14 ತಿಂಗಳ ಬಳಿಕ ಗೃಹಬಂಧನದಿಂದ ಮುಕ್ತಿ ಪಡೆದ ಜೆಕೆ ಮಾಜಿ ಸಿಎಂ ಮೆಹಬೂಬಾ ಮುಫ್ತಿ

ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರು ಒಂದು ವರ್ಷ ಎರಡು ತಿಂಗಳ ನಂತರ  ಗೃಹ ಬಂಧನದಿಂದ ಬಿಡುಗಡೆ ಪಡೆದಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕಿದ್ದ ವಿಶೇಷ ಸ್ಥಾನಮಾನ (ಆರ್ಟಿಕಟ್ 370)ವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ಬಳಿಕ, ಜಮ್ಮು ಕಾಶ್ಮೀರದಲ್ಲಿ ನಡೆದ ತೀವ್ರ ಪ್ರತಿಭಟನೆ ಬಳಿಕ ರಾಜ್ಯದ ಹಲವು ನಾಯಕರನನ್ನು ಗೃಹಬಂಧನಕ್ಕೆ ದೂಡಲಾಗಿತ್ತು.

ವಿಶೇಷ ಸ್ಥಾನಮಾನ ರದ್ದತಿ ಬಳಿಕ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಮೆಹಬೂಬಾ ಮುಫ್ತಿ ಅವರನ್ನು ಗೃಹಬಂಧನಕ್ಕೀಡು ಮಾಡಲಾಗಿತ್ತು. ಗೃಹ ಬಂಧನಕ್ಕೆ ಗುರಿಯಾಗಿದ್ದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಬರೊಬ್ಬರಿ 14 ತಿಂಗಳ ಬಳಿಕ ಇಂದು ಬಿಡುಗಡೆಯಾಗಿದ್ದಾರೆ.

ಇದನ್ನೂ ಓದಿ: ಚೀನಾದೊಂದಿಗೆ ಮಾತುಕತೆ ಸಾಧ್ಯವಾದ ಮೇಲೆ, ಪಾಕ್‌ ಜೊತೆ ಯಾಕಿಲ್ಲ? ಫಾರೂಕ್ ಅಬ್ದುಲ್ಲಾ

2019ರ ಆಗಸ್ಟ್ 5ರಂದು ಕೇಂದ್ರ ಸರ್ಕಾರ ಆರ್ಟಿಕಲ್ 370 ಅನ್ನ ತೆಗೆದು ಹಾಕಿದ ಸಂದರ್ಭದಲ್ಲಿ ಮುಫ್ತಿ ಅವರನ್ನ ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಈ ವರ್ಷದ ಫೆಬ್ರವರಿ 5ರಂದು ಸಾರ್ವಜನಿಕ ಸುರಕ್ಷತೆ ಕಾಯ್ದೆ ಪಿಎಸ್​ಎ ಅಡಿಯಲ್ಲಿ ಅವರ ಬಂಧನದ ಅವಧಿಯನ್ನು ಮುಂದುವರಿಸಲಾಯಿತು. ಏಪ್ರಿಲ್ ತಿಂಗಳವರೆಗೆ ಅವರನ್ನು ಎರಡು ಸರ್ಕಾರಿ ಕಟ್ಟಡಗಳಲ್ಲಿ ವಶದಲ್ಲಿಟ್ಟುಕೊಳ್ಳಲಾಗಿತ್ತು. ಏಪ್ರಿಲ್ 7ರಿಂದ ಮನೆಯಲ್ಲೇ ಅವರ ಗೃಹ ಬಂಧನವಾಗಿತ್ತು. ಗೃಹ ಬಂಧನದ ಅವಧಿ ಮುಗಿದ ಬಳಿಕವೂ ಕಣಿವೆ ಆಡಳಿತ ಅವರ ಗೃಹ ಬಂಧನದ ಅವಧಿಯನ್ನು ಮೂರು ತಿಂಗಳಿಗೆ ವಿಸ್ತಿರಿಸಲಾಗಿತ್ತು. ಸರ್ಕಾರದ ಈ ನಡೆಯನ್ನು ಮೆಹಬೂಬಾ ಮುಫ್ತಿ ಪುತ್ರಿ ಇಲ್ತಿಜಾ ಮುಫ್ತಿ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಮೆಹಬೂಬಾ ಮುಫ್ತಿ ಅವರ ಗೃಹ ಬಂಧನವನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿದ ನಂತರ ಮೆಹಬೂಬಾ ಮುಫ್ತಿ ಅವರನ್ನು ಗೃಹ ಬಂಧನದಿಂದ ಬಿಡುಗಡೆ ಮಾಡಲಾಗಿದೆ.


ಇದನ್ನೂ ಓದಿ: ಕಾಶ್ಮೀರ ಆಡಳಿತದಲ್ಲಿ ಮುಸ್ಲಿಮರನ್ನು ತೆಗೆದು, ಹಿಂದೂಗಳನ್ನು ನೇಮಿಸಲಾಗಿದೆ: ಫಾರೂಕ್ ಅಬ್ದುಲ್ಲಾ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights