ಹುಚ್ಚು ಬಿಡದೆ ಮದ್ವೆ ಆಗಲ್ಲ, ಮದ್ವೆ ಆಗದೆ ಹುಚ್ಚು ಬಿಡೊಲ್ಲ ಅನ್ನೋ ನ್ಯಾಯಕ್ಕೆ ನಾನು ಬರಲ್ಲ : ಸಚಿವ ಮಾಧುಸ್ವಾಮಿ

ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕವಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡಿದ ಕಾನೂನು ಮತ್ತು ಸಂಸದೀಯ ಖಾತೆ ಸಚಿವ ಮಾಧುಸ್ವಾಮಿ ಮತ್ತು ವಕೀಲರ ನಡುವೆ ಮಾತಿನ ಚಕಮಕಿ ನಡೆದಿದೆ.

ಕಾಮಗಾರಿ ಪೂರ್ಣಗೊಂಡರೂ ಹೊಸ ನ್ಯಾಯಾಲಯದ ಕಟ್ಟಡ ಉದ್ಘಾಟನೆಯಾಗದ ಹಿನ್ನೆಲೆಯಲ್ಲಿ ಸಚಿವ ಮಾಧುಸ್ವಾಮಿಯನ್ನ ತರಾಟೆ ತೆಗೆದುಕೊಂಡಿದ್ದಾರೆ ವಕೀಲರು.

ಈ ವೇಳೆ ಮಾತನಾಡಿದ ಸಚಿವರು, ಯಾರಿಗೋ ಹೆದರಿ ಮಂತ್ರಿಗಿರಿ ಮಾಡೋಕ್ ಬಂದಿಲ್ಲ. ವಕೀಲರ ಸಮಸ್ಯೆ ಮೊದಲೇ ಗೊತ್ತು. ಸೂರ್ಯ ಯಾರನ್ನೂ ಕೇಳಿ ಹುಟ್ಟಲ್ಲ ಸರ್ಕಾರ ಸಹ ಹಂಗೆ. ನಾನು ಮಾಡೋದ್ ಮಾಡ್ತಿನಿ, ಹೆದರುವ ಅವಶ್ಯಕತೆ ನನಗಿಲ್ಲ. ವಕೀಲರ ಸಮಸ್ಯೆಗೆ ಸ್ಪಂದಿಸಲಾಗುವುದು. ಇಲ್ಲಿ ಭಾಷಣ ಮಾಡ್ತಾ ಕೂತರೆ ಸರಿಯಲ್ಲ. ಯಾರ ಸಹಾಯ ನನಗೆ ಅಗತ್ಯವಿಲ್ಲ.

ಎಲ್ಲರ ಜತೆ ಮಾತಾಡಿದಿನಿ. ಎಂಟು ಹತ್ತು ದಿವಸಕ್ಕೆ ಕಾಮಗಾರಿ ಕಂಪ್ಲೀಟ್ ಆಗುತ್ತೆ. ಕಕ್ಷಿದಾರರ ಪರ ಹೋರಾಟ ಮಾಡಿ ನಮ್ಮ ನಮ್ಮ ನಡುವೆ ಗಲಾಟೆ ಬೇಡ. ತೀರ್ಮಾನ ತೆಗೆದುಕೊಳ್ಳೋದು ನಾವು. ಹುಚ್ಚು ಬಿಡದೆ ಮದ್ವೆ ಆಗಲ್ಲ, ಮದ್ವೆ ಆಗದೆ ಹುಚ್ಚು ಬಿಡೊಲ್ಲ ಅನ್ನೋ ನ್ಯಾಯಕ್ಕೆ ನಾನು ಬರಲ್ಲ. ಜಿಜ್ಞಾಸೆ ಬೇಡ ಸೇತುವೆ ಮುಗಿಯೋಕೆ ಮೂರು ವರ್ಷ ಬೇಕು. ಈಗ ಹೊಸ ಕೋರ್ಟ್ ಓಪನ್ ಮಾಡೋದು ಮುಖ್ಯ.

ನೂತನ ಕೋರ್ಟ್ ಉದ್ಘಾಟನೆ ಮೊದಲು ರೈಲ್ವೇ ಸೇತುವೇ ಕಾಮಗಾರಿ ಮುಗಿಯಲಿ ಎಂಬ ಕೆಲವು ವಕೀಲ ವಾದಕ್ಕೆ ವಾಗ್ವಾದ ಮಾಡಿದರು. ಹೀಗಾಗಿ ವಕೀಲರು ಮತ್ತು ಸಚಿವರ ನಡುವೆ ಮಾತಿನ ಚಕಮಕಿ ತಾರಕ್ಕೇರಿ ಕೆಲವೊತ್ತು ಗೊಂದಲದ ವಾತಾವರಣವೇ ಸೃಷ್ಟಿಯಾಗಿತ್ತು. ಕೆಲ ವಕೀಲರು ವಾಗ್ವಾದವನ್ನ ತಿಳಿಗೊಳಿಸಲು ಹರಸಾಹಸವೇ ಪಡಬೇಕಾಯ್ತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights