ಹೈದರಾಬಾದ್‌ನಲ್ಲಿ ಭಾರೀ ಮಳೆ : ಕಾಂಪೌಂಡ್ ಕುಸಿದು 2 ತಿಂಗಳ ಮಗು ಸೇರಿ 9 ಮಂದಿ ಸಾವು!

ಹೈದರಾಬಾದ್ ನಲ್ಲಿ ನಿನ್ನೆ ತಡರಾತ್ರಿ ಭಾರಿ ಮಳೆಯಿಂದಾಗಿ ಹತ್ತು ಮನೆಗಳ ಮೇಲೆ ಕಾಂಪೌಂಡ್ ಗೋಡೆ ಕುಸಿದು ಎರಡು ತಿಂಗಳ ಮಗು ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಕುಸಿದ ಗೋಡೆಯಿಂದ ಬಂಡೆಗಳು ಮನೆಗಳ ಮೇಲೆ ಬಿದ್ದವೆ. ಶವಗಳು ಅವಶೇಷಗಳಲ್ಲಿ ಸಿಲುಕಿಕೊಂಡಿವೆ. ಶವಗಳ ಶೋದಕಾರ್ಯ ಮುಂದುವರೆದಿದೆ. ಭಾರೀ ಮಳೆಯಿಂದಾಗಿ ಜನರು ಹೊರಹೋಗದಂತೆ ಹೈದರಾಬಾದ್ ಅಧಿಕಾರಿಗಳು ಎಚ್ಚರಿಸಿದ್ದಾರೆ.

ತೆಲಂಗಾಣ ಮತ್ತು ನೆರೆಯ ಆಂಧ್ರಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಕಳೆದ 48 ಗಂಟೆಗಳಲ್ಲಿ ತೆಲಂಗಾಣದಲ್ಲಿ ಹನ್ನೆರಡು ಜನರು ಸಾವನ್ನಪ್ಪಿದ್ದಾರೆ. ರಾಜ್ಯದ ಹಲವಾರು ಭಾಗಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳಲ್ಲಿ ಪ್ರವಾಹ ಉಂಟಾಗಿದ್ದು ಕೆಲವು ತಗ್ಗು ಪ್ರದೇಶಗಳು ಮುಳುಗಿವೆ. ಇದರಿಂದ ತೆಲಂಗಾಣದ ಕನಿಷ್ಠ 14 ಜಿಲ್ಲೆಗಳಿಗೆ ತೊಂದರೆಯಾಗಿದೆ.

ಹೈದರಾಬಾದ್‌ನಲ್ಲಿ ಹಲವಾರು ಪ್ರದೇಶಗಳು ಪ್ರವಾಹಕ್ಕೆ ಸಿಲುಕಿವೆ. ಪ್ರವಾಹಕ್ಕೆ ಸಿಲುಕಿರುವ ಪ್ರದೇಶಗಳಲ್ಲಿನ ವಾಹನಗಳು ಚಲಿಸಲು ಸಾಧ್ಯವಾಗದ ಕಾರಣ ಸಂಚಾರಕ್ಕೆ ತೊಂದರೆಯಾಗಿದೆ. ಹೈದರಾಬಾದ್‌ಗೆ ನೀರು ಪೂರೈಸುವ ಹಿಮಾಯತ್ ಸಾಗರ್ ಅಣೆಕಟ್ಟಿನ ಫ್ಲಡ್ ಗೇಟ್‌ಗಳನ್ನು ಕಳೆದ ರಾತ್ರಿ ತಡವಾಗಿ ತೆರೆಯಲಾಯಿತು.

ತೆಲಂಗಾಣ ರಾಜಧಾನಿಯಲ್ಲಿ ಕಳೆದ ರಾತ್ರಿ ಗೋಡೆ ಕುಸಿದ ಬಗ್ಗೆ ಹೈದರಾಬಾದ್ ಲೋಕಸಭಾ ಸಂಸದ ಅಸದುದ್ದೀನ್ ಒವೈಸಿ ಟ್ವೀಟ್ ಮಾಡಿದ್ದಾರೆ.

ಮಳೆಯಿಂದಾಗಿ ಉಸ್ಮಾನಿಯಾ ವಿಶ್ವವಿದ್ಯಾಲಯ ಇಂದು ಮತ್ತು ನಾಳೆ ನಿಗದಿಯಾಗಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿದೆ. ಬಂಗಾಳಕೊಲ್ಲಿ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಒಡಿಶಾದಲ್ಲಿ ಭಾರಿ ಮಳೆಯಾಯಿತು. ಆಂಧ್ರಪ್ರದೇಶದ ನೂರಕ್ಕೂ ಹೆಚ್ಚು ಸ್ಥಳಗಳಲ್ಲಿ 11 ರಿಂದ 24 ಸೆಂ.ಮೀ ಮಳೆಯಾಯಿತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights