ಭಾರತದಲ್ಲಿ ಹೊಸದಾಗಿ 54,044 ಕೊರೊನಾ ಕೇಸ್ ದಾಖಲು : 76 ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ..!
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 54,044 ಕೊರೊನಾ ಕೇಸ್ ದಾಖಲಾಗಿದ್ದು, 717 ಜನ ಮಹಾಮಾರಿಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ವರದಿಯಿಂದ ತಿಳಿದಿದೆ.
ಇದರೊಂದಿಗೆ ಭಾರತದಲ್ಲಿ ಒಟ್ಟು ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಈಗ 76,51,108 ಆಗಿದ್ದು, ಸಾವಿನ ಸಂಖ್ಯೆ 1,15,914 ಕ್ಕೆ ತಲುಪಿದೆ.
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಸಕ್ರಿಯ ಪ್ರಕರಣಗಳಲ್ಲಿ 8448 ರಷ್ಟು ಕುಸಿದಿದೆ. ಬುಧವಾರ ಬೆಳಿಗ್ಗೆ ವೇಳೆಗೆ, ಭಾರತದಲ್ಲಿ 7,40,090 ಕೊರೊನಾವೈರಸ್ ಸಕ್ರಿಯ ಪ್ರಕರಣಗಳಿವೆ. ಸತತ ಐದನೇ ದಿನವೂ ಕೊರೊನಾವೈರಸ್ನ ಸಕ್ರಿಯ ಪ್ರಕರಣಗಳು ಭಾರತದಲ್ಲಿ 8 ಲಕ್ಷಕ್ಕಿಂತ ಕಡಿಮೆಯಾಗಿವೆ.
ಐಸಿಎಂಆರ್ ಪ್ರಕಾರ, ಅಕ್ಟೋಬರ್ 20 ರವರೆಗೆ ಒಟ್ಟು 9,72,00,379 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಮಂಗಳವಾರ 10,83,608 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

