ನಡುರಸ್ತೆಯಲ್ಲೇ ಯುವಕನ ಕೊಲೆ; ವಿಡಿಯೋ ಮಾಡುತ್ತಾ ನಿಂತಿದ್ದ ಜನರು!

ವ್ಯಕ್ತಿಯೊಬ್ಬನನ್ನು ಇಬ್ಬರು ದೊಣ್ಣೆ ಮತ್ತು ಕೋಲಿನಿಂದ ಹೊಡೆದು ಕೊಂದರುವ ಘಟನೆ ಉತ್ತರ ಪ್ರದೇಶದ ಗಾಝಿಯಾಬಾದ್‌ನಲ್ಲಿ ನಡೆದಿದೆ. ಈ ವೇಳೆ ಅಲ್ಲಿದ್ದ ಜನರು ಆ ದೃಶ್ಯಗಳನ್ನು ವಿಡಿಯೋ ಮಾಡುತ್ತಾ ನೋಡಿಕೊಂಡು ನಿಂತಿದ್ದು ಅಮಾನವೀಯತೆ ಮೆರೆದಿದ್ದಾರೆ.

ಗಾಝಿಯಾಬಾದ್‌ನಲ್ಲಿ ಅತಿ ಹೆಚ್ಚು ಟ್ರಾಫಿಕ್‌ ಜಾಮ್‌ ಸಂಭವಿಸುವಂತಹ, ಹೆಚ್ಚು ಜನದಟ್ಟಣಯನ್ನು ಹೊಂದಿದ್ದಂತಹ ಪ್ರಮುಖ ರಸ್ತೆಯಲ್ಲೇ ಈ ಘಟನೆ ನಡೆದಿದೆ.

ಇಬ್ಬರು ವ್ಯಕ್ತಿಗಳು ಕೋಲಿನಿಂದ ಹೊಡೆಯುತ್ತಿದ್ದಾಗ ಅಲ್ಲಿದ್ದ ಕೆಲವರು ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಿದ್ದರೆ ಮತ್ತೆ ಕೆಲವರು ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದಾರೆ.

ಮಾರಣಾಂತಿಕವಾಗಿ ಗಾಯಗೊಂಡಿದ್ದ ವ್ಯಕ್ತಿ ತೀವ್ರ ರಕ್ತಸ್ರಾವಕ್ಕೊಳಗಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತನನ್ನು ಅಜಯ್ ಎಂದು ಗುರುತಿಸಲಾಗಿದೆ.

ಇನ್ನು ಆರೋಪಿಗಳನ್ನು ಗೋವಿಂದ್ ಹಾಗೂ ಅಮಿತ್ ಎಂದು ಹೇಳಲಾಗಿದೆ. ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

ಈ ಹಿಂದೆ ಅಜಯ್ ಸಹೋದರ ಮತ್ತು ಗೋವಿಂದ್ ನಡುವೆ ಹೂವಿನ ಅಂಗಡಿ ವಿಚಾರವಾಗಿ ಗಲಾಟೆ ನಡೆದಿತ್ತು. ಇದೇ ವಿಚಾರಕ್ಕೆ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.


ಇದನ್ನೂ ಓದಿ: ಹರಿಯಾಣ ಚುನಾವಣೆಯಲ್ಲೂ BJPಗೆ ಸೋಲು; ಭಾರೀ ಮುಖಭಂಗಕ್ಕೆ ಒಳಗಾದ ಕೇಸರಿ ಪಡೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights