘಟನೆ ನಡೆದಿಲ್ಲ. ನಮ್ಮ ತಂಡ ಅಲ್ಲಿಗೆ ಭೇಟಿ ನೀಡಿದ್ದು, ಆದರೆ ಅಂತಹ ಯಾವುದೇ ಘಟನೆಯನ್ನು ನಾವು ಅಲ್ಲಿ ನೋಡಲಿಲ್ಲ. ಅಲ್ಲಿ ಎಲ್ಲವೂ ಚೆನ್ನಾಗಿದೆ. ಈ ನಕಲಿ ಸುದ್ದಿಯನ್ನು ಹಂಚಿಕೊಂಡ (ಮಾಧ್ಯಮಗಳು) ವಿರುದ್ಧ ನಾವು ಕಾನೂನು ತನಿಖೆಯನ್ನು ಪ್ರಾರಂಭಿಸಿದ್ದೇವೆ ಮತ್ತು ಅವರ ವಿರುದ್ಧ ನೋಟಿಸ್ ಜಾರಿ ಮಾಡಿದ್ದೇವೆ ಎಂದಿದ್ದಾರೆ.

ಭಾವನಗರ ಎಸ್‌ಪಿ ನೀಡಿದ ಹೇಳಿಕೆಯಿಂದ, ಗುಜರಾತ್‌ನ ಭಾವನಗರದ ಹಿಂದೂ ಫ್ಲಾಟ್ ಮಾಲೀಕರಿಗೆ ಮುಸ್ಲಿಂ ಜನರು ತಮ್ಮ ಫ್ಲಾಟ್‌ಗಳನ್ನು ಮಾರಾಟ ಮಾಡುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ವೈರಲ್ ಹೇಳಿಕೆಯು ಸಂಪೂರ್ಣವಾಗಿ ಸುಳ್ಳು ಎಂಬುದು ಸ್ಪಷ್ಟವಾಗಿದೆ. ಭಾವನಗರದಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ ಮತ್ತು ಗುಜರಾತ್ ಗೃಹ ಸಚಿವ ಹರ್ಷ ರಮೇಶ್ ಸಾಂಘ್ವಿ ವೈರಲ್ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ. ಹಾಗಾಗಿ ವೈರಲ್ ಆಗಿರುವ ಸುದ್ದಿ ಸುಳ್ಳು ಎಂದು ಖಾತ್ರಿಯಾಗಿದೆ.

ಕೃಪೆ: ದಿ ಲಾಜಿಕಲ್ ಇಂಡಿಯನ್


ಇದನ್ನು ಓದಿರಿ: Fact check: ಪಾಕ್ ವ್ಯಕ್ತಿಯಿಂದ ‘ಹಿಂದೂ ಹುಡುಗಿ’ಯ ಬಲವಂತದ ಮತಾಂತರ! ವಾಸ್ತವವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights