ರೂಪಾಂತರಿ ಕೊರೊನಾ ಬಗ್ಗೆ ಎಚ್ಚರ..! ಹೊಸ ಪ್ರಬೇಧದ ರೋಗ ಲಕ್ಷಣಗಳೇನು? : ಯಾರಿಗೆ ಎಷ್ಟು ಪರಿಣಾಮಕಾರಿ?

ಶರವೇಗದಲ್ಲಿ ಹರಡುವ ರೂಪಾಂತರಿ ಕೊರೊನಾ ಭಾರತಕ್ಕೆ ಎಂಟ್ರಿ ಕೊಟ್ಟಿದ್ದು ಒಟ್ಟು 6 ಜನರಲ್ಲಿ ಸೋಂಕಿರುವುದು ಪತ್ತೆಯಾಗಿದೆ. ಹೀಗಾಗಿ ಜನರಲ್ಲಿ ಮತ್ತೆ ಹೊಸ ಪ್ರಬೇಧದ ಬಗ್ಗೆ ಆತಂಕ ಹೆಚ್ಚಾಗಿದೆ. ಕೊರೊನಾದಿಂದ ಇನ್ನೂ ಚೇತರಿಸಿಕೊಳ್ಳಲು ಸಾಧ್ಯವಾಗದ ಜನರಿಗೆ ಇದೊಂದು ಹೊಸ ಆತಂಕವನ್ನು ಸೃಷ್ಟಿ ಮಾಡಿದೆ. ಮತ್ತೊಂದೆಡೆ ಇಂಗ್ಲೆಂಡಿಗೆ ಬಂದಿದ್ದ 76 ಜನರ ಫೋನ್ ಸ್ವಿಚ್ ಆಫ್ ಆಗಿದೆ.

ರೂಪಾಂತರಿ ಕೊರೊನಾ ಲಕ್ಷಣಗಳೇನು..? ರೂಪಾಂತರಿ ಕೊರೊನಾ ದೇಹ ಹೊಕ್ಕರೆ ಯಾವೆಲ್ಲಾ ಆರೋಗ್ಯ ಬದಲಾವಣೆಗಳು ಆಗುತ್ತವೆ..? ಹೊಸ ಪ್ರಬೇಧವನ್ನು ಪತ್ತೆ ಹಚ್ಚೋದು ಹೇಗೆ..?

ವಾಸನೆ ಗೊತ್ತಾಗೋದಿಲ್ಲ, ಜ್ವರ ಕಾಣಿಸಿಕೊಳ್ಳುತ್ತದೆ, ಮಾನಸಿಕ ಗೊಂದಲ, ಮೈಮೇಲೆ ಗುಳ್ಳೆಗಳು, ಹಸಿವಾಗುವುದಿಲ್ಲ, ಒಣ ಕಫ್,  ತಲೆನೋವು, ಸ್ನಾಯುಗಳು ನೋವು ರೂಪಾಂತರಿ ಕೊರೊನಾದ ಲಕ್ಷಣಗಳಾಗಿವೆ.

ಇನ್ನೂ ಮನೆಯಲ್ಲಿ ಒಬ್ಬರಿಗೆ ಬಂದರೆ ಕೇವಲ ಕೆಲ ಜನರಿಗೆ ಮಾತ್ರ ಹಳೆ ಕೊರೊನಾ ಬರುತ್ತಿತ್ತು. ಆದರೆ ಹೊಸ ಪ್ರಬೇಧದ ಕೊರೊನಾ ಮನೆಯಲ್ಲಿ ಒಬ್ಬರಿಗೆ ಬಂದರೆ ಎಲ್ಲರಿಗೂ ಬರುವ ಸಾಧ್ಯತೆ ಹೆಚ್ಚು. ಗುಣಮುಖರಾಗುವ ಸಾಧ್ಯತೆ ಹಿಂದೆ ಇದ್ದ ಕೊರೊನಾಕ್ಕಿಂತ ಕೊಂಚ ಕಡಿಮೆ ಇದೆ. ಹೀಗಾಗಿ ಭಯಪಡುವ ಅಂಶವಿಲ್ಲ ಎಂದು ನೆಮ್ಮದಿಯಿಂದಿರಲು ಸಾಧ್ಯವೇ ಇಲ್ಲ. ಯಾಕಂದ್ರೆ ಇದರ ಹರಡುವಿಕೆ ಪ್ರಮಾಣ ಹೆಚ್ಚಾಗಿದೆ. ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರ ಲಕ್ಷಣಗಳು ಬಹುತೇಕ ಹಳೆ ಕೊರೊನಾದಂತೆ ಇದ್ದು, ಹರಡುವ ಪ್ರಮಾಣ ಹೆಚ್ಚಾಗಿರುತ್ತದೆ. ಇದರಿಂದ ತಪ್ಪಿಸಲಿಕೊಳ್ಳಲು ಜನ ಮಾಸ್ಕ್ , ಹ್ಯಾಂಡ್ ಸಾನಿಟೈಸರ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗಿದೆ.

‘ಶರವೇಗದಲ್ಲಿ ಹರಡುವ ಈ ರೂಪಾಂತರಿ ಮಕ್ಕಳಿಗೆ ಮತ್ತು ವಯಸ್ಸಾದವರಿಗೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇದೆ’ ಎಂದು ಡಾ.ಚಂದ್ರಶೇಖರ್, ರೋಗ ನಿರೋಧಕ ತಜ್ಞ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights