ಹೊಸ ವರ್ಷ ಆಚರಣೆಗೆ ಬ್ರೇಕ್ : ಇಂದು ಮಧ್ಯಾಹ್ನದಿಂದಲೇ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ..!

2020 ಬಂದಿದ್ದೇ ಬಂದಿದ್ದು ಯಾವ ಕೆಲಸವೂ ಕೈಗೆಟಕುತಿಲ್ಲ. 2021 ಯನ್ನಾದರೂ ಚೆನ್ನಾಗಿರಲಿ ಎಂದು ಆಶಿಸುತ್ತಾ ಸಂಭ್ರಮದಿಂದ ಬರಮಾಡಿಕೊಳ್ಳೋಣ ಅಂದ್ರೆ ಅದಕ್ಕೂ ಕೊರೊನಾ ಅಡ್ಡಗಾಲು ಹಾಕಿದೆ.

ಹೌದು… ಬ್ರಿಟನ್ ಕೊರೊನಾ ರಾಜ್ಯಕ್ಕೆ ಎಂಟ್ರಿ ಕೊಟ್ಟ ಬೆನ್ನಲ್ಲೆ ಸಾರ್ವಜನಿಕ ಸಂಭ್ರಮಗಳಿಗೆ ಬ್ರೇಕ್ ಬಿದ್ದಿದೆ. ಪರಿಣಾಮ ಇಂದು ಮಧ್ಯಾಹ್ನದಿಂದಲೇ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ನಿಯಮ ಮೀರಿ ರಸ್ತೆಗಿಳಿದ್ರೆ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಆಯಕ್ತ ಕಲಮ್ ಪಂತ್ ಎಚ್ಚರಿಕೆ ಕೊಟ್ಟಿದ್ದಾರೆ.

ಪ್ರತೀ ವರ್ಷವೂ ಬ್ರಿಗೇಡ್ ರೋಡ್, ಚರ್ಚ್ ಶೀಟ್, ಎಂಜಿ ರೋಡ್ ಇಂಥಹ ಪ್ರಮೂಖ ಬೀದಿಗಳಲ್ಲಿ ಜನ ಸಾಗರ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಿತ್ತು. ಆದರೀಗ ಈ ಬೀದಿಗಳಲ್ಲಿ ಜನ ಸೇರುವುದಿರಲಿ ಸುಖಾ ಸುಮ್ಮನೆ ಮನೆ ಬಿಟ್ಟು ಹೊರಬರುವಂತಿಲ್ಲ. ಅಧಿಕ ಜನ ಒಂದೆಡೆ ಸೇರುವಂತಿಲ್ಲ. ಹಾಗೊಂದು ವೇಳೆ ಸೇರಿದರೆ ಬ್ರಿಟನ್ ಭೂತ ಒಕ್ಕರಿಸುವ ಆಂತಕದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.

ಇಂದು ಮಧ್ಯಾಹ್ನ 12 ಗಂಟೆಯಿಂದ ಜನವರಿ 1 ಬೆಳಿಗ್ಗೆ 6 ಗಂಟೆಯವರೆಗೆ 144 ಸೆಕ್ಷನ್ ಜಾರಿಯಲ್ಲಿರಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights