ಅಬ್ಬಬ್ಬಾ ಬೆನ್ನು ನೋವು.. ಜಾಮೀನಿಗಾಗಿ ತುಪ್ಪದ ಹುಡುಗಿ ನೌಟಂಕಿಯಾಟ..!
ಸ್ಯಾಂಡಲ್ ವುಡ್ ಮಾದಕ ಲೋಕ ಪ್ರಕರಣದಲ್ಲಿ ಜೈಲುಹಕ್ಕಿ ಆಗಿರುವ ನಟಿ ರಾಗಿಣಿ ದ್ವಿವೇದಿ ಸದ್ಯ ಜಾಮೀನಿಗಾಗಿ ಹೊಸ ನಾಟಕ ಶುರು ಮಾಡಿದ್ದಾರೆ.
ಹೌದು… ಡ್ರಗ್ಸ್ ಕೇಸ್ ನಲ್ಲಿ ಕೆಲ ತಿಂಗಳಿನಿಂದ ಜೈಲು ವಾಸ ಅನುಭವಿಸುತ್ತಿರುವ ರಾಗಿಣಿ ಜಾಮೀನು ಪಡೆಯಲು ಸಾಕಷ್ಟು ಕಸರತ್ತು ಮಾಡುತ್ತಿದ್ದಾರೆ. ಆದರೆ ಅದ್ಯಾಕೋ ಏನೋ ತುಪ್ಪದ ಹುಡುಗಿಗೆ ಬಿಡುಗಡೆ ಭಾಗ್ಯ ಸಿಗುತ್ತಲೇ ಇಲ್ಲ. ಇದಕ್ಕಾಗಿ ರಾಗಿಣಿ ಮಾಸ್ಟರ್ ಪ್ಲಾನ್ ಮಾಡಿದಂತೆ ಕಾಣುತ್ತಿದೆ. ಈ ಹಿಂದೆ ಅನಾರೋಗ್ಯದ ಹೇಳಿಕೆ ಕೊಟ್ಟು ನಟಿ ಸಂಜನಾ ಜಾಮೀನು ಪಡೆದು ಹೊರಬಂದರು. ಇದೇ ರೀತಿ ಅನಾರೋಗ್ಯದ ನಾಟಕ ರಾಗಿಣಿ ಕೂಡ ಆಡುತ್ತಿದ್ದಾರೆ ಎನ್ನಲಾಗುತ್ತಿದೆ.
ಅಷ್ಟಕ್ಕೂ ರಾಗಿಣಿಗೆ ಬೆನ್ನು ನೋವಂತೆ. ಹೀಗಾಗಿ ಆಕೆಗೆ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆಕೆ ಹೇಳಿದಂತೆ ಸಿಕ್ಕಾಪಟ್ಟೆ ಬೆನ್ನುನೋವು ಇರುವುದರಿಂದ ಪರಪ್ಪನ ಅಗ್ರಹಾರದಲ್ಲೇ ವೈದ್ಯರು ಪರೀಕ್ಷಿಸಿದ್ದರು. ಪರೀಕ್ಷೆ ಬಳಿಕೆ ವೈದ್ಯರು ಆಕೆಗೆ ಅಂತ ದೊಡ್ಡ ನೋವು ಇದ್ದಂತೆ ಕಾಣುತ್ತಿಲ್ಲ ಎಂದಿದ್ದಾರೆ. ಹೀಗಾಗಿ ಜೈಲಿನಲ್ಲಿ ನಟಿ ನೌಟಂಕಿತನ ಆಡುತ್ತಿದ್ದಾರೆಂದು ಹೇಳಲಾಗುತ್ತಿದೆ.ಈಗಾಗಲೇ ನಟಿ ಜಾಮೀನು ವಿಚಾರಣೆ
ಮಂಗಳವಾರಕ್ಕೆ ಮುಂದೂಡಲಾಗಿದೆ. ಹೀಗಾಗಿ ನಟಿ ಅನಾರೋಗ್ಯದ ಪ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ.

