ಬಾಂಗ್ಲಾ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದೆ ಎಂದ ಮೋದಿ; #lieLikeModi ಟ್ರೆಂಡಿಂಗ್‌

ಪೂರ್ವ ಪಾಕಿಸ್ತಾನವಾಗಿದ್ದ ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಭಾಗಿಯಾಗಿ ನಾನು ಜೈಲು ಸೇರಿದ್ದೆ. ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮವು ನನ್ನ ಜೀವನದ ಪ್ರಯಾಣದಲ್ಲಿ ಒಂದು ಮಹತ್ವದ ಕ್ಷಣವಾಗಿತ್ತು ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದ ಡಾಕಾದಲ್ಲಿ ಹೇಳಿಕೆ ನೀಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಆಗುತ್ತಿದ್ದಾರೆ.

ಬಾಂಗ್ಲಾದೇಶ ಸ್ವಾತಂತ್ರ್ಯಗೊಂಡ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮೋದಿ, “ಬಾಂಗ್ಲಾದೇಶ ವಿಮೋಚನೆಯ ಸಂದರ್ಭದ ಸ್ವಾತಂತ್ರ್ಯ ಹೋರಾಟದಲ್ಲಿ ನಾನು ಭಾಗವಹಿಸಿದ್ದೆ. ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮವು ನನ್ನ ಜೀವನದ ಪ್ರಯಾಣದಲ್ಲಿ ಒಂದು ಮಹತ್ವದ ಕ್ಷಣವಾಗಿತ್ತು. ನನ್ನ ಸಹೋದ್ಯೋಗಿಗಳು ಮತ್ತು ನಾನು ಭಾರತದಲ್ಲಿ ಸತ್ಯಾಗ್ರಹ ಮಾಡಿದ್ದೆವು. ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಸತ್ಯಾಗ್ರಹದ ಸಮಯದಲ್ಲಿ ಜೈಲಿಗೆ ಹೋಗಲು ನನಗೆ ಅವಕಾಶ ಸಿಕ್ಕಿತು” ಎಂದು ಹೇಳಿದ್ದರು.

ಇದರ ಬೆನ್ನಲ್ಲೇ ಟ್ವಿಟರ್‌ನಲ್ಲಿ #lieLikeModi ಎಂಬ ಹ್ಯಾಶ್‌ ಟ್ಯಾಗ್‌ ಟ್ರೆಂಡಿಂಗ್‌ ಆಗಿದೆ. ಈ ವರದಿ ಬರೆಯುವ ವೇಳೆಗೆ 2 ಲಕ್ಷಕ್ಕೂ ಹೆಚ್ಚು ಜನ ಈ ಹ್ಯಾಶ್‌ಟ್ಯಾಗ್ ಬಳಸಿ ಮೋದಿಯ ಕಾಲೆಳೆದಿದ್ದಾರೆ.

ಕಾಂಗ್ರೆಸ್ ವಕ್ತಾರರಾದ ಶ್ರೀವತ್ಸ ಟ್ವೀಟ್ ಮಾಡಿ, “ಕ್ರಿಸ್ಟೋಫರ್ ನೋಲನ್ ಅವರ ಮನಸ್ಸಿನಲ್ಲಿ ಇನ್ಸೆಪ್ಷನ್ ಕಲ್ಪನೆಯನ್ನು ಅಳವಡಿಸಿದವರು ಮೋದಿಜಿ. ಇದು ಮನ್ ಕಿ ಬಾತ್” ಎಂದು ಬರೆದುಕೊಂಡಿದ್ದಾರೆ.

“ಅಲೆಕ್ಸಾಂಡರ್ ಗ್ರಹಾಂಬೆಲ್ ಟೆಲಿಫೋನ್ ಅನ್ನು ಕಂಡುಹಿಡಿದಾಗ, ಮೋದಿಯವರಿಂದ ಮೂರು ಮಿಸ್ಡ್‌ ಕಾಲ್‌ಗಳು ಬಂದಿದ್ದವು” ಎಂದು ಅಮಿರ್ ಎಂಬುವವರು ವ್ಯಂಗ್ಯ ಮಾಡಿದ್ದಾರೆ.

“ನರೇಂದ್ರ ಮೋದಿ ತನ್ನ ಸಹೋದ್ಯೋಗಿಗಳೊಂದಿಗೆ ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವುದು” ಎಂದು ಎಡಿಟೆಡ್ ಫೊಟೋವನ್ನು ಹಂಚಿಕೊಳ್ಳಲಾಗಿದೆ.

ನೀರಜ್ ಎಂಬುವವರು ಟ್ವೀಟ್ ಮಾಡಿ, “ನರೇಂದ್ರ ಮೋದಿಯವರನ್ನು ಬಿಡುಗಡೆ ಮಾಡಿದ ಜೈಲರ್‌ನನ್ನು ಭಾರತವು ಎಂದಿಗೂ ಮರೆಯುವುದಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ.

https://twitter.com/niraj_NSUI_/status/1375534070151573505?s=20

ಇದನ್ನೂ ಓದಿ: ಬಂಗಾಳ ಚುನಾವಣೆ: ಮೊದಲ ಹಂತದ ಚುನಾವಣೆಗೆ BJP ಹೆವಿವೇಯ್ಟ್‌ ತಯಾರಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights