ದೇಶದಲ್ಲಿ 3.26 ಲಕ್ಷ ಹೊಸ ಕೊರೊನಾ ಕೇಸ್ : ಏಕದಿನ ಪ್ರಕರಣಗಳಲ್ಲಿ ಕರ್ನಾಟಕದ್ದೇ ಮೇಲುಗೈ!
ದೇಶದಲ್ಲಿ ಕಳೆದ 23 ಗಂಟೆಯಲ್ಲಿ 3.26 ಲಕ್ಷ ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು 3890 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾರತವು ಹೊಸ 3,26,098 ಕೊರೊನಾ ಪ್ರಕರಣಗಳನ್ನು ದಾಖಲಿಸಿದೆ. ಏಕದಿನ ಪ್ರಕರಣಗಳಲ್ಲಿ ಕರ್ನಾಟಕವೇ ಮೊದಲ ಸ್ಥಾನದಲ್ಲಿದೆ.
ಗರಿಷ್ಠ ಪ್ರಕರಣಗಳನ್ನು ದಾಖಲಿಸಿದ ಅಗ್ರ ಐದು ರಾಜ್ಯಗಳಲ್ಲಿ 41,779 ಪ್ರಕರಣಗಳು ಕರ್ನಾಟಕದಲ್ಲಿ, 39,923 ಪ್ರಕರಣಗಳು ಮಹಾರಾಷ್ಟ್ರ, 34,694 ಪ್ರಕರಣಗಳು ಕೇರಳ, ತಮಿಳುನಾಡು 31,892 ಪ್ರಕರಣಗಳು ಮತ್ತು ಆಂಧ್ರಪ್ರದೇಶದಲ್ಲಿ 22,018 ಪ್ರಕರಣಗಳು ದಾಖಲಾಗಿವೆ.
ಕಳೆದ 24 ಗಂಟೆಗಳಲ್ಲಿ ಭಾರತ 3,890 ಸಾವುನೋವುಗಳನ್ನು ದಾಖಲಿಸಿದೆ. ಈ ಪೈಕಿ ಮಹಾರಾಷ್ಟ್ರದಲ್ಲಿ (695) ಗರಿಷ್ಠ ಸಾವುನೋವು ಸಂಭವಿಸಿದ್ದು, ನಂತರ ಕರ್ನಾಟಕದಲ್ಲಿ 373 ಸಾವುಗಳು ಸಂಭವಿಸಿವೆ.


