FACT CHECK | ನೃತ್ಯ ಮಾಡುತ್ತಿರುವ ವೃದ್ದ ಮಹಿಳೆ ಬಾಲಿವುಡ್ ಹಿರಿಯ ನಟಿ ವೈಜಯಂತಿ ಮಾಲಾ ಎಂಬುದು ಸುಳ್ಳು

ವೃದ್ದೆಯೊಬ್ಬರು ನೃತ್ಯ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, 98ವರ್ಷ ವಯಸ್ಸಿನ ಬಾಲಿವುಡ್ ನಟಿ ವೈಜಯಂತಿ ಮಾಲಾ ಈಗಲು ಹೇಗೆ ನೃತ್ಯ ಮಾಡುತ್ತಾರೆ ನೋಡಿ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

98 ವರ್ಷದ ವೈಜಯಂತಿಮಾಲಾ ಎಂದು ಹೇಳಲಾಗುತ್ತಿದ್ದ ಈ ವಿಡಿಯೋವನ್ನು @MAsethi ಎಂಬ ಎಕ್ಸ್‌  ಬಳಕೆದಾರರು ಹಂಚಿಕೊಂಡಿದ್ದಾರೆ. “ವೈಜಯಂತಿಮಾಲಾ, ಪ್ರಸಿದ್ಧ ಹಿಂದಿ ನಟಿ, ಈಗ 98 ವರ್ಷ ವಯಸ್ಸಿನವರು. ಈ ವಯಸ್ಸಿನಲ್ಲೂ ಅವರಲ್ಲಿರುವ ಜೀವನೋತ್ಸಾಹ ಮತ್ತು ಸಂತೋಷವನ್ನು ನೋಡಿ!” ಎಂದು ಬರೆದಿದ್ದರು. ಇದೇ ರೀತಿಯ ಹಕ್ಕುಗಳೊಂದಿಗೆ ಇತರ X ಬಳಕೆದಾರರು ಕೂಡ ಈ ವಿಡಿಯೋವನ್ನು ಹಂಚಿಕೊಂಡಿದ್ದರು.

ಇದೇ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ವೃದ್ಧ ಮಹಿಳೆಯೊಬ್ಬರು ನೃತ್ಯ ಮಾಡುತ್ತಿರುವುದು ಕಂಡುಬರುತ್ತದೆ. ಮತ್ತು ಕೆಲವು ಮಹಿಳೆಯರು ಅವರನ್ನು ಹಿಂದಿನಿಂದ ಹಿಡಿದುಕೊಳ್ಳುತ್ತಿರುವುದು ಕಂಡುಬರುತ್ತದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದಲ್ಲಿ ನೃತ್ಯ ಮಾಡುತ್ತಿರುವ 98 ಹರೆಯದ ವೃದ್ದೆ ಒಂದು ಕಾಲದಲ್ಲಿ ಬಾಲಿವುಡ್‌ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ನಟಿ ವೈಜಯಂತಿ ಮಾಲಾರದ್ದು ಎಂದು ಹೇಳಲಾಗುತ್ತಿರುವ ವಿಡಿಯೋವನ್ನು ಪರಿಶೀಲಿಸಲು,  ಗೂಗಲ್ ಲೆನ್ಸ್‌ನಲ್ಲಿ ಸರ್ಚ್ ಮಾಡಿದಾಗ, 6 ಡಿಸೆಂಬರ್ 2022 ರ ಎಬಿಪಿ ವರದಿಯೊಂದು ಲಭ್ಯವಾಗಿದೆ.

“93 ವರ್ಷದ ಅಜ್ಜಿಯ ಮೇಲೆ ಶಮ್ಮಿ ಕಪೂರ್‌ರ ಜಾದೂ, ‘ಬದನ್ ಪೆ ಸಿತಾರೆ ಲಪೇಟೆ ಹುವೆ’ ಹಾಡಿಗೆ ಅಜ್ಜಿ ಕುಣಿಯುತ್ತಿದ್ದಾರೆ” ಎಂದು ಆ ಪೋಸ್ಟ್‌ನಲ್ಲಿ ಬರೆಯಲಾಗಿತ್ತು. ನಂತರ, ಗೂಗಲ್‌ನಲ್ಲಿ ಎನ್‌ಡಿ ಟಿವಿ ಸುದ್ದಿ ಮಾಧ್ಯಮದ ವರದಿಯೊಂದು ಲಭ್ಯವಾಗಿದ್ದು, “93 ವರ್ಷದ ಅಜ್ಜಿಯೊಬ್ಬರು ಉತ್ಸಾಹದಿಂದ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶಮ್ಮಿ ಕಪೂರ್ ಮತ್ತು ವೈಜಯಂತಿಮಾಲಾ ಅಭಿನಯದ ‘ಓ ಜಾನೇ ತಮನ್ನಾ ಕಿಧರ್ ಜಾ ರಹೀ ಹೋ’ ಹಾಡಿಗೆ ಅವರು ಅದ್ಭುತವಾಗಿ ನೃತ್ಯ ಮಡಿದ್ದಾರೆ” ಎಂದು ಉಲ್ಲೇಖಿಸಲಾಗಿದೆ.

ಸಡಚ

ವೈಜಯಂತಿ ಮಾಲಾ ಕುರಿತು ಮತ್ತಷ್ಟು ಮಾಹಿತಿಗಾಗಿ ಅವರ ಇತ್ತೀಚಿನ ವಿಡಿಯೋಗಳಿಗಾಗಿ ಸರ್ಚ್ ಮಾಡಿದಾಗ, ಡಿಡಿ ನ್ಯೂಸ್‌ನಲ್ಲಿ 9 ತಿಂಗಳ ಹಿಂದೆ ಅಪ್‌ಲೋಡ್ ಮಾಡಲಾದ ವೈಜಯಂತಿಮಾಲಾ ಅವರ ಸಂದರ್ಶನದ ವಿಡಿಯೋ ಲಭ್ಯವಾಗಿದೆ. ಆ ವಿಡಿಯೋದಲ್ಲಿ ಕಾಣಿಸಿಕೊಳ್ಳುವ ವೈಜಯಂತಿಮಾಲಾ, ವೈರಲ್ ವಿಡಿಯೋದಲ್ಲಿರುವ ವೃದ್ಧ ಮಹಿಳೆಗಿಂತ ಸಂಪೂರ್ಣ ಭಿನ್ನವಾಗಿದ್ದಾರೆ. ಈ ಮೂಲಕ ವಿಡಿಯೋದಲ್ಲಿ ಡ್ಯಾನ್ಸ್‌ ಮಾಡುತ್ತಿರುವ ವೃದ್ಧ ಮಹಿಳೆ ವೈಜಯಂತಿಮಾಲಾ ಅಲ್ಲ ಎಂಬುದು ಸ್ಪಷ್ಟವಾಗಿದೆ.

ನಟಿ ವೈಜಯಂತಿಮಾಲಾ ಅವರೊಂದಿಗಿನ ವೈರಲ್ ವೀಡಿಯೊದಲ್ಲಿ ಕಂಡುಬರುವ ವೃದ್ಧ ಮಹಿಳೆಯ ಫೋಟೊವನ್ನು ಫ್ಯಾಕ್ಟ್‌ ಕ್ರೆಸೆಂಡೋ ಹೋಲಿಕೆ ಮಾಡಿ ಎರಡು ಚಿತ್ರಗಳು ಬೇರೆ ಬೇರೆ ಎಂದು ತಿಳಿಸಿರುವುದನ್ನು ಕೆಳಗೆ ನೋಡಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುವಂತೆ ವೈರಲ್ ವಿಡಿಯೋದಲ್ಲಿ ನೃತ್ಯ ಮಾಡುತ್ತಿರುವ 93 ವರ್ಷದ ವೃದ್ದ ಮಹಿಳೆ ಬಾಲಿವುಡ್‌ ಹಿರಿಯ ನಟಿ ವೈಜಯಂತಿ ಮಾಲಾ ಅಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ರಾಜ್ಯಸಭೆಯಲ್ಲಿ ವಕ್ಫ್ ಮಸೂದೆ ಅಂಗೀಕಾರ ಆಗಿದೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights