ಪಿಟಿಸಿ ಸಮಯದಲ್ಲಿ ವರದಿಗಾರನ ಹಿಂದೆ ಕುಚೇಷ್ಟೆ ಮಾಡಿದ ಮಕ್ಕಳು : ವೀಡಿಯೋ ವೈರಲ್..

ಸಾಮಾನ್ಯವಾಗಿ ವರದಿಗಾರರು ಲೈವ್ ಕೊಡುವ ಸಂದರ್ಭದಲ್ಲಿ ಸಾಕಷ್ಟು ಅಡೆತಡೆಗಳನ್ನು ಅನುಭವಿಸಿರುತ್ತಾರೆ. ಅಂತಹ ಸಾಕಷ್ಟು ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನಾವು ನೋಡಬಹುದು. ಆದರೆ ಇಲ್ಲೊಬ್ಬ ವರದಿಗಾರನಿಗೆ ವಿಶೇಷವಾದ ಅನುಭವ ಆಗಿದೆ. ಇದನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಅನೇಕರಿಗೆ ನಗು ತರಿಸಿದರೆ, ಇನ್ನೂ ಕೆಲವರಿಗೆ ಇದು ಹೇಗೆ ಸಾಧ್ಯವಾಯಿತು ಅನ್ನೋ ಪ್ರಶ್ನೆ ಮೂಡಿದೆ.

ಹೌದು…  ಬಿಬಿಸಿ ನ್ಯೂಸ್‌ನ ಸೈಬರ್ ರಿಪೋರ್ಟರ್ ಜೋ ಟಿಡಿ ಇತ್ತೀಚೆಗೆ ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ಗಂಭೀರ ವಿಷಯದ ಬಗ್ಗೆ ಪಿಟಿಸಿ ಮಾಡುತ್ತಿದ್ದರು. ಇಬ್ಬರು ಮಕ್ಕಳು ಕ್ಯಾಮೆರಾ ಮುಂದೆ ಕುಚೇಷ್ಟೆ ಮಾಡಲು ನಿರ್ಧರಿಸಿ, ಹಿಂದಕ್ಕೆ ನಡೆದುಕೊಂಡು ಹೋಗಿದ್ದಾರೆ! ಅವರ ಬಳಿಕ ಮತ್ತೊಬ್ಬ ಹುಡುಗ ಸಾಮಾನ್ಯವಾಗಿ ನಡೆದುಕೊಂಡು ಬಂದಿರುವುದು ರೆಕಾರ್ಡ್ ಆಗಿದೆ. ಇದನ್ನ ಕಂಡ ನೆಟ್ಟಿಗರು ನಗಗಾಡುವುದು ಮಾತ್ರವಲ್ಲದೇ ಹೇಗೆ ಸಾಧ್ಯ ಎಂದು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ.

ಒಮ್ಮೆ ತುಣುಕನ್ನು ಎಡಿಟಿಂಗ್ ಟೇಬಲ್‌ಗೆ ಸೇರಿಸಿದಾಗ ಏನಾಯಿತು ಎಂದು ವರದಿಗಾರ ಅರಿತುಕೊಂಡಿದ್ದಾರೆ. ತನ್ನ ಅನುಯಾಯಿಗಳೊಂದಿಗೆ ಟ್ವಿಟ್ಟರ್ನಲ್ಲಿ ಕ್ಲಿಪ್ ಅನ್ನು ಹಂಚಿಕೊಳ್ಳುತ್ತಾ, “ಪ್ರಾಮಾಣಿಕವಾಗಿ ನಾನು ಹುಚ್ಚನೂ ಅಲ್ಲ, ಇದು ಪ್ರೇರಿತವಾಗಿದೆ. ಸಂಪಾದನೆಯವರೆಗೂ ಇದನ್ನು ನಾವು ಗುರುತಿಸಲಿಲ್ಲ, ”ಎಂದು ಅವರು ಹೇಳಿ ಈ ಜೋಡಿಯನ್ನು ಶ್ಲಾಘಿಸಿದರು.

ಆ ಕ್ಷಣವನ್ನು ಇಲ್ಲಿ ವೀಕ್ಷಿಸಿ:

https://twitter.com/joetidy/status/1304399657444036608?ref_src=twsrc%5Etfw%7Ctwcamp%5Etweetembed%7Ctwterm%5E1304399657444036608%7Ctwgr%5Eshare_3&ref_url=https%3A%2F%2Findianexpress.com%2Farticle%2Ftrending%2Fviral-videos-trending%2Fduo-ruins-bbc-reporters-ptc-germany-6593124%2F

ನಂತರ ವರದಿಗಾರ ತಮಾಷೆಗೆ ಇದಕ್ಕೆ ಮ್ಯೂಸಿಕ್ ಸೇರಿಸಿ ಕ್ಲಿಪ್‌ನ್ನು ಹಂಚಿಕೊಂಡರು.

ನೆಟಿಜನ್‌ಗಳು ಹೇಗೆ ಪ್ರತಿಕ್ರಿಯಿಸಿದರು ಎಂಬುದು ಇಲ್ಲಿದೆ:

https://twitter.com/katebevan/status/1304423803087454208?ref_src=twsrc%5Etfw%7Ctwcamp%5Etweetembed%7Ctwterm%5E1304423803087454208%7Ctwgr%5Eshare_3&ref_url=https%3A%2F%2Findianexpress.com%2Farticle%2Ftrending%2Fviral-videos-trending%2Fduo-ruins-bbc-reporters-ptc-germany-6593124%2F

https://twitter.com/BryonyEHopkins/status/1304416290732470284?ref_src=twsrc%5Etfw%7Ctwcamp%5Etweetembed%7Ctwterm%5E1304416290732470284%7Ctwgr%5Eshare_3&ref_url=https%3A%2F%2Findianexpress.com%2Farticle%2Ftrending%2Fviral-videos-trending%2Fduo-ruins-bbc-reporters-ptc-germany-6593124%2F

https://twitter.com/saintpedro/status/1304461207617916928?ref_src=twsrc%5Etfw%7Ctwcamp%5Etweetembed%7Ctwterm%5E1304461207617916928%7Ctwgr%5Eshare_3&ref_url=https%3A%2F%2Findianexpress.com%2Farticle%2Ftrending%2Fviral-videos-trending%2Fduo-ruins-bbc-reporters-ptc-germany-6593124%2F

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights