ಲಾಕ್‍ಡೌನ್ ಸಡಿಲಿಕೆ – ಮೆಜೆಸ್ಟಿಕ್ ನಲ್ಲಿ ಜನವೋ ಜನ : ಪೊಲೀಸರು ಫುಲ್ ಕನ್‍ಫ್ಯೂಸ್!
ಇಂದು ಲಾಕ್ ಡೌನ್ ಸಡಿಕೆಗೊಂಡ ಹಿನ್ನೆಲೆ ಲಾಕ್ ಡೌನ್ ನಿಂದ ತಮ್ಮ ಊರುಗಳಿಗೆ ಹೋಗಲು ಆಗದೇ ಇದ್ದ ವಲಸೆ ಕಾರ್ಮಿಕರು ತಮ್ಮ ಗ್ರಾಮಕ್ಕೆ ಹೋಗಲು ಸಾವಿರಾರು ಸಂಖ್ಯೆಯಲ್ಲಿ ಮೆಜೆಸ್ಟಿಕ್ ನಲ್ಲಿ ಸೇರಿದ್ದು ಕಂಡು ಬಂತು.
ಹೌದು… ಬೆಳಗಿನ ಜಾವದಿಂದಲ್ಲೇ ಮೆಜೆಸ್ಟಿಕ್ ಗೆ ಜನಸಾಗರ ಹರಿದು ಬಂದಿದೆ. ತಮ್ಮ ಕುಟುಂಬಗಳ ಸಮೇತ, ಪ್ರಯಾಣಿಸಲು ಜನ ತಂಡೋಪ ತಂಡವಾಗಿ ಆಗಮಿಸಿದ್ದಾರೆ. ಕಣ್ಣಾಯಿಸಿದಷ್ಟು ದೂರ ಮೆಜೆಸ್ಟಿಕ್‍ನಲ್ಲಿ ಜನರು ಕಾಣಿಸಿದ್ದು ಮೆಜೆಸ್ಟಿಕ್ ಶಾಂತಲಾ ಸಿಲ್ಕ್ ಹೌಸ್ ರಸ್ತೆ ಬಳಿ ಜನಸಾಗರವೇ ಸೇರಿದೆ. ಸರಿಸುಮಾರು 2 ಸಾವಿರಕ್ಕೂ ಅಧಿಕ ಪ್ರಯಾಣಿಕರು ಒಂದೆಡೆ ಸೇರಿದ್ದು, ಜನರ ಗುಂಪು ನೋಡಿ ಪೊಲೀಸರು ಫುಲ್ ಕನ್‍ಫ್ಯೂಶನ್ ಆಗಿದ್ದು, ಇಡೀ ಮೆಜೆಸ್ಟಿಕ್ ನಿಲ್ದಾಣಕ್ಕೆ ಔಷಧಿ ಸಿಂಪಡನೆ ಮಾಡಲಾಗಿದೆ.
ಒಂದು ತಿಂಗಳಿಗಿಂತ ಹೆಚ್ಚು ದಿನಗಳ ಕಾಲ ಬೆಂಗಳೂರಿನಲ್ಲೇ ಲಾಕ್ ಡೌನ್ ಆಗಿದ್ದ ಜನ ಇಂದು ಏಕಾಏಕಿ ರಸ್ತೆಗಿಳಿಸಿದ್ದಾರೆ. ಬೆಂಗಳೂರಿನಲ್ಲಿ ಎಂದಿನಂತೆ ಸಹಜವಾಗಿ ವಾಹನಗಳ ಸಂಚಾರ ಶುರುವಾಗಿದೆ. ಜೊತೆಗೆ ಮೂರು ದಿನಗಳ ವರೆಗೆ ಸರ್ಕಾರ ಕಾರ್ಮಿಕರ ಪ್ರಯಾಣಕ್ಕೆ ಅನುಕೂಲವಾಗಲೆಂದು ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದೆ. ಹೀಗಾಗಿ ಜನ ಹೀಗಾಗಿ ಮುಂಜಾನೆಯಿಂದಲೇ ಲಾಕ್‍ಡೌನ್ ಪ್ರಯಾಣಿಕರು ತಮ್ಮ ತಮ್ಮ ಲಗೇಜ್‍ಗಳನ್ನು ತುಂಬಿಕೊಂಡು ಮೆಜೆಸ್ಟಿಕ್‍ಗೆ ಬಂದಿದ್ದಾರೆ. ಉಚಿತ ಪ್ರಯಾಣ ಎಂದು ಪತ್ನಿ, ಮಕ್ಕಳು ಮನೆಯವರೆಲ್ಲ ಊರಿಗೆ ವಾಪಸ್ ಹೊರಟಿದ್ದಾರೆ.
ಇನ್ನೂ ಪ್ರಯಾಣಿಸುವ ವೇಳೆ ತಪಾಸಣೆ ಕಡ್ಡಾಯವಾಗಿದ್ದು, ಆಶಾ ಕಾರ್ಯಕರ್ತೆಯರು, ವೈದ್ಯರು, ಡಾಕ್ಟರ್ ಮೆಜೆಸ್ಟಿಕ್‍ನಲ್ಲಿ ಕೆಲಸ ಆರಂಭಿಸಿದ್ದಾರೆ. ಬಸ್ ಹತ್ತುವ ಮುನ್ನ ಡ್ರೈವರ್, ಕಂಡೆಕ್ಟರ್ ಮತ್ತು ಪ್ರಯಾಣಿಕರು ತಪಾಸಣೆಗೆ ಒಳಪಡಬೇಕು. ಹೀಗಾಗಿ ಪ್ಲಾಟ್ ಫಾರಂ ಬಸ್ ಏರಿ ಟೆಂಪರೇಚರ್ ಚೆಕ್ ಅಪ್ ಮಾಡುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಮೆಜೆಸ್ಟಿಕ್ ಎಲ್ಲಾ ಭಾಗಗಳಿಗೂ ಪೊಲೀಸರನ್ನು ನಿಯೋಜನೆ ಮಾಡಿದ್ದಾರೆ.
ಕೊರೊನಾ ಲಾಕ್‍ಡೌನ್ ಬಂದ್ ಸಡಲಿಕೆ ಹಿನ್ನೆಲೆಯಲ್ಲಿ ಇಂದು ಮೆಜೆಸ್ಟಿಕ್ ತುಂಬ ಬಸ್ಸುಗಳದ್ದೇ ಕಾರುಬಾರು ಆಗಿದೆ. ಈ ಮೂಲಕ ಮೆಜೆಸ್ಟಿಕ್ ನಿಲ್ದಾಣ ಸಹಜ ಸ್ಥಿತಿಯತ್ತ ಬರುತ್ತಿದೆ. ಇಷ್ಟು ದಿನ ಖಾಲಿ ಇದ್ದ ರಸ್ತೆಗಳು ಇಂದು ಬಸ್ಸುಗಳಿಂದ ತುಂಬಿ ಹೋಗಿದೆ. ನೂರಾರು ಕೆಎಸ್‌ಆರ್‌ಟಿಸಿ ಬಸ್ಸುಗಳು ಶೆಡ್ಯೂಲ್ ಪ್ರಕಾರ ಸಂಚಾರಕ್ಕೆ ಸಜ್ಜಾಗಿದೆ. ಇನ್ನೂ ಆಟೋ, ದ್ವಿಚಕ್ರ ವಾಹನ, ಕ್ಯಾಬ್ ಕೂಡ ತಮ್ಮ ತಮ್ಮ ಸಂಚಾರ ಆರಂಭಿಸಿದೆ.ಹೀಗಾಗಿ ಮೆಜೆಸ್ಟಿಕ್ ಒಳಗೆ ಟ್ರಾಫಿಕ್ ಜಾಮ್ ಉಂಟಾಗಿದೆ.

