ಆರೋಗ್ಯ ಸಮಸ್ಯೆ: ಜಪಾನ್ ಪ್ರಧಾನಿ ರಾಜೀನಾಮೆಗೆ ನಿರ್ಧಾರ!

ದೀರ್ಘಕಾಲದ ಅನಾರೋಗ್ಯದ ಸಮಸ್ಯೆ ಕಾರಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಜಪಾನ್ ಪ್ರಧಾನಿ ಶಿಂಜೊ ಅಬೆ ನಿರ್ಧರಿಸಿದ್ದಾರೆ.

ಜಪಾನ್‌ನ ಸುದೀರ್ಘ ಅವಧಿಯ ಪ್ರಧಾನ ಮಂತ್ರಿ ಮತ್ತು ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಬೆ, ಕಳೆದ ಹತ್ತು ವರ್ಷಗಳಿಂದ ಹೆಚ್ಚು ಕಾಲದಿಂದ ಅಲ್ಸರೇಟಿವ್ ಕೊಲೈಟಿಸ್‌ನಿಂದ ಬಳಲುತ್ತಿದ್ದು, ಆ ಕಾರಣದಿಂದಾಗಿ ಅಬೆ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿರುವುದಾಗಿ ಜಪಾನ್ ರಾಷ್ಟ್ರೀಯ ಸುದ್ದಿವಾಹಿನಿ ಎನ್‌ಎಚ್‌ಕೆ ವರದಿ ಮಾಡಿದೆ.

ಕಳೆದ ಹದಿನೈದು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಬೆ ತಮ್ಮ ಅಧಿಕಾರದ ಪೂರ್ಣಾವಧಿ ಮುಗಿಸಲು ಸಾಧ್ಯವಾಗುವುದಿಲ್ಲ  ಎಂಬ ಆತಂಕವನ್ನು ಹೆಚ್ಚಿಸಿದೆ ಎಂದು ಆಗಸ್ಟ್‌ 04 ರಂದು ಹೇಳಿದ್ದರು. ಅಬೆ ಅವರ ಆಡಳಿತಾವಧಿ 2021 ಸೆಪ್ಟೆಂಬರ್ ಗೆ ಕೊನೆಯಾಗಲಿದೆ.

ಅಬೆ ಅವರು ತಮ್ಮ ಎರಡನೆಯ ಅವಧಿಯ ಎಂಟು ವರ್ಷಗಳಲ್ಲಿ ಉದಾರವಾದಿ ಹಣಕಾಸಿನ ನೀತಿ, ಬಡ್ಡಿದರಗಳನ್ನು ಕಡಿತಗೊಳಿಸುವುದು ಮತ್ತು ಸರ್ಕಾರಿ ಸ್ವಾಮ್ಯದ ಕ್ಷೇತ್ರಗಳನ್ನು ಉದಾರೀಕರಣಗೊಳಿಸಿದ್ದಾರೆ ಎಂದು ಹೇಳಲಾಗಿದೆ.

ಕರುಳಿನ ಉರಿಯೂತದ  ಕಾಯಿಲೆಯಿಂದಾಗಿಯೂ ಅವರು 2007 ರಲ್ಲಿ ತಮ್ಮ ಮೊದಲ ಅವಧಿಯಲ್ಲಿ ಅಧಿಕಾರ ತೊರೆದಿದ್ದರು.


ಇದನ್ನೂ ಓದಿ: ಸೋನಿಯಾ ಗಾಂಧಿಗೆ 1% ಬೆಂಬಲವೂ ಇಲ್ಲ; ಆಂತರಿಕ ಚುನಾವಣೆ ನಡೆಯದಿದ್ದರೆ 50 ವರ್ಷ ಕಾಂಗ್ರೆಸ್‌ಗೆ ಅಧಿಕಾರವಿಲ್ಲ: ಗುಲಾಂ ನಬೀ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights