ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ; BJP ಮಾಜಿ ಶಾಸಕರಿಗೆ ಹಿಗ್ಗಾಮುಗ್ಗ ಥಳಿಸಿದ ಜನರು

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮಾಜಿ ಬಿಜೆಪಿ ಶಾಸಕನಿಗೆ ಜನರು ಹಿಗ್ಗಾಮುಗ್ಗ ಥಳಿಸಿದ್ದು, ಘಟನೆಯ ವಿಡೀಯೋ ವೈರಲ್ ಆಗಿದೆ. ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

ಎಂಪಿ ಗ್ರೂಪ್‌ಗೆ ಸೇರಿದ ಶಾಲೆ ಮತ್ತು ಕಾಲೇಜಿನಲ್ಲಿ 9ನೇ ತರಗತಿ ಓದುತ್ತಿರುವ ಬಾಲಕಿಗೆ ಚಿರಾಗಾಂವ್‌ನ ಮಾಜಿ ಬಿಜೆಪಿ ಶಾಸಕ ಮಾಯಾ ಶಂಕರ್ ಪಾಠಕ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಪಾಠಕ್‌ ಅವರು ಅದೇ ಕಾಲೇಜಿಗೆ ಮುಖ್ಯಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ.

ಬಾಲಕಿಗೆ ಕಿರುಕುಳ ನೀಡಿರುವ ಬಗ್ಗೆ ಬಾಲಕಿಯ ಕುಟುಂಬಸ್ಥರು ಮಾಜಿ ಶಾಸಕರ ಕೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಆಕೆಯ ಕುಟುಂಬದವರು ಮತ್ತು ಸ್ಥಳೀಯರು ಅವರಿಗೆ ಥಳಿಸಿದ್ದಾರೆ. ಬಳಿಕ ಶಾಸಕರು ತಮ್ಮ ತಪ್ಪನ್ನು ಒಪ್ಪಿ ಕ್ಷಮೆ ಕೇಳಿದ್ದಾರೆ. ಇದೆಲ್ಲವೂ ವಿಡಿಯೋದಲ್ಲಿ ರೆಕಾರ್ಡ್‌ ಆಗಿದೆ.

ಈ ಪ್ರಕರಣದ ಕುರಿತಾಗಿ ಬಾಲಕಿಯ ಪೋಷಕರು ಪೊಲೀಸರ ಬಳಿ ದೂರು ದಾಖಲಿಸಿಲ್ಲ. ಹಲ್ಲೆ ಕುರಿತಾಗಿಯೂ ಮಾಜಿ ಶಾಸಕರೂ ಕೂಡಾ ಯಾವುದೇ ದೂರು ದಾಖಲಿಸಿಲ್ಲ. ಇದೀಗ ವಿಡಿಯೋ ಆಧಾರದ ಮೇಲೆ ಪೊಲೀಸರೇ ಸ್ವಯಂ ಪ್ರೇರಿತವಾಗಿ ಎಫ್‌ಐಆರ್ ದಾಖಲಿಸಿಕೊಂಡಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: ಕುಡುಕರಿಂದ ತಂಗಿಯನ್ನು ರಕ್ಷಿಸಲು ಪ್ರಾಣವನ್ನೇ ಪಣಕ್ಕಿಟ್ಟ ಯುವಕ; ಸಾವು

Spread the love

Leave a Reply

Your email address will not be published. Required fields are marked *