ಬಿಜೆಪಿ ಕಾರ್ಯಕರ್ತರ ಹತ್ಯೆಗೆ ಸಿಎಂ ಮಮತಾ ಬಾಂಗ್ಲಾದೇಶದಿಂದ ಶೂಟರ್ ನೇಮಕ ಮಾಡಿದ್ದಾರೆ- ಕೈಲಾಶ್ ವಿಜಯವರ್ಗಿಯಾ

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ ಸುಮಾರು ಒಂಬತ್ತು ತಿಂಗಳುಗಳು ಉಳಿದಿವೆ. ಆದರೆ ಅದಕ್ಕೂ ಮೊದಲು ರಾಜ್ಯದಲ್ಲಿ ರಾಜಕೀಯ ಗಲಾಟೆ ಆರಂಭವಾಗಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಬಹಿರಂಗವಾಗಿ ದೂರಿದೆ. ಕಾರ್ಯಕರ್ತರನ್ನು ಕೊಲ್ಲಲು ಸಿಎಂ ಬ್ಯಾನರ್ಜಿ ಅವರು ಶೂಟರ್ ಅನ್ನು ಬಾಂಗ್ಲಾದೇಶದಿಂದ ಪಡೆದುಕೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಅಲ್ಲದೆ, ಈ ವಿಷಯದಲ್ಲಿ ಸಿಬಿಐ ತನಿಖೆಗೆ ಬಿಜೆಪಿ ಒತ್ತಾಯಿಸಿದೆ.

ಪಶ್ಚಿಮ ಬಂಗಾಳದ ಬಿಜೆಪಿಯ ಉಸ್ತುವಾರಿ ಕೈಲಾಶ್ ವಿಜಯವರ್ಗಿಯಾ ಮಾತನಾಡಿ, ‘ಟಿಎಂಸಿ ಈಗ ಶೂಟರ್‌ಗಳನ್ನು ನೇಮಕ ಮಾಡುವ ಮೂಲಕ ಬಿಜೆಪಿ ಕಾರ್ಯಕರ್ತರನ್ನು ಕೊಲ್ಲಲು ಯತ್ನಿಸುತ್ತಿದೆ. ಬಾಂಗ್ಲಾದೇಶದಿಂದ ಶೂಟರ್‌ಗೆ ಕರೆ ಮಾಡಿ ಜನರನ್ನು ಕೊಲ್ಲಲು ಸೂಚಿಸಿದೆ. ಬಾಂಗ್ಲಾದೇಶದ ಕೊಲೆಗಾರರು ನಮ್ಮನ್ನು ಕೊಲ್ಲಲು ಸಂಚು ಹೂಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಅಲ್ಲಿ ಪ್ರತಿಕೂಲ ಪರಿಸ್ಥಿತಿಯಲ್ಲಿ ಹೇಗೆ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಿ ಎಂದಿದ್ದಾರೆ.

ಮಮತಾ ಬ್ಯಾನರ್ಜಿ ಅವರು ಬಾಂಗ್ಲಾದೇಶದಿಂದ ಕಳ್ಳಸಾಗಣೆ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ವಿಜಯವರ್ಗಿಯಾ ತೀವ್ರವಾಗಿ ಆರೋಪಿಸಿದ್ದಾರೆ. “ಟಿಎಂಸಿಗೆ ಬಾಂಗ್ಲಾದೇಶದೊಂದಿಗೆ ಉತ್ತಮ ಸಂಪರ್ಕವಿದೆ, ಏಕೆಂದರೆ ಅವರು ಒಳನುಗ್ಗುವವರ ಬೆಂಬಲಿಗರು ಮತ್ತು ಟಿಎಂಸಿ ಜನರು ಅವರೊಂದಿಗೆ ಕಳ್ಳಸಾಗಾಣಿಕೆಗೆ ತೊಡಗಿದ್ದಾರೆ” ಎಂದು ಅವರು ಹೇಳಿದರು. ಕೈಲಾಶ್ ವಿಜಯವರ್ಗಿಯಾ, “ಈ ಹಿಂದೆ ರಾಜಕೀಯದ ಅಪರಾಧೀಕರಣವಿತ್ತು, ಈಗ ಅಧಿಕಾರಶಾಹಿಯನ್ನೂ ಅಪರಾಧೀಕರಿಸಲಾಗಿದೆ ಎಂಬುದು ಆತಂಕದ ಸಂಗತಿಯಾಗಿದೆ. ಸಿಬಿಐ ತನಿಖೆ ನಡೆಸಿದರೆ ಈ ಎಲ್ಲಾ ಮುಖಗಳು ಬಹಿರಂಗಗೊಳ್ಳುತ್ತವೆ. ನಾವು ಯಾವುದೇ ರಾಜಕೀಯ ಆರೋಪಗಳನ್ನು ಮಾಡುತ್ತಿಲ್ಲ. ನಾವು ನ್ಯಾಯಾಲಯಕ್ಕೆ ಹೋಗಿ ಸಿಬಿಐ ತನಿಖೆಗೆ ಒತ್ತಾಯಿಸಿದ್ದೇವೆ ” ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights