ಹಿಮಾಚಲ ಪ್ರದೇಶದ ರಾಜ್ಯಪಾಲರ ಮೇಲೆ ಹಲ್ಲೆ?; 05 ಕಾಂಗ್ರೆಸ್‌ ಶಾಸಕರ ಅಮಾನತು!

ಹಿಮಾಚಲ ಪ್ರದೇಶದ ಗವರ್ನರ್ ಬಂಡಾರು ದತ್ತಾತ್ರಯ ಅವರ ಮೇಲೆ ವಿಧಾನಸಭೆ ಸಂಕೀರ್ಣದಲ್ಲಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಕಾಂಗ್ರೆಸ್‌ನ ಐದು ಶಾಸಕರನ್ನು ಸ್ಪೀಕರ್ ವಿಪಿನ್ ಪರ್ಮಾರ್ ಅಮಾನತುಗೊಳಿಸಿದ್ದಾರೆ.

ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಭರದ್ವಾಜ್ ಅವರು ಮಂಡಿಸಿದ ನಿರ್ಣಯದ ಆಧಾರದ ಮೇಲೆ ವಿಪಕ್ಷ ನಾಯಕ ಮುಖೇಶ್ ಅಗ್ನಿಹೋತ್ರಿ ಸೇರಿದಂತೆ ಕಾಂಗ್ರೆಸ್ ಶಾಸಕರನ್ನು ಅಮಾನತುಗೊಳಿಸಲಾಗಿದೆ ಎಂದು ಹಿಮಾಚಲ ವಿಧಾನಸಭಾ ಸ್ಪೀಕರ್ ತಿಳಿಸಿದ್ದಾರೆ.

ಶುಕ್ರವಾರ ಆರಂಭವಾದ ಬಜೆಟ್ ಅಧಿವೇಶನದ ಸಮಯದಲ್ಲಿ ರಾಜ್ಯಪಾಲರು ವಿಧಾನಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ನಂತರ, ಅವರು ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಮತ್ತು ವಿಪಿನ್ ಪರ್ಮಾರ್ ಅವರೊಂದಿಗೆ ತಮ್ಮ ಮೋಟಾರು ವಾಹನದ ಕಡೆಗೆ ಹೋಗುತ್ತಿರುವಾಗ ಸ್ಪೀಕರ್ ಕೊಠಡಿಯ ಮುಂದೆ ಪ್ರತಿಪಕ್ಷದ ಸದಸ್ಯರು ಅವರನ್ನು ತಡೆಯಲು ಪ್ರಯತ್ನಿಸಿದರು. ಕಾಂಗ್ರೆಸ್ ಸದಸ್ಯರ ಈ ನಡವಳಿಕೆಯು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಸ್ಪೀಕರ್ ಹೇಳಿದ್ದು, ಐದು ಶಾಸಕರನ್ನು ಅಧಿವೇಶನ ಮುಗಿಯುವವರೆಗೂ ಸದನದಿಂದ ಅಮಾನತುಗೊಳಿರುವುದಾಗಿ ತಿಳಿಸಿದ್ದಾರೆ.

ಗವರ್ನರ್ ಬಂಡಾರು ದತ್ತಾತ್ರಯ
ಗವರ್ನರ್ ಬಂಡಾರು ದತ್ತಾತ್ರಯ

ರಾಜ್ಯಪಾಲರನ್ನು ದಾರಿ ಮಧ್ಯೆ ತಡೆಯಲು ಯತ್ನಿಸಿದ್ದು, ಅವರ ಮೇಲಿನ ದಾಳಿಯಾಗಿದೆ. ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಸೋಲಿನ ನಂತರ ಕಾಂಗ್ರೆಸ್ ಶಾಸಕರ ಹತಾಶರಾಗಿದ್ದಾರೆ ಎಂಬುದನ್ನು ಇದು ಬಿಂಬಿಸುತ್ತದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಭರದ್ವಾಜ್ ಕರೆದಿದ್ದಾರೆ.

ಪ್ರತಿಪಕ್ಷದ ನಾಯಕ ಮುಖೇಶ್ ಅಗ್ನಿಹೋತ್ರಿ ಸೇರಿದಂತೆ ಇತರ ನಾಲ್ಕು ಶಾಸಕರು ಹರ್ಷ್ ವರ್ಧನ್ ಚೌಹಾನ್, ಸುಂದರ್ ಸಿಂಗ್ ಠಾಕೂರ್, ಸತ್ಪಾಲ್ ರೈಜಾಡಾ ಮತ್ತು ವಿನಯ್ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ.

ಅಧಿವೇಶನ ಮಾರ್ಚ್ 20 ರಂದು ಮುಕ್ತಾಯಗೊಳ್ಳಲಿದೆ. ಅಲ್ಲಿಯವರೆಗೂ ಈ ಶಾಸಕರನ್ನು ಅಮಾನತ್ತಿನಲ್ಲಿಡಲಾಗಿದೆ.

ಇದನ್ನೂ ಓದಿ: ಚುನಾವಣಾ ಸಮೀಕ್ಷೆ: ಮೊದಲ ಬಾರಿಗೆ ಪುದುಚೇರಿಯಲ್ಲಿ BJPಗೆ ಅಧಿಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights