ತಮಿಳು ನಟಿಯನ್ನು ವಿವಾಹವಾಗುವುದಾಗಿ ನಂಬಿಸಿ ಮೋಸ; ಮಾಜಿ ಸಚಿವನ ವಿರುದ್ದ ಅತ್ಯಾಚಾರ ದೂರು ದಾಖಲು!

ತಮಿಳು ಸಿನಿಮಾ ನಟಿಯನ್ನು ವಿವಾಹವಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ನಟಿಯೊಬ್ಬರು ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಎಐಎಡಿಎಂಕೆ ಮಾಜಿ ಸಚಿವ ಎಂ.ಮಣಿಕಂದನ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ.

ಮಾಜಿ ಸಚಿವರು ಮದುವೆಯ ನೆಪದಲ್ಲಿ ತನ್ನನ್ನು ಮೋಸ ಮಾಡಿರುವುದಾಗಿ ನಟಿ ದೂರಿನಲ್ಲಿ ಆರೋಪಿಸಿದ್ದಾರೆ. ಮಾಜಿ ಸಚಿವ ಮಣಿಕಂದನ್ ವಿರುದ್ಧ ಅತ್ಯಾಚಾರ, ಚೆನ್ನೈನ ಅಡ್ಯಾರ್ ಆಲ್ ವುಮೆನ್ ಪೊಲೀಸರು ಐಪಿಸಿ ಕಾಯ್ದೆಯಡಿ ಕ್ರಿಮಿನಲ್ ಬೆದರಿಕೆ, ಮಹಿಳೆಯ ಒಪ್ಪಿಗೆ ಇಲ್ಲದೆ ಗರ್ಭಪಾತ ಮಾಡಿಸಿರುವುದರ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಜಿ ಸಚಿವ ಮಣಿಕಂದನ್ ಕಳೆದ ಐದು ವರ್ಷಗಳಿಂದ ತನ್ನ ಜತೆ ಸಂಬಂಧ ಹೊಂದಿರುವುದಾಗಿ ನಟಿ ದೂರಿನಲ್ಲಿ ತಿಳಿಸಿದ್ದಾರೆ. ತಾನು ಗರ್ಭಿಣಿಯಾದಾಗ ಬಲವಂತದಿಂದ ಗರ್ಭಪಾತ ಮಾಡಿಸಿರುವುದಾಗಿಯೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ತಮ್ಮಿಬ್ಬರ ನಡುವಿನ ಸಂಬಂಧದಿಂದಾಗಿ ಮೂರು ಬಾರಿ ಗರ್ಭಪಾತ ಮಾಡಿಸಿದ್ದು, ಮಾಜಿ ಸಚಿವ ಪ್ರತಿ ಬಾರಿಯೂ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾರೆ. ಮದುವೆಯಾದ ಮೇಲೆ ಮಗುವಿಗೆ ಜನನ ನೀಡಲಿ ಎಂದು ಆತ ಹೇಳಿರುವುದಾಗಿ ನಟಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ವರದಿ ವಿವರಿಸಿದೆ.

ಒಂದು ವೇಳೆ ದೇಶವನ್ನು ಬಿಟ್ಟು ಹೋಗದಿದ್ದರೆ ತನ್ನ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡುವುದಾಗಿ ಮಣಿಕಂದನ್ ಬೆದರಿಕೆ ಒಡ್ಡಿದ್ದಲ್ಲದೇ, ತಮ್ಮ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಒಂದೊಂದು ಹೆಣ ಬಿದ್ದರೂ ಬಿಜೆಪಿಗರ ಜೇಬಿಗೆ ಹಣ ಬಿದ್ದಂತೆ; ಅದಕ್ಕಾಗಿ BJPಯಲ್ಲಿ ಕಿತ್ತಾಟವಿದೆ: ಕಾಂಗ್ರೆಸ್‌ ಆರೋಪ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights