ಗೋಕಾಕ್ ನಲ್ಲಿ ರಮೇಶ್ ಬೆಂಬಲಿಗರಿಂದ ಬಸ್ ಮೇಲೆ ಕಲ್ಲು ತೂರಾಟ : ಗಾಜುಗಳು ಪುಡಿ ಪುಡಿ!
ಗೋಕಾಕ್ ನಲ್ಲಿ ರಮೇಶ್ ಬೆಂಬಲಿಗರಿಂದ ಬಸ್ ಮೇಲೆ ಕಲ್ಲು ತೂರಾಟ ನಡೆದಿದ್ದು ಬಸ್ ಗಾಜುಗಳು ಪುಡು ಪುಡಿಯಾಗಿವೆ.
ಕೇಂದ್ರ ಮಟ್ಟದಲ್ಲಿ ಬಿಜೆಪಿ ಸರ್ಕಾರದಲ್ಲಿ ಕಿಂಗ್ ಮೇಕರ್ ಆಗಿದ್ದ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ವಿಚಾರಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.ರಾಸಲೀಲೆ ಸಿಡಿ ವಿಚಾರಕ್ಕೆ ರಾಜೀನಾಮೆ ನೀಡಿದ ರಮೇಶ್ ಜಾರಕಿಹೊಳಿ ಸಚಿವ ಸ್ಥಾನ ಸ್ವೀಕರಿಸಿ ಒಂದು ವರ್ಷ 26ದಿನದಲ್ಲೇ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಹೀಗಾಗಿ ಆಕ್ರೋಶಗೊಂಡ ರಮೇಶ್ ಜಾರಕಿಹೊಳಿ ಬೆಂಬಲಿಗರು ಗೋಕಾಕ್ ನಲ್ಲಿ ಪ್ರತಿಭಟನೆ ನಡೆಸಿ ಗುಂಡಾಗಾರಿಕೆ ಪ್ರದರ್ಶಿಸಿದ್ದಾರೆ.
ಇಂದು ಗೋಕಾಕ್ ನಲ್ಲಿ ರಮೇಶ್ ಬೆಂಬಲಿಗರು ಕಲ್ಲು ಹಿಡಿದು ಬಲವಂತವಾಗಿ ಮಾರ್ಕೇಟ್ ಬಂದ್ ಮಾಡಿದ್ದಾರೆ. ಮಾತ್ರವಲ್ಲದೇ ಸರ್ಕಾರಿ ಬಸ್ ಗಳ ಮೇಲೆ ಕಲ್ಲು ತೂರಾಟ ಮಾಡಿದ್ದು ಸುಮಾರು 6ಕ್ಕೂ ಹೆಚ್ಚು ಬಸ್ ಗಳ ಗಾಜು ಪುಡಿ ಪುಡಿಯಾಗಿವೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಬಸ್ ತಡೆಯುವ ಪ್ರಯತ್ನ ನಡೆದಿತ್ತು. ಆದರೆ ಬಸ್ ನಿಲ್ಲಿಸದ ಕಾರಣ ಬಸ್ ಗಳಿಗೆ ಕಲ್ಲು ತೂರಾಟ ಮಾಡಿದ್ದಾರೆ. ಹೀಗಾಗಿ ಸಾರ್ವಜನಿಕ ಆಸ್ತಿ ಹಾನಿಗೊಳಗಾಗಿದೆ.
ಹೆಚ್ಚಿನ ಪೊಲೀಸರು ಭದ್ರತೆಗೆ ಹಾಕದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಪ್ರಯಾಣಿಕರಿಗೆ ಗಾಯಗಳಾದ ಮಾಹಿತಿ ಲಭ್ಯವಾಗಿಲ್ಲ.

