ಫ್ಯಾಕ್ಟ್‌ಚೆಕ್: ರಿಷಿ ಸುನಕ್ ಹಳೆಯ ವಿಡಿಯೋವನ್ನು ತಪ್ಪಾಗಿ ಹಂಚಿಕೊಂಡ ಇಂಡಿಯಾ ಟುಡೇ
ಬ್ರಿಟನ್‌ಗೆ ಹೊಸ ಪ್ರಧಾನಿ ಆಯ್ಕೆಯಾಗಿದ್ದಾರೆ. ಭಾರತೀಯ ಮೂಲದ ರಿಷಿ ಸುನಕ್ (Rishi Sunak) ಕೊನೆಗೂ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಕೇವಲ 45 ದಿನ ಆಡಳಿತ ನಡೆಸಿ ನಿರ್ಗಮಿಸಿದ ಲಿಜ್ ಟ್ರಸ್ ಜಾಗಕ್ಕೆ ಈಗ ರಿಷಿ ಸುನಕ್ ಬಂದಿದ್ದಾರೆ. ಸುಮಾರು 200 ವರ್ಷಗಳಿಗೂ ಹೆಚ್ಚು ಭಾರತವನ್ನು ಆಡಳಿತ ಮಾಡಿದ್ದ ಬ್ರಿಟನ್ ಅನ್ನು ಇದೀಗ ಇದೆ ಮೊದಲ ಬಾರಿಗೆ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಮುನ್ನಡೆಸುವಂತಾಗಿದೆ.
ಇದರ ಮದ್ಯೆ ರಿಷಿ ಸುನಕ್ ಅವರ ಯೋಜನೆಯನ್ನು ವಿವರಿಸಿದ್ದಾರೆ ಎಂಬ ವಿಡಿಯೋವನ್ನು ಇಂಡಿಯಾ ಟುಡೇ ತನ್ನ ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದೆ. ಅಕ್ಟೋಬರ್ 21 ರಂದು, ಇಂಡಿಯಾ ಟುಡೇ ಬ್ರಿಟನ್‌ನ ಆರ್ಥಿಕತೆಯ ಸದೃಢಗೊಳಿಸಲು ಯೋಜನೆಗಳನ್ನು ಘೋಷಿಸುತ್ತಿದ್ದೇನೆ ಎಂದು ರಿಷಿ ಸುನಕ್ ಹೇಳಿಕೊಳ್ಳುವ ವೀಡಿಯೊವನ್ನು ಲೈವ್-ಸ್ಟ್ರೀಮ್ ಮಾಡಿದೆ. ವೀಡಿಯೊದಲ್ಲಿ, ಸುನಕ್ ಅವರು ಪ್ರಧಾನಿಯಾದರೆ ಯುಕೆ ಆರ್ಥಿಕತೆಯನ್ನು ಸರಿಪಡಿಸುವ ಯೋಜನೆಯನ್ನು ಪ್ರಕಟಿಸುವುದನ್ನು ಕಾಣಬಹುದು. ನಂತರ ಇಂಡಿಯಾ ಟುಡೇ ತನ್ನ ವೀಡಿಯೊವನ್ನು ಡಿಲಿಟ್ ಮಾಡಿದೆ.

ಫ್ಯಾಕ್ಟ್‌ಚೆಕ್:
ಇಂಡಿಯಾ ಟುಡೇ ರಿಷಿ ಸುನಕ್ ಅವರ ಭಾಷಣವನ್ನು 20 ಅಕ್ಟೋಬರ್ 2022ರಂದು ಲೈವ್ ಸ್ಟ್ರೀಮ್ ಎಂದು ಹೇಳಿಕೊಂಡು ಪ್ರಸಾರ ಮಾಡಲಾದ ವಿಡಿಯೋ ಇತ್ತೀಚಿನದಲ್ಲ ಎಂದು ಬೂಮ್ ಕಂಡುಹಿಡಿದಿದೆ.
ಇಂಡಿಯಾ ಟುಡೇ ಪ್ರಸಾರ ಮಾಡಿರುವ ವಿಡಿಯೋ 12 ಜುಲೈ 2022 ರಂದು ರಿಷಿ ಸುನಕ್ ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ವೈರಲ್ ವೀಡಿಯೊವನ್ನು ಪ್ರಸಾರ ಮಾಡಿರುವುದಾಗಿ ಕಂಡುಬಂದಿದೆ. ಕನ್ಸರ್ವೇಟಿವ್ ಪಕ್ಷದ ನಾಯಕತ್ವಕ್ಕೆ ತಮ್ಮ ಉಮೇದುವಾರಿಕೆಯನ್ನು ಮಂಡಿಸಿದಾಗ ಅವರು ಈ ಭಾಷಣವನ್ನು ನೀಡಿದರು. ರಿಷಿ ಪ್ರಧಾನಿ ಸ್ಥಾನಕ್ಕಾಗಿ ಟ್ರಸ್ ವಿರುದ್ಧ ಅಖಾಡದಲ್ಲಿದ್ದರು. ಅತ್ಯಂತ ಜನಪ್ರಿಯ ಅಭ್ಯರ್ಥಿಯಾಗಿದ್ದರೂ ಆದರೆ, 6 ಸುತ್ತುಗಳ ಪೈಕಿ 5 ಸುತ್ತುಗಳಲ್ಲಿ ಟ್ರಸ್ ವಿರುದ್ದ ಸೋತಿದ್ದರು. ಕೆಳಗೆ ನೀವು ಆ ವೀಡಿಯೊವನ್ನು ನೋಡಬಹುದು.

“ಯುಕೆ ಆರ್ಥಿಕತೆಯನ್ನು ಮರಳಿ ಟ್ರ್ಯಾಕ್‌ಗೆ ತರುವ ಯೋಜನೆಗಳ” ಕುರಿತು ಯಾವುದೇ ಸಾರ್ವಜನಿಕ ಹೇಳಿಕೆಯನ್ನು ಸದ್ಯ ರಿಷಿ ನೀಡಿಲ್ಲ. ವೈರಲ್ ವೀಡಿಯೊ ಜುಲೈ 2022 ರ ಹಿಂದಿನದು. ಇಂಡಿಯಾ ಟುಡೇ ಸುನಕ್ ಅವರ ಹಳೆಯ ಭಾಷಣವನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ವೀಡಿಯೊವಾಗಿ ಸ್ಟ್ರೀಮ್ ಮಾಡಿರುವುದು ಸ್ಪಷ್ಟವಾಗಿದೆ. ಹಾಗಾಗಿ ಈ ವಿಡಿಯೋ ಇತ್ತೀಚಿನದಲ್ಲ. ಆದರೆ ಇಂಡಿಯಾ ಟುಡೇ ಇದನ್ನು ಇತ್ತೀಚಿನದು ಎಂದು ತಪ್ಪಾಗಿ ಹಂಚಿಕೊಂಡಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ನಕಲಿ ರುದ್ರಾಕ್ಷಿ ಮಣಿಯ ಬಗ್ಗೆ ಇರಲಿ ಎಚ್ಚರ

