ಉತ್ತರಾಖಂಡದಲ್ಲಿ ಕ್ಲೌಡ್‌ಬರ್ಸ್ಟ್ : ಮೂವರು ಸಾವು – ನಾಲ್ವರು ನಾಪತ್ತೆ!

ಉತ್ತರಾಖಂಡದಲ್ಲಿ ಕ್ಲೌಡ್‌ಬರ್ಸ್ಟ್ ನಿಂದಾಗಿ ಮೂವರು ಸಾವನಪ್ಪಿದ್ದು ನಾಲ್ವರು ಕಾಣೆಯಾಗಿದ್ದಾರೆ.

ಉತ್ತರಕಾಶಿ ಜಿಲ್ಲೆಯಲ್ಲಿ ತಡರಾತ್ರಿ ಮೋಡ ಕಡಿದು (ಕ್ಲೌಡ್‌ಬರ್ಸ್ಟ್) ಮೂರು ಜನರು ಸಾವನ್ನಪ್ಪಿದ್ದು ನಾಲ್ವರು ಕಾಣೆಯಾಗಿದ್ದಾರೆ.

“ಉತ್ತರಕಾಶಿ ಜಿಲ್ಲೆಯ ಮಾಂಡೋ ಗ್ರಾಮದಲ್ಲಿ ಕ್ಲೌಡ್‌ಬರ್ಸ್ಟ್ ನಿಂದಾಗಿ ಮೂವರು ಸಾವನ್ನಪ್ಪಿದ್ದು ನಾಲ್ಕು ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ” ಎಂದು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್‌ಡಿಆರ್‌ಎಫ್) ತಂಡದ ಉಸ್ತುವಾರಿ ಇನ್ಸ್‌ಪೆಕ್ಟರ್ ಜಗದಂಬಾ ಪ್ರಸಾದ್ ಹೇಳಿದ್ದಾರೆ.

ಭಾರತೀಯ ಹವಾಮಾನ ಇಲಾಖೆ ಅಥವಾ ಐಎಂಡಿ ಇಂದು ಉತ್ತರಾಖಂಡದ ಮೇಲೆ ಪ್ರತ್ಯೇಕವಾದ, ಅತಿಯಾದ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಪಶ್ಚಿಮ ಹಿಮಾಲಯನ್ ಪ್ರದೇಶ (ಜಮ್ಮು, ಕಾಶ್ಮೀರ, ಲಡಾಖ್, ಗಿಲ್ಗಿಟ್, ಬಾಲ್ಟಿಸ್ತಾನ್ ಮತ್ತು ಮುಜಫರಾಬಾದ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್) ಮತ್ತು ಪಕ್ಕದ ವಾಯುವ್ಯ ಭಾರತದಲ್ಲಿ (ಪಂಜಾಬ್, ಹರಿಯಾಣ, ರಾಜಸ್ಥಾನ, ಯುಪಿ ಮತ್ತು ಉತ್ತರ ಮಧ್ಯಪ್ರದೇಶ) ಸಹ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.

ಕಳೆದ ವಾರ ಭಾರಿ ಮಳೆಯಿಂದ ಉಂಟಾದ ಭೂಕುಸಿತದಿಂದಾಗಿ ಚೀನಾ-ಭಾರತ ಗಡಿಗೆ ಹೋಗುವ ರಿಷಿಕೇಶ-ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಬಂಧಿಸಲಾಗಿದೆ. ನಿರಂತರ ಮಳೆಯಿಂದಾಗಿ ಭೂಕುಸಿತಗೊಂಡು ಮೇ 29 ರಂದು ಹೆದ್ದಾರಿಯನ್ನು ಇದೇ ರೀತಿ ನಿರ್ಬಂಧಿಸಲಾಗಿತ್ತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights