ದೇಶದಲ್ಲಿ ಬ್ರಿಟನ್ ಭೂತದ ಭೀತಿ : ಸೋಂಕಿತರ ಸಂಖ್ಯೆ 29ಕ್ಕೇರಿಕೆ…!

ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಕಡಿಮೆಯಾಗುತ್ತಿದ್ದಂತೆ ಬ್ರಿಟನ್ ಹೊಸ ಪ್ರಬೇಧದ ಕೊರೊನಾದ ಭೀತಿ ಹೆಚ್ಚಾಗುತ್ತಿದೆ. ದೇಶದಲ್ಲಿ ಬೆರಳೆಣಿಕೆಯಷ್ಟು ಕಾಣಿಸಿಕೊಂಡ ಬ್ರಿಟನ್ ಭೂತ ಸದ್ಯ ವೇಗವಾಗಿ ಹರಡುತ್ತಿದೆ.

ಭಾರತಲ್ಲಿ ಕಾಲಿಟ್ಟ ಹೊಸ ಕೊರೊನಾ ಈಗಾಗಿ 29 ಜನರಲ್ಲಿ ಕಾಣಿಸಿಕೊಂಡಿದೆ. ಬ್ರಿಟನ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಭಾರಿ ಸದ್ದು ಮಾಡುತ್ತಿದ್ದು ಭಾರತದಲ್ಲಿಯೂ ಇದು ವೇಗವಾಗಿ ಹರಡಿ ಇನ್ನಷ್ಟು ತೊಂದರೆ ಸೃಷ್ಟಿ ಮಾಡುವ ಸಾಧ್ಯತೆ ಇದೆ. ಕಳೆದ ವಾರ ಆರಭಂದಲ್ಲಿಯೇ 6 ಜನರಲ್ಲಿ ಹೊಸ ಕೊರೊನಾ ಕಾಣಿಸಿಕೊಂಡಿತ್ತು. ಕ್ರಮೇಣ ಇದು ಏರಿಕೆಯಾಗಿ ಸದ್ಯ ದೇಶದಲ್ಲಿ ಒಟ್ಟು 29 ಕೇಸ್ ಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಮಾಹಿತಿ ನೀಡಿದೆ.

29 ಸೋಂಕಿತರ ಪೈಕಿ ದೆಹಲಿಯ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ಎನ್‌ಸಿಡಿಸಿ) ಯಲ್ಲಿ 8 ಜನರ ಮಾದರಿಗಳಲ್ಲಿ ರೂಪಾಂತರಿತ ಬ್ರಿಟನ್ ಸೋಂಕು ಪತ್ತೆಯಾಗಿದೆ, ಇಬ್ಬರು ದೆಹಲಿಯ ಇನ್‌ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಅಂಡ್ ಇಂಟಿಗ್ರೇಟಿವ್ ಬಯಾಲಜಿ (ಐಜಿಐಬಿ), ರಾಷ್ಟ್ರೀಯ ಸಂಸ್ಥೆಯಲ್ಲಿ  ಒಬ್ಬರು ಬಯೋಮೆಡಿಕಲ್ ಜೀನೋಮಿಕ್ಸ್ (ಎನ್‌ಐಬಿಎಂಜಿ), ಕಲ್ಯಾಣಿ (ಕೋಲ್ಕತ್ತಾದ ಹತ್ತಿರ), ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯಲ್ಲಿ ಐದು, ಹೈದರಾಬಾದ್‌ನ ಸೆಂಟರ್ ಫಾರ್ ಸೆಲ್ಯುಲಾರ್ ಮತ್ತು ಮಾಲಿಕ್ಯೂಲರ್ ಬಯಾಲಜಿ (ಸಿಸಿಎಂಬಿ) ಯಲ್ಲಿ ಮೂರು ಮತ್ತು ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ  ಸಂಸ್ಥೆಯಲ್ಲಿ ಅನುಕ್ರಮವಾಗಿದೆ ಆಸ್ಪತ್ರೆ (ನಿಮ್ಹಾನ್ಸ್) ಬೆಂಗಳೂರಿನ 10 ಮಾದರಿಗಳಲ್ಲಿ ಬ್ರಿಟನ್ ದೃಢವಾಗಿದೆ.

ಪ್ರಸ್ತುತ ಸೋಂಕಿತರೆಲ್ಲರೂ ಸಂಪರ್ಕ ಪತ್ತೆ ಮಾಡಲಾಗುತ್ತಿದ್ದು, ಸಹ ಪ್ರಯಾಣಿಕರು, ಕುಟುಂಬ ಸಂಪರ್ಕಗಳು ಮತ್ತು ಇತರೆ ಸಂಪರ್ಕಗಳ ಪತ್ತೆ ಕಾರ್ಯ ಮಾಡಲಾಗುತ್ತಿದೆ.ಇನ್ನು ಹೊಸ ರೂಪಾಂತರಿ ಕೊರೋನಾ ವೈರಸ್ ಸೋಂಕಿತ ರಾಷ್ಟ್ರಗಳ ಪಟ್ಟಿ ಕೂಡ ಸೋಂಕಿತರ ಪಟ್ಟಿಯಂತೆಯೇ ಬೆಳೆಯುತ್ತಾ ಸಾಗಿದ್ದು, ಈ ವರೆಗೂ ಡೆನ್ಮಾರ್ಕ್, ನೆದರ್ಲ್ಯಾಂಡ್ಸ್, ಆಸ್ಟ್ರೇಲಿಯಾ, ಇಟಲಿ, ಸ್ವೀಡನ್, ಫ್ರಾನ್ಸ್, ಸ್ಪೇನ್, ಸ್ವಿಟ್ಜರ್ಲೆಂಡ್, ಜರ್ಮನಿ, ಕೆನಡಾ, ಜಪಾನ್, ಲೆಬನಾನ್ ಮತ್ತು ಸಿಂಗಾಪುರ,  ದೇಶಗಳಲ್ಲೂ ಹೊಸ ಮಾದರಿ ಸೋಂಕು ಪತ್ತೆಯಾಗಿದೆ.
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights