FACT CHECK | ‘ಮತ್ತೆ ತಿಹಾರ್ ಜೈಲಿಗೆ ಕೇಜ್ರಿವಾಲ್’ ಎಂಬ ಬ್ಯಾನರ್‌ಅನ್ನು ಜೈಲಿನ ಗೇಟ್‌ ಬಳಿ ಹಾಕಲಾಗಿದೆಯೇ?

2025 ಫೆಬ್ರವರಿ 5ರಂದು ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಸಂಬಂಧಿಸಿದ ಪೋಸ್ಟ್‌ವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ಪ್ರಸಾರವಾಗುತ್ತಿದ್ದು, ಕೇಜ್ರಿವಾಲ್‌ ಮತ್ತೆ ಜೈಲಿಗೆ ಬರುತ್ತಾರೆ ಎಂದು ಹೇಳುವ ಬ್ಯಾನರ್‌ ಅನ್ನು ತಿಹಾರ್‌ ಜೈಲಿನ ಹೊರಗೆ ಹಾಕಲಾಗಿದೆ ಎಂಬ ಚಿತ್ರ ಸೋಷಿಯಲ್‌ ಮೀಡಿಯಾದಲ್ಲಿ ಪ್ರಸಾರವಾಗುತ್ತಿದೆ.

ತಿಹಾರ್ ಜೈಲಿನ ಹೊರಗೆ ಅರವಿಂದ್ ಕೇಜ್ರಿವಾಲ್ ಅವರ ಚಿತ್ರ ಇರುವ ಬ್ಯಾನರ್‌ನ್ನು ಒಳಗೊಂಡ ಫೋಟೋವೊಂದನ್ನು ಫೇಸ್‌ಬುಕ್ ಬಳಕೆದಾರ ಡಾ.ಸತ್ಯಂ ಕುಮಾರ್ ಜನವರಿ 6ರಂದು ಹಂಚಿಕೊಂಡಿದ್ದು,““ಜೈಲಿನ ಹೊರಗಡೆ ಬ್ಯಾನರ್‌ನಲ್ಲಿ ಈ ರೀತಿ ಬರೆಯಲಾಗಿದೆ. ಕೇಜ್ರಿವಾಲ್‌ ಮತ್ತೆ ಬರುತ್ತಾರೆ. ದಿಲ್ಲಿಯ ಚೋರನಿಗೆ ತಿಹಾರ್‌ಗೆ ಸ್ವಾಗತ,” ಎಂದು ಬರೆದು ಈ ಚಿತ್ರವನ್ನು ಅವರು ಹಂಚಿಕೊಂಡಿದ್ದಾರೆ..

 @Karan4BJP ಎನ್ನುವ ಇನ್ನೊರ್ವ ‘ಎಕ್ಸ್‌’ ಬಳಕೆದಾರರ ಖಾತೆಯಲ್ಲೂ ಈ ಚಿತ್ರ ಕಂಡು ಬಂದಿದೆ. ಅವರು ಇದೇ ರೀತಿ ತಮ್ಮ ಖಾತೆಯಲ್ಲೂ “ತಿಹಾರ್ ಜೈಲಿನ ಹೊರಗೆ ಒಂದು ಬ್ಯಾನರ್ ನೋಡಿದೆ. ಅದರಲ್ಲಿ ಕೇಜ್ರಿವಾಲ್ ಮತ್ತೆ ಬರುತ್ತಾರೆಎಂದು ಬರೆದಿರುವುದನ್ನು ಕಂಡೆ” ಎಂದು ಹಂಚಿಕೊಂಡಿದ್ದಾರೆ.

ಇದೇ ಹೇಳಿಕೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಇದೇ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಅವುಗಳನ್ನು  ಇಲ್ಲಿ ಮತ್ತು  ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಆದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಚಿತ್ರವಿಎಉವ ಬ್ಯಾನರ್‌ಅನ್ನು ತಿಹಾರ್ ಜೈಲಿನ ಹೊರಗೆ ಹಾಕಲಾಗಿದೆಯೇ ಎಂದು ಪರಿಶೀಲಿಸಿದಾಗ, ವೈರಲ್ ಫೋಟೋವನ್ನು  2023 ಜೂನ್ 23ರಂದು ಮಿಲೇನಿಯಮ್ ಪೋಸ್ಟ್ ಎಂಬ ವೆಬ್‌ಸೈಟ್‌ನಲ್ಲಿ ಸುದ್ದಿಯೊಂದಿಗೆ ಬಳಸಿರುವುದು ಕಂಡುಬಂದಿದೆ.

ಅಲ್ಲದೇ, ಇಂಡಿಯಾ ಟಿವಿ ವೆಬ್‌ಸೈಟ್‌ನಲ್ಲಿ ಅತ್ಯಂತ ಹಳೆಯ ಚಿತ್ರ ಕಂಡುಬಂದಿದ್ದು, ಈ ಚಿತ್ರವನ್ನು  2021  ನವೆಂಬರ್ 22ರಂದು ಸುದ್ದಿಯಲ್ಲಿ ಬಳಸಲಾಗಿದೆ. ಪಿಟಿಐ ಚಿತ್ರಕ್ಕೆ ಮನ್ನಣೆ ನೀಡಿದೆ.‌

ವೈರಲ್ ಚಿತ್ರವನ್ನು ನೈಜ ಚಿತ್ರದೊಂದಿಗೆ ತುಲನೆ ಮಾಡಿ ನೋಡಿದಾಗ, ಮೂಲ ಚಿತ್ರದ ಮೇಲೆ ಅರವಿಂದ್ ಕೇಜ್ರಿವಾಲ್‌ರವರ ಬ್ಯಾನರ್‌ನ ಚಿತ್ರವನ್ನು  ಪ್ರತ್ಯೇಕವಾಗಿ ಎಡಿಟ್‌ ಮಾಡಿ ಅಂಟಿಸಲಾಗಿದೆ ಎಂಬುದು ಸ್ಪಷ್ಟವಾಗಿ ಕಂಡು ಬರುತ್ತದೆ.

ಆಗ ಈ ರೀತಿಯ ಚಿತ್ರಗಳು ಕಂಡು ಬಂದವು. ‘ಡೈಲಿ ಪಯನೀರ್‌ ಡಾಟ್‌ ಕಾಂ’ನ ವರದಿಯೊಂದರಲ್ಲಿ ಈ ಚಿತ್ರ ಕಂಡು ಬಂತು. ಆದರೆ ಅದರಲ್ಲಿ ಅರವಿಂದ್‌ ಕೇಜ್ರಿವಾಲ್‌ ಫೋಟೋ ಇರುವ ಬ್ಯಾನರ್‌ ಇಲ್ಲ.

 

Arvind Kejriwal Image

ಡೈಲಿ ಪಯನೀರ್‌ನಲ್ಲಿ ಈ ಚಿತ್ರವನ್ನು ಒಳಗೊಂಡಿರುವ ವರದಿಯನ್ನು 2022ರ ಫೆಬ್ರವರಿ 7ರಂದು ಪೋಸ್ಟ್‌ ಮಾಡಲಾಗಿದೆ. ಸರಿಯಾಗಿ ನೋಡಿದಾಗ ಈ ಚಿತ್ರ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಚಿತ್ರ ಎರಡೂ ಒಂದೇ ಎಂಬುದು ತಿಳಿದು ಬಂದಿದೆ.

ಎರಡೂ ಚಿತ್ರಗಳಲ್ಲಿ ಗೇಟ್‌ನಲ್ಲಿ ವ್ಯಕ್ತಿಯೊಬ್ಬ ಪ್ರವೇಶಿಸುತ್ತಿರುವುದನ್ನು ಕಾಣಬಹುದಾಗಿದೆ. ಆದರೆ ಡೈಲಿ ಪಯನೀರ್‌ನ ಚಿತ್ರದಲ್ಲಿ ಕೇಜ್ರಿವಾಲ್‌ ಅವರ ಬ್ಯಾನರ್‌ ಮಾತ್ರ ಇಲ್ಲ. ಇದರಿಂದ ಇದು ಎಡಿಟ್‌ ಮಾಡಿದ ಚಿತ್ರ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕೇಜ್ರಿವಾಲ್‌ರವರ ಬಗ್ಗೆ ಅಪಪ್ರಚಾರ ಮಾಡಲ ಎಡಿಟ್‌ ಮಾಡಿದ ಬ್ಯಾನರ್‌ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದ್ದು, ಈ ಚಿತ್ರವು ನಕಲಿ ಎಂಬುದು ಸಾಬೀತಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ತಿರುಪತಿ ಕಾಲ್ತುಳಿತದಲ್ಲಿ ಸಾವನಪ್ಪಿದ ಮಗನ ಶವವನ್ನು ಸಾಗಿಸಲು ಆಂಬ್ಯುಲೆನ್ಸ್‌ಗೆ ಹಣವಿಲ್ಲದೆ ತಂದೆಯೊಬ್ಬ ಬೈಕಿನಲ್ಲಿ ಶವ ಕೊಂಡೊಯ್ಯದನೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights