ಆಸ್ಪತ್ರೆಯಿಂದ ಮನೆಗೆ ತೆರಳುವಾಗ ಮಹಿಳೆ ಮೇಲೆ ಅತ್ಯಾಚಾರ…!

ಕೊರೊನಾ ಸೋಂಕಿನಿಂದ ಗುಣಮುಖಳಾಗಿ ಆಸ್ಪತ್ರೆಯಿಂದ ಮನೆಗೆ ತೆರಳುವಾಗ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಘಟನೆ ಅಸ್ಸಾಂನಲ್ಲಿ ನಡೆದಿದೆ.

ಅಸ್ಸಾಂನ ಚಾರೈಡಿಯೊ ಜಿಲ್ಲೆಯ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ತನ್ನ ಮಗಳ ಜೊತೆ ಕೋವಿಡ್ -19 ಪರೀಕ್ಷೆ ಮಾಡಿಕೊಂಡಿದ್ದಾರೆ. ಅವರ ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಬಂದ ಬಳಿಕ ಅವರಿಗೆ ಮನೆಗೆ ಮರಳಲು ತಿಳಿಸಲಾಗಿದೆ. ಕರ್ಫ್ಯೂ ಇರುವುದರಿಂದ ಅವರಿಗೆ ಮನೆಗೆ ಹೋಗಲು ಯಾವುದೇ ವಾಹನಗಳು ಸಿಗಲಿಲ್ಲ. ಆಸ್ಪತ್ರೆಯಿಂದ ಮಹಿಳೆ ಮನೆಗೆ ಹೋಗಲು ಸುಮಾರು 25 ಕಿ.ಮೀ. ದೂರ ನಡೆಯಬೇಕು. ಆಂಬ್ಯುಲೆನ್ಸ್ ಕೇಳಿದರೂ ಪ್ರಯೋಜನವಾಗಿಲ್ಲ. ಆಸ್ಪತ್ರೆಯಲ್ಲಿ ರಾತ್ರಿ ಕಳೆಯಬಹುದೇ ಎಂದು ಮಹಿಳೆ ಕೇಳಿದರೂ ಸಿಬ್ಬಂದಿಗಳು ಒಪ್ಪಿಗೆ ಸೂಚಿಸಿಲ್ಲ. ಅನಿವಾರ್ಯವಾಗಿ ಮಹಿಳೆ ಮನೆಗೆ ಮಗಳೊಂದಿಗೆ ಹೋಗಲೇಬೇಕಾಯಿತು. ಮನೆಗೆ ತೆರಳುತ್ತಿದ್ದಾಗ ಇಬ್ಬರು ಆರೋಪಿಗಳು ಮಹಿಳೆಯನ್ನು ಅಪಹರಿಸಿ, ಹತ್ತಿರದ ಚಹಾ ತೋಟಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ.

“ನಾವು ಋಣಾತ್ಮಕತೆಯನ್ನು ಪರೀಕ್ಷಿಸಿದಾಗ, ಆಸ್ಪತ್ರೆಯ ಸಿಬ್ಬಂದಿಗಳು ನಮ್ಮನ್ನು ಮನೆಗೆ ಹೋಗಬೇಕೆಂದು ಹೆಳಿದರು. ನಾವು ಮನೆಗೆ ಮರಳಲು ಆಂಬ್ಯುಲೆನ್ಸ್ ಕೇಳಿದೆವು, ಆದರೆ ಅವರು ಅದನ್ನು ನಿರಾಕರಿಸಿದರು. ಮಧ್ಯಾಹ್ನ 2.30 ಕ್ಕೆ ನಮ್ಮನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ನಾವು ಆಸ್ಪತ್ರೆಯಲ್ಲಿ ರಾತ್ರಿ ಇರಬಹುದೇ ಎಂದು ನಾವು ಅವರನ್ನು ಕೇಳಿದೆವು ಕೋವಿಡ್ ಕರ್ಫ್ಯೂ ಇರುವುದರಿಂದ, ಆಸ್ಪತ್ರೆಯ ಅಧಿಕಾರಿಗಳು ಇಲ್ಲ ಎಂದು ಹೇಳಿದರು, “ಎಂದು ಸಂತ್ರಸ್ತೆ ಮಗಳು ಸುದ್ದಿಗಾರರ ಮುಂದೆ ತನ್ನ ನೋವು ತೋಡಿಕೊಂಡಿದ್ದಾಳೆ.

“ನಾವು ನಡೆಯಲು ಪ್ರಾರಂಭಿಸಿದೆವು. ನಂತರ ಇಬ್ಬರು ಪುರುಷರು ನಮ್ಮನ್ನು ಬೆನ್ನಟ್ಟಿದರು. ನಾವು ಓಡಿಹೋದೆವು ಆದರೆ ಅವರು ನನ್ನ ತಾಯಿಯನ್ನು ಹಿಡಿದು ಕರೆದುಕೊಂಡು ಹೋದರು. ನಾನು ಓಡಿಹೋಗಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದೇನೆ. ಎರಡು ಗಂಟೆಗಳ ನಂತರ ನನ್ನ ತಾಯಿಯನ್ನು ಕಂಡುಕೊಂಡೆ” ಎಂದು ಅವಳು ಹೇಳಿದ್ದಾಳೆ.

ಚಾರೈಡಿಯೊ ಹಿರಿಯ ಪೊಲೀಸ್ ಅಧಿಕಾರಿ ಸುಧಾಕರ್ ಸಿಂಗ್ ಮಾತನಾಡಿ, ಆರೋಪಿಗಳನ್ನು ಬಂಧಿಸಲು ತನಿಖೆ ನಡೆಯುತ್ತಿದೆ ಮತ್ತು ಮಹಿಳೆಯ ವೈದ್ಯಕೀಯ ಪರೀಕ್ಷಾ ವರದಿಯನ್ನು ನಿರೀಕ್ಷಿಸಲಾಗಿದೆ.

ಕೋವಿಡ್ ಋಣಾತ್ಮಕ ರೋಗಿಗಳಿಗೆ ಮನೆಗೆ ಮರಳಲು ಆಂಬ್ಯುಲೆನ್ಸ್‌ಗಳನ್ನು ಒದಗಿಸಬೇಕು ಎಂದು ಅಸ್ಸಾಂ ಆರೋಗ್ಯ ಸಚಿವ ಕೇಶಬ್ ಮಹಂತಾ ಹೇಳಿದ್ದರೂ ಇಲ್ಲಿ ಆಂಬ್ಯುಲೆನ್ಸ್‌ಗಳು ನಿರ್ಲಕ್ಷ್ಯ ತೋರಿವೆ.

ಅಸ್ಸಾಂ ಟೀ ಟ್ರೈಬ್ ಸ್ಟೂಡೆಂಟ್ಸ್ ಅಸೋಸಿಯೇಷನ್ ​​ಈ ವಿಷಯದ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights