“ಮೋದಿ ಸಾಬ್ ಶಿಕ್ಷಕರು ಸಣ್ಣ ಮಕ್ಕಳಿಗೆ ಯಾಕೆ ಹೆಚ್ಚು ಹೋಂ ವರ್ಕ್ ನೀಡುತ್ತಾರೆ?” ಪುಟ್ಟ ಬಾಲಕಿ ಪ್ರಶ್ನೆ!

“ಮೋದಿ ಸಾಬ್ ಶಿಕ್ಷಕರು ಸಣ್ಣ ಮಕ್ಕಳಿಗೆ ಯಾಕೆ ಹೆಚ್ಚು ಕೆಲಸ ನೀಡುತ್ತಾರೆ?” ಸಣ್ಣ ಮಕ್ಕಳ ಮೇಲೆ ಶಾಲಾ ಶಿಕ್ಷಕರು ಹಾಕುವ ಹೊರೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆರು ವರ್ಷದ ಬಾಲಕಿ ಆರಾಧ್ಯ ದೂರನ್ನು ನೀಡಿದ್ದಾಳೆ. ಈ ಪುಟ್ಟ ಬಾಲಕಿಯ ದೂರನ್ನು ಕೇಳಿದ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು, ಶಾಲಾ ಮಕ್ಕಳ ಮೇಲೆ ಹೋಂ ವರ್ಕ್ ಭಾರವನ್ನು ಕಡಿಮೆ ಮಾಡಲು 48 ಗಂಟೆಗಳ ಒಳಗೆ ನೀತಿ ರೂಪಿಸುವಂತೆ ಶಾಲಾ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಪುಟ್ಟ ಬಾಲಕಿ ತನ್ನ ಆನ್‌ಲೈನ್ ತರಗತಿಗಳು ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಿ ಮಧ್ಯಾಹ್ನ 2 ಗಂಟೆಯವರೆಗೆ ಮುಂದುವರಿಯುತ್ತದೆ ಎಂದು ದೂರಿದ್ದಾರೆ. “ಮೋದಿ ಸಾಬ್ ಶಿಕ್ಷಕರು ಸಣ್ಣ ಮಕ್ಕಳಿಗೆ ಏಕೆ ಹೆಚ್ಚು ಹೋಂ ವರ್ಕ್ ನೀಡುತ್ತಾರೆ? 6 ಮತ್ತು 7 ನೇ ತರಗತಿಯಲ್ಲಿರುವ ಹಿರಿಯ ಮಕ್ಕಳಿಗೆ ಹೆಚ್ಚಿನ ಕೆಲಸವನ್ನು ನೀಡಬೇಕು” ಎಂದು ಪುಟ್ಟ ಬಾಲಕಿ ಪ್ರಶ್ನೆ ಮಾಡಿದ್ದಾಳೆ.

“ಬಾಲ್ಯದ ಮುಗ್ಧತೆ ದೇವರ ಕೊಡುಗೆಯಾಗಿದೆ. ಅವರ ದಿನಗಳು ಉತ್ಸಾಹಭರಿತವಾಗಿರಬೇಕು, ಸಂತೋಷ ಮತ್ತು ಆನಂದದಿಂದ ತುಂಬಿರಬೇಕು” ಎಂದು ಹುಡುಗಿಯ ಸಂದೇಶಕ್ಕೆ ಪ್ರತಿಕ್ರಿಯೆಯಾಗಿ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಟ್ವೀಟ್ ಮಾಡಿದ್ದಾರೆ.

ಆರು ವರ್ಷದ ಆರಾಧ್ಯ ಮನವಿಯು ಟ್ವಿಟ್ಟರ್ನಲ್ಲಿ ಭಾರಿ ಪ್ರತಿಕ್ರಿಯೆಯನ್ನು ಗಳಿಸಿದೆ. ಹಲವಾರು ಬಳಕೆದಾರರು ವೀಡಿಯೊವನ್ನು “ಅಂತರ್ಜಾಲದಲ್ಲಿ ಅತ್ಯಂತ ಮೋಹಕವಾದ ವಿಷಯ” ಎಂದು ಬ್ರಾಂಡ್ ಮಾಡಿದರೆ, ಇನ್ನೂ ಅನೇಕರು ಪುಟ್ಟ ಹುಡುಗಿ ಎದ್ದಿರುವ ಕಳವಳಗಳು ನ್ಯಾಯಸಮ್ಮತವೆಂದು ಗಮನಹರಿಸಬೇಕು ಎಂದಿದ್ದಾರೆ.

“ಮೋದಿ ಜಿ ನೀವು ಅನೇಕ ಯುವ ಮನಸ್ಸುಗಳೊಂದಿಗೆ ಈ ಯುವತಿಯ ದುಃಖಗಳನ್ನು ಕೇಳಬೇಕು. ಆನ್‌ಲೈನ್ ತರಗತಿಗಳು ಎಂದು ಕರೆಯಲ್ಪಡುವ ಈ ಚಿತ್ರಹಿಂಸೆಯಿಂದ ಅವರನ್ನು ಉಳಿಸಿ” ಎಂದು ಟ್ವಿಟರ್ ಬಳಕೆದಾರರು ಹೇಳಿದ್ದಾರೆ, ” ಮಕ್ಕಳು 5, 6 ವರ್ಷಕ್ಕೆ ಫೋನ್ ಬಳಸುತ್ತಿದ್ದಾರೆ ಅಂತಹ ಚಿಕ್ಕ ವಯಸ್ಸಿನಲ್ಲಿ ಅವರ ಕಣ್ಣುಗಳು ಮತ್ತು ಡಾರ್ಕ್ ಸರ್ಕಲ್ ಮೇಲೆ ಪರಿಣಾಮ ಬೀರಬಹುದು “ಅನ್ನೊದನ್ನು ಹೈಲೈಟ್ ಮಾಡಿದ್ದಾರೆ.

ಮಾರಣಾಂತಿಕ ವೈರಸ್ ಹರಡುವುದನ್ನು ತಡೆಗಟ್ಟುವ ಕ್ರಮವಾಗಿ, ಜಮ್ಮು ಮತ್ತು ಕಾಶ್ಮೀರದ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳನ್ನು ಜೂನ್ 15 ರವರೆಗೆ ಮುಚ್ಚಲಾಗಿದೆ.

Spread the love

Leave a Reply

Your email address will not be published. Required fields are marked *