ಪತ್ನಿ ಗಂಡನ ಗುಲಾಮಳಲ್ಲ; ಆತನೊಂದಿಗೆ ವಾಸಿಸುವಂತೆ ಒತ್ತಾಯಿಸುವಂತಿಲ್ಲ: ಸುಪ್ರೀಂ ಕೋರ್ಟ್‌

ನೀವು ಏನು ಯೋಚಿಸುತ್ತೀರಿ? ಅಂತಹ ಆದೇಶವನ್ನು ನಾವು ರವಾನಿಸಬಹುದೇ? ನಿಮ್ಮ ಪತ್ನಿ ನಿಮ್ಮೊಂದಿಗೆ ಬಲವಂತವಾಗಿ ಇರುವಂತೆ ಸೂಚಿಸಲು ಅವಳು ಗುಲಾಮಳೇ? ಎಂದು ವ್ಯಕ್ತಿಯೊಬ್ಬರನ್ನು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ.

ತನ್ನ ಪತ್ನಿಯು ತನ್ನೊಂದಿಗೆ ವಾಸಿಸಲು ಮರಳಿ ಬರಬೇಕು ಎಂದು ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಹೇಮಂತ್ ಗುಪ್ತಾ ಅವರ ಪೀಠವು,  “ಹೆಂಡತಿ ಗಂಡನ ಗುಲಾಮಳಲ್ಲ,  ಅವನೊಂದಿಗೆ ವಾಸಿಸಲು ಒತ್ತಾಯಿಸುವಂತಿಲ್ಲ” ಹೇಳಿದೆ.

2013 ರಲ್ಲಿ ಮದುವೆಯಾದ ನಂತರ ವರದಕ್ಷಿಣೆಗಾಗಿ ತನ್ನ ಪತಿಯಿಂದ ಚಿತ್ರಹಿಂಸೆಗೊಳಗಾಗಿದ್ದ ಮಹಿಳೆ, ತನ್ನ ಪತಿಯನ್ನು ತೊರೆದು ಹೋಗಿದ್ದಳು. ಅಲ್ಲದೆ, 2015ರಲ್ಲಿ ಅವರ ದೈನಂದಿನ ಜೀವನ ನಿರ್ವಹಣೆಗಾಗಿ ಜೀವನಾಂಶಕ್ಕಾಗಿ ಗೋರಖ್‌ಪುರ ಕುಟುಂಬ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಆಕೆಗೆ ಪ್ರತಿ ತಿಂಗಳು 20,000 ನೀಡುವಂತೆ ಪತಿಗೆ ಸೂಚಿಸಿ ಆದೇಶ ನೀಡಿತ್ತು. ಈ ನಂತರ ಆತ, ತನ್ನ ಪತ್ನಿ ತನ್ನೊಂದಿಗೆ ಬದುಕಲು ಬರಬೇಕು ಎಂದು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದನು.

ತನ್ನ ಪತ್ನಿ ತನ್ನೊಂದಿಗೆ ಬರಲೇಬೇಕು ಎಂದು ನಿರಂತರವಾಗಿ ಹೇಳುತ್ತಿದ್ದದ್ದನ್ನು ಗಮನಿಸಿದ ಸುಪ್ರೀಂ ಕೋರ್ಟ್‌, “ಮಹಿಳೆಯು ಗುಲಾಮಳೆ? ಹೆಂಡತಿ ಆದವಳು ಗಂಡನಿಗೆ ಗುಲಾಮಳೇ? ಇಂತಹ ಆದೇಶವನ್ನು ನೀಡುವಂತೆ ನೀವು ನಮ್ಮನ್ನು ಕೇಳುತ್ತಿದ್ದೀರಿ, ನೀವು ಬಯಸಿದಂತೆ ನಾವು ಆದೇಶ ನೀಡಬೇಕೇ? ಆಕೆಗೆ ಹೋಗಲು ಇಷ್ಟವಿಲ್ಲದ ಸ್ಥಳಕ್ಕೆ ಹೋಗುವಂತೆ ನಾವು ಹೇಳಲಾಗುತ್ತದೆಯೇ? ಆಕೆಯನ್ನು ಗುಲಾಮಳಂತೆ ಕಳುಹಿಸಲಾಗುವುದೇ? ಆಕೆ ಗುಲಾಮಳಲ್ಲ. ಆಕೆಗೆ ಇಷ್ಟವಿಲ್ಲದ ಕಡೆಗೆ ಹೋಗುವಂತೆ ಒತ್ತಾಸಲು ಸಾಧ್ಯವಿಲ್ಲ ಎಂದು ತನ್ನ ಆದೇಶದಲ್ಲಿ ಹೇಳಿದ್ದ, ವ್ಯಕ್ತಿಯ ಅರ್ಜಿಯನ್ನು ತಿರಸ್ಕರಿಸಿದೆ.

ಇದನ್ನೂ ಓದಿ: ನನ್ನ ಅಜ್ಜಿ ಇಂಧಿರಾಗಾಂಧಿ ತುರ್ತುಪರಿಸ್ಥಿತಿ ಹೇರಿದ್ದು ತಪ್ಪು: ರಾಹುಲ್‌ಗಾಂಧಿ

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights