ಡಿಎಂಕೆ ಸಂಸದ ಜಗದ್‍ರಕ್ಷಕನ್‍ ಅವರ 89.19 ಕೋಟಿ ರೂ ಆಸ್ತಿ ಮುಟ್ಟುಗೋಲು ಹಾಕಿದ ಇಡಿ

ತಮಿಳುನಾಡಿನ ಡಿಎಂಕೆ ಪಕ್ಷದ ಹಾಲಿ ಸಂಸದ ಎಸ್‌ ಜಗದ್‍ರಕ್ಷಕನ್‍ ಮತ್ತು ಅವರ ಕುಟುಂಬ ಸದಸ್ಯರಿಗೆ ಸೇರಿದ 89.19 ಕೋಟಿ ರೂ ಮೌಲ್ಯದ ಆಸ್ತಿಯನ್ನು ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ(ಫೆಮಾ) ಅಡಿ ಜಾರಿ ನಿರ್ದೇಶನಾಲಯ(ಇಡಿ) ಮುಟ್ಟುಗೋಲು ಹಾಕಿಕೊಂಡಿದೆ.

ಫೆಮಾ ಕಾಯ್ದೆಯ ಸೆಕ್ಷನ್‍ 4ನ್ನು ಉಲ್ಲಂಘಿಸಿ ಸಿಂಗಾಪುರ ಮೂಲದ ಕಂಪೆನಿಯಲ್ಲಿ ಅಕ್ರಮವಾಗಿ ವಿದೇಶಿ ಸೆಕ್ಯುರಿಟಿಗಳನ್ನು ಪೆಡೆದು ಆಸ್ತಿ  ವರ್ಗಾವಣೆ ಮಾಡಿರುವುದರಿಂದ 89.19 ಕೋಟಿ ಮೊತ್ತದ ಆಸ್ತಿಯನ್ನು ಫೆಮಾದ ಸೆಕ್ಷನ್‍ 37ಎ ಅಡಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ಇಡಿ ತಿಳಿಸಿದೆ.

ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳಲ್ಲಿ ಜಗದ್‍ರಕ್ಷಕನ್‍ ಮತ್ತು ಅವರ ಕುಟುಂಬಕ್ಕೆ ಸೇರಿದ ತಮಿಳುನಾಡಿನಲ್ಲಿನ ಕೃಷಿ ಜಮೀನುಗಳು, ಪ್ಲಾಟ್‌ಗಳು, ಮನೆಗಳು ಇತ್ಯಾದಿ ಸ್ಥಿರಾಸ್ಥಿ ಮತ್ತು ಬ್ಯಾಂಕ್ ಖಾತೆಗಳಲ್ಲಿನ ನಗದು ಮತ್ತು ಷೇರುಗಳು ಸೇರಿ ಒಟ್ಟು ರೂ 89.19 ಕೋಟಿ ಮೊತ್ತದ ಆಸ್ತಿಯನ್ನು ಫೆಮಾದ ಸೆಕ್ 37ಎ ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಪ್ರಕರಣ ಕುರಿತು ಜಾರಿ ನಿರ್ದೇಶನಾಲಯದಿಂದ ತನಿಖೆ ಮುಂದುವರೆದಿದೆ.
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights