ರೈಲಿಗೆ ತಲೆಕೊಟ್ಟು ಎಸ್ಎಲ್ ಧರ್ಮೇಗೌಡ ಆತ್ಮಹತ್ಯೆ : ಇಡೀ ದೇಹ ಛಿದ್ರ ಛಿದ್ರ!
ಪರಿಷತ್ ಉಪಸಭಾಪತಿ ಎಸ್ಎಲ್ ಧರ್ಮೇಗೌಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕರ್ನಾಟಕದ ಹಲವು ನಾಯಕರು ಧರ್ಮೇಗೌಡರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಕಡೂರು ತಾಲೂಕಿನ ಕಂಸಾಗರ ಬಳಿಯ ಗುಣಸಾಗರದ ಗ್ರಾಮದಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುಣಸಾಗರ ಸಕ್ಕರಾಯಪಟ್ಟಣದ ಬಳಿಯ ರೈಲು ಹಳಿಯ ಮೇಲೆ ಧರ್ಮೇಗೌಡ ಮೃತದೇಹ ಪತ್ತೆಯಾಗಿದೆ. ಮಧ್ಯರಾತ್ರಿ 1.30 ಅಥ್ವಾ 2 ಗಂಟೆ ವೇಳೆಯಲ್ಲಿ ಆತ್ಮಹತ್ಯೆ ನಡಿದಿದೆ ಎನ್ನಲಾಗಿದೆ.
ರೈಲಿಗೆ ತಲೆಕೊಟ್ಟ ಪರಿಣಾಮ ಇಡೀ ದೇಹ ಛಿದ್ರವಾಗಿದೆ. ತಲೆ ಕಟ್ ಆಗಿ ಸುಮಾರು 100 ಮೀಟರ್ ತನಕ ದೂರ ಹೋಗಿದ್ದು, ರುಂಡ ಮುಂಡ ಬೇರ್ಪಟ್ಟಿರುವ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ನಂತರ 3-4 ರೈಲುಗಳು ಆ ಟ್ರಾಕ್ ನಲ್ಲಿ ಪ್ರಯಾಣ ಮಾಡಿವೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ಸಿ.ಟಿ.ರವಿ ಅವರು ಪೊಲೀಸ್ ವರಿಷ್ಠಾಧಿಕಾರಿಯವ್ರಿಗೆ ಸೂಚನೆ ನೀಡಿ ಆದಷ್ಟು ಶೀಘ್ರವಾಗಿ ಮೃತದೇಹ ತೆರವು ಮಾಡಿ ಆಸ್ಪತ್ರೆಗೆ ರವಾನಿಸುವಂತೆ ತಿಳಿಸಿದ್ದಾರೆ. ಜನರ ಸಂಚಾರ ಹಾಗೂ ಜನ ಸಂದಣಿ ಹೆಚ್ಚಾಗುವ ಸಾಧ್ಯತೆ ಇದೆ. ಭೋಜೇಗೌಡ, ದತ್ತಾ, ಶ್ರೀಕಂಠೇಗೌಡ, ಶಿವರಾಮೇಗೌಡ, ಬಸವರಾಜ್ ಹೊರಟ್ಟಿ ಸ್ಥಳದಲ್ಲಿದ್ದಾರೆ.