ಏ.14 ಕೊನೆಗೊಳ್ಳುತ್ತಾ ಲಾಕ್ ಡೌನ್? ರೈಲ್ವೆ, ವಿಮಾನ ಟಿಕೇಟ್ ಬುಕ್ಕಿಂಗ್ ಈಗಲೇ ಆರಂಭ…!
ಕೋವಿಡ್ -19 ಮಾರಣಾತಿಂಕ ವೈರಸ್ ದಿನದಿಂದ ದಿನಕ್ಕೆ ಮನುಷ್ಯನ ದೇಹವನ್ನು ಎಗ್ಗಿಲ್ಲದೇ ಪ್ರವೇಶಿಸುತ್ತಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ ದೇಶದಲ್ಲಿ ಹೆಚ್ಚಾಗುತ್ತಲೇ ಇದೆ. ಹೀಗಿರುವಾಗ ಏಪ್ರಿಲ್ 14 ರ ನಂತರ ರೈಲ್ವೆ, ವಿಮಾನ ಟಿಕೇಟ್ ಬುಕ್ಕಿಂಗ್ ಶುರುವಾಗಿದೆ.
ಹೌದು.. ಕೇಂದ್ರ ಸರ್ಕಾರ ಏಪ್ರಿಲ್ 14, ರವರೆಗೆ ದೇಶದಲ್ಲಿ ಲಾಕ್ ಡೌನ್ ಘೋಷಿಸಿದೆ. ಇದರ ಬೆನ್ನೆಲ್ಲೆ ಜನ ಮನೆ ಬಿಟ್ಟು ಹೊರಗೆ ಬರುತ್ತಿಲ್ಲ. ದೇಶದ ಆರ್ಥಿಕತೆ ಪಾತಾಳಕ್ಕಚ್ಚಿದೆ. ಸಣ್ಣ ವ್ಯಾಪಾರಿಗಳಿಂದ ಹಿಡಿದು ದೊಡ್ಡ ದೊಡ್ಡ ಬಿಜಿನೆಸ್ ಗಳು ಮಕಾಡೆ ಮಲಗಿವೆ. ಹೀಗಿದ್ದರೂ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ ಕಂಡಿಲ್ಲ. ದೇಶದಲ್ಲಿ ಪ್ರತಿನಿತ್ಯ ನೂರಕ್ಕಿಂತ ಹೆಚ್ಚು ಜನರಿಗೆ ಸೋಂಕು ಇರುವುದು ವರದಿಯಾಘುತ್ತಿವೆ. ಹೀಗಿರುವಾಗ ಏಪ್ರಿಲ್ 14 ರವರೆಗೆ ಇದ್ದ ಲಾಕ್ ಡೌನ್ ಮುಂದುವರೆಯುತ್ತಾ..? ಅಥವಾ 14ಕ್ಕೇ ಎಲ್ಲವೂ ಸಹಜ ಸ್ಥಿತಿಗೆ ಬರುತ್ತಾ..? ಅನ್ನೋ ವಿಚಾರವೇ ದೃಢಪಟ್ಟಿಲ್ಲ. ಯಾವುದೇ ಖಚಿತ ಮಾಹಿತಿ ಇಲ್ಲದೇ ರೈಲ್ವೆ ಹಾಗೂ ವಿಮಾನ ಹಾರಾಟಕ್ಕೆ ಬುಕ್ಕಿಂಗ್ ಶುರುವಾಗಿವೆ.
ಇತ್ತೀಚೆಗೆ ಈ ಪರಿಸ್ಥಿತಿ ಇನ್ನೂ ಮೂರು ತಿಂಗಳ ಕಾಲ ಮುಂದುವರಿಯಲಿದೆ ಎಂಬ ಊಹಾಪೋಹ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೂಡಾ ಸ್ಪಷ್ಟನೆ ನೀಡಿತ್ತು. ಇದೀಗ ಅದಕ್ಕೆ ಪೂರಕ ಎಂಬಂತೆ ರೈಲ್ವೆ, ವಿಮಾನ ಪ್ರಯಾಣದ ಟಿಕೆಟ್ ಬುಕ್ಕಿಂಗ್ ಆರಂಭಗೊಂಡಿದೆ ಎಂದು ಎಬಿಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ರೈಲ್ವೆ, ವಿಮಾನ ಟಿಕೆಟ್ ಬುಕಿಂಗ್ ಮಾಡಿಕೊಳ್ಳುತ್ತಿರುವುದರಿಂದ ಕೇಂದ್ರ ಸರ್ಕಾರ 21 ದಿನಗಳ ನಂತರ ಲಾಕ್ ಡೌನ್ ಮತ್ತೆ ಮುಂದುವರಿಸುವುದಿಲ್ಲ ಎಂಬುದರ ಸ್ಪಷ್ಟ ಸೂಚನೆಯಾಗಿದೆ ಎಂದು ವರದಿ ಹೇಳಿದೆ. ಏಪ್ರಿಲ್ 15ರಿಂದ ಪ್ರಯಾಣಿಕರ ಸೀಟುಗಳನ್ನು ಕಾಯ್ದಿರಿಸಿಕೊಳ್ಳಲು ಭಾರತೀಯ ರೈಲ್ವೆ ಇಲಾಖೆ ಆರಂಭಿಸಿದೆ. ಏಪ್ರಿಲ್ 15ರಿಂದ ದೇಶಾದ್ಯಂತ ಸಂಚರಿಲು ಅನುಕೂಲವಾಗಲಿದೆ ಎಂದು ವರದಿ ವಿವರಿಸಿದೆ.
ಅತೀ ದೊಡ್ಡ ಸಾರಿಗೆ ವ್ಯವಸ್ಥೆ ಭಾರತೀಯ ರೈಲ್ವೆ ಸಾರಿಗೆ. ಬಹುತೇಕ ಕೂಡಲೇ ಸಂಚಾರ ಆರಂಭವಾಗಲಿಕ್ಕಿಲ್ಲ. ಹಂತ, ಹಂತವಾಗಿ ರೈಲ್ವೆ ಸಂಚಾರ ಆರಂಭಿಸುವ ಸಾಧ್ಯತೆ ಇದ್ದಿರಬಹುದು ಎಂದು ವರದಿ ತಿಳಿಸಿದೆ. ಐಆರ್ ಸಿಟಿಸಿ ವೆಬ್ ಸೈಟ್ ನ ರಿಸರ್ವೇಶನ್ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಈಗಾಗಲೇ ಆರಂಭಗೊಂಡಿದೆ.

