ಫ್ಯಾಕ್ಟ್ಚೆಕ್: ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್ ಬ್ರಿಟನ್ ಪ್ರಧಾನಿ ಅಲ್ಲ
ಇನ್ಫೋಸಿಸ್ ಸಂಸ್ಥೆಯ ಸಹ ಸಂಸ್ಥಾಪಕ ನಾರಾಯಣ ಮೂರ್ತಿಯವರ ಅಳಿಯ ಶ್ರೀ. ರಿಷಿ ಸುನಕ್ ಅವರು ಬ್ರಿಟನ್ನ ಹೊಸ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ನಾರಾಯಣ ಮೂರ್ತಿಯವರ ಅಳಿಯ ಶ್ರೀ. ರಿಷಿ ಸುನಕ್ ಬ್ರಿಟನ್ನ ಪ್ರಧಾನಿಯಾಗಿ ನಿಜವಾಗಿಯೂ ಆಯ್ಕೆಯಾಗಿದ್ದಾರೆಯೇ ಎಂದು ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.


ಕಳೆದ ಎರಡು ದಿನಗಳಿಂದ ಈ ಸಂದೇಶವು ಹಲವು ವಾಟ್ಸಾಪ್ ಗುಂಪುಗಳಲ್ಲಿ ಹರಿದಾಡುತ್ತಿದ್ದು, ಈ ಸಂದೇಶದ ಸತ್ಯಾಸತ್ಯತೆಯನ್ನು ಪರಿಶೀಲಿಸುವಂತೆ ನಮ್ಮ ಏನ್ಸುದ್ದಿ.ಕಾಂ ವಾಟ್ಸಾಪ್ಗೆ ಮನವಿ ಬಂದಿವೆ. ಹಾಗಾಗಿ ಈ ಸಂದೇಶಗಳ ನಿಜಾಂಶ ಏನೆಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
24 ಜುಲೈ 2019 ರಂದು ಬೋರಿಸ್ ಜಾನ್ಸನ್ ಬ್ರಿಟನ್ನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ ರಾಜಕೀಯದ ದಿಢೀರ್ ಬೆಳವಣಿಗೆಗಳಿಂದಾಗಿ 07 ಜುಲೈ 2022 ರಂದು ಅಂದರೆ ಕಳೆದ ವಾರ ಬೋರಿಸ್ ಜಾನ್ಸನ್ ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ಘೋಷಿಸಿದ್ದಾರೆ. ಕನ್ಸರ್ವೇಟಿವ್ ಪಕ್ಷದಿಂದ ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೆ ಪ್ರಧಾನಿಯಾಗಿ ಬೋರಿಸ್ ಜಾನ್ಸನ್ರವರೆ ಮುಂದುವರಿಯಲಿದ್ದಾರೆ ಎಂದು ಹೇಳಲಾಗಿದೆ. ಬೋರಿಸ್ ಜಾನ್ಸನ್ ಕನ್ಸರ್ವೇಟಿವ್ ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು.

ಮುಂದಿನ ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಮತ್ತು ಪ್ರಧಾನ ಮಂತ್ರಿಯಾಗಿ ಯಾರು ಆಯ್ಕೆಯಾಗಲಿದ್ದಾರೆ ಎನ್ನುವ ವಿಚಾರ ಇಂಗ್ಲೆಂಡ್ನಲ್ಲಿ ಟ್ರೆಂಡಿಂಗ್ ಆಗಿದ್ದು, ಈ ವಿಚಾರದಲ್ಲಿ ಬಹುತೇಕ ಮುಕ್ತ ರೇಸ್ ಕಂಡುಬಂದಿದೆ. ತಮ್ಮ ಸ್ಥಾನಕ್ಕೆ ಇತ್ತೀಚೆಗೆ ರಾಜೀನಾಮೆ ನೀಡಿದ್ದ ರಿಷಿ ಸುನಾಕ್, ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಜೆರೆಮಿ ಹಂಟ್ ಸೇರಿದಂತೆ ಉನ್ನತ ಅಧಿಕಾರಿಗಳು ಪ್ರಧಾನಿಯಾಗುವ ರೇಸ್ನಲ್ಲಿದ್ದಾರೆ.

ಯಾರು ರಿಷಿ ಸುನಾಕ್ ?
ವೆಸ್ಟ್ ಮಿನಿಸ್ಟರ್ನ ಅತ್ಯಂತ ಪ್ರಬಲ ನಾಯಕ ರಿಷಿ ಸುನಾಕ್. ಇಂಗ್ಲೆಂಡ್ ಕೋವಿಡ್ ಸಂಬಂಧಿತ ಕಾರ್ಯಕ್ರಮಗಳಿಗೆ ದೊಡ್ಡ ಮಟ್ಟದ ಬೆಂಬಲಿಗರಾಗಿದ್ದರು. ಬೊರಿಸ್ ಜಾನ್ಸನ್ ಅವರ ಉತ್ತರಾಧಿಕಾರಿ ಎಂದೇ ಹೇಳಲಾಗುತ್ತಿದ್ದ ಇವರ ಹೆಸರು ಪೇ ಗೇಟ್ ಹಗರಣದಲ್ಲಿ ಜಾನ್ಸನ್ ಅವರೊಂದಿಗೆ ಕೇಳಿ ಬಂದಿತ್ತು. ಇದರ ಬೆನ್ನಲ್ಲಿಯೇ ಅವರ ಜನಪ್ರಿಯತೆ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿತ್ತು.
https://twitter.com/RishiSunak/status/1545426650032111616?ref_src=twsrc%5Etfw%7Ctwcamp%5Etweetembed%7Ctwterm%5E1545426650032111616%7Ctwgr%5E%7Ctwcon%5Es1_&ref_url=https%3A%2F%2Ffactly.in%2Frishi-sunak-is-an-indian-origin-british-mp-who-right-now-is-just-a-contender-to-become-the-next-pm-of-the-uk%2F
42 ವರ್ಷದ ರಿಷಿ ಸುನಕ್ ಅವರನ್ನು ಬೋರಿಸ್ ಜಾನ್ಸನ್ 2020ರ ಫೆಬ್ರವರಿಯಲ್ಲಿ ತಮ್ಮ ಸಂಪುಟಕ್ಕೆ ಆಯ್ಕೆ ಮಾಡಿದ್ದರು. ಖಜಾನೆಯ ಚಾನ್ಸಲರ್ ಆಗಿ ನೇಮಕವಾಗಿದ್ದ ಇವರು ಮೊದಲ ಬಾರಿಗೆ ಪೂರ್ಣ ಕ್ಯಾಬಿನೆಟ್ ಸ್ಥಾನವನ್ನು ಪಡೆದಿದ್ದರು. ಈಗಾಗಲೇ 40ಕ್ಕೂ ಅಧಿಕ ಸಚಿವರು ರಾಜೀನಾಮೆ ನೀಡಿದ್ದರಿಂದ ಬೊರಿಸ್ ಜಾನ್ಸನ್ ಪದಾತ್ಯಾಗ ಮಾಡಿದ್ದಾರೆ. ಅದರ ಜೊತೆಗೆ ಕನ್ಸರ್ವೇಟಿವ್ ಪಕ್ಷವು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಾಕ್ ಅವರನ್ನು ಮುಂದಿನ ನಾಯಕರನ್ನಾಗಿ ಆಯ್ಕೆ ಮಾಡಲಿದೆ ಎಂದು ಕೆಲವು ವರದಿಗಳು ಉಲ್ಲೇಖಿಸಿದ್ದವು. ಹಾಗೇನಾದರೂ ಆದಲ್ಲಿ ಬ್ರಿಟನ್ನ ಮುಂದಿನ ಪ್ರಧಾನಿಯಾಗಿ ರಿಷಿ ಸುನಾಕ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವಂತೆ ಈಗಾಗಲೇ ರಿಷಿ ಸುನಾಕ್ ಬ್ರಿಟನ್ನ ಫ್ರಧಾನಿಯಾಗಿ ಆಯ್ಕೆಯಾಗಿದ್ದಾರೆ ಎಂಬುದು ಸುಳ್ಳು
ಸಂಕ್ಷಿಪ್ತವಾಗಿ ಹೇಳುವುದಾದರೆ, ಬೋರಿಸ್ ಜಾನ್ಸನ್ ಕನ್ಸರ್ವೇಟಿವ್ ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ 05 ಸೆಪ್ಟೆಂಬರ್ 2022 ರೊಳಗೆ ಹೊಸ ಪ್ರಧಾನಿಯನ್ನು ಆಯ್ಕೆ ಮಾಡುವವರೆಗೆ ಜಾನ್ಸನ್ ಅವರೆ ಬ್ರಿಟನ್ ಪ್ರಧಾನಿಯಾಗಿ ಮುಂದುವರೆಯುತ್ತಾರೆ. UK ಯಲ್ಲಿ ಸಾರ್ವತ್ರಿಕ ಚುನಾವಣೆಯ ಅಗತ್ಯವಿಲ್ಲ ಏಕೆಂದರೆ, ಪ್ರಧಾನಿಯೊಬ್ಬರು ರಾಜೀನಾಮೆ ನೀಡಿದಾಗ, ಸ್ವಯಂಚಾಲಿತವಾಗಿ ಸಾರ್ವತ್ರಿಕ ಚುನಾವಣೆ ನಡೆಯುವುದಿಲ್ಲ. ಕನ್ಸರ್ವೇಟಿವ್ ಪಕ್ಷದ ನಾಯಕ ಮತ್ತು ಮುಂದಿನ ಪ್ರಧಾನಿಯಾಗುವ ರೇಸ್ನಲ್ಲಿ ಎಂಟು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಭಾರತೀಯ ಮೂಲದ ಬ್ರಿಟನ್ ಸಂಸದ ರಿಷಿ ಸುನಕ್ ಅವರಲ್ಲಿ ಒಬ್ಬರು. ರಿಷಿ ಸುನಕ್ ಅವರ ಮಾವ ಇನ್ಫೋಸಿಸ್ನ ನಾರಾಯಣ ಮೂರ್ತಿ. ಸದ್ಯಕ್ಕೆ, ರಿಷಿ ಸುನಕ್ ಕೇವಲ ಸ್ಪರ್ಧಿಯಾಗಿದ್ದಾರೆ, ಅವರು UK ಯ ಹೊಸ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿಲ್ಲ. ಹಾಗಾಗಿ ಪೋಸ್ಟ್ನಲ್ಲಿ ಮಾಡಲಾದ ಪ್ರತಿಪಾದನೆ ಸುಳ್ಳು.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : ಫ್ಯಾಕ್ಟ್ಚೆಕ್: ದೈತ್ಯಾಕಾರದ ಮಾನವನ ಅಸ್ಥಿಪಂಜರ ಪತ್ತೆ! ವಾಸ್ತವೇನು?

