ಕೊರೊನಾ ವಿರುದ್ಧ ಹೋರಾಡಲು ರಾಜ್ಯಕ್ಕೆ 2ನೇ ಬಾರಿಗೆ ಬಂದ 120 ಮೆ.ಟ ಆಕ್ಸಿಜನ್!

ಕೊರೊನಾ ವಿರುದ್ಧ ಹೋರಾಡಲು ರಾಜ್ಯಕ್ಕೆ ಎರಡನೇ ಹಂತದ ಆಕ್ಸಿಜನ್ ಇಂದು ಆಗಮಸಿದೆ. ಓಡಿಶಾ ರಾಜ್ಯದ ಕಾಳಿಂಗ ನಗರದಿಂದ ಶುಕ್ರವಾರ ಮಧ್ಯಾಹ್ನ 3.10ಕ್ಕೆ ಹೊರಟ ರೈಲು ಇಂದು (ಮೇ 15)ಬೆಳಗ್ಗೆ 5 ಗಂಟೆಗೆ 120 ಟನ್ ಆಕ್ಸಿಜನ್ ಹೊತ್ತ ರೈಲು ಬೆಂಗಳೂರಿನ ವೈಟ್‌ಫೀಲ್ಡ್‌ಗೆ ಆಗಮಿಸಿದೆ.

ಕಳೆದ ಕೆಲ ದಿನಗಳ ಹಿಂದೆ 120 ಮೆಟ್ರಕ್ ಟನ್ ಆಕ್ಸಿಜನ್ ರಾಜ್ಯಕ್ಕೆ ಬಂದಿತ್ತು. ಆಕ್ಸಿಜನ್ ಕೊರತೆ ನೀಗಿಸಲು ಇಂದು ಮತ್ತೆ 120 ಮೆಟ್ರಿಕ್ ಟನ್ ಆಕ್ಸಿಜನ್ 6 ಕಂಟೇನೈರ್ ನಲ್ಲಿ ಬಂದಿದೆ. ಇದರಿಂದ ಬಹುತೇಕ ಆಕ್ಸಿಜನ್ ಸಮಸ್ಯೆ ಕಡಿಮೆಯಾಗುವ ಸಾಧ್ಯತೆ ಇದೆ.

ಜಾರ್ಖಂಡ್‌ನ ಟಾಟಾ ನಗರದಿಂದ 120 ಟನ್ ಆಕ್ಸಿಜನ್ ಹೊತ್ತ ರೈಲು ಶುಕ್ರವಾರ ಮಧ್ಯಾಹ್ನ 12.40ಕ್ಕೆ ಹೊರಟಿತ್ತು. ಇಂದು ಬೆಂಗಳೂರಿನ ವೈಟ್‌ಫೀಲ್ಡ್‌ಗೆ ಬಂದು ತಲುಪಿದೆ. ಇದನ್ನು ಸರ್ಕಾರ ಜಿಲ್ಲೆಗೆ ಸಾಗಣೆ ಮಾಡಲಿದೆ.

ಕರ್ನಾಟಕಕ್ಕೆ ಮೊದಲ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು ಬುಧವಾರ ಆಗಮಿಸಿತ್ತು. ಈ ಆಕ್ಸಿಜನ್ ಪೂರೈಕೆಯಿಂದಾಗಿ ರಾಜ್ಯದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಅನುಕೂಲವಾಗಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights